ಯಾದಗಿರಿ, ಸೆ.20: ನಗರದ ಲಘು ವಾಹನ ನಿಲುಗಡೆ ಸ್ಥಳ ಒದಗಿಸಿಕೊಡುವಂತೆ ಗಿರಿನಾಡು ಕಾರು ಚಾಲಕರ ಸಂಘದ ವತಿಯಿಂದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರರಿಗೆ ಮತ್ತು ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ರಿಗೆ ಸನ್ಮಾನಿಸಿ ಗೌರವಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕೆ,. ಮುದ್ನಾಳ, ಜಿಲ್ಲೆಯಾಗಿ 13 ವರ್ಷಗಳೇ ಕಳೆದರೂ ಇದುವರೆಗೆ ಸಾಕಷ್ಟು ಹೋರಾಟ ನಡೆಸಿದರೂ ಮನವಿ ಸಲ್ಲಿಸಿದ್ದರೂ, ಪತ್ರಿಕೆ ಟಿವಿ ಮಾಧ್ಯಮದಲ್ಲಿ ಸುದ್ದಿಯಾದರೂ ಸಹ ಇದುವರೆಗೆ ಲಘುವಾಹನ ಚಾಲಕರಿಗೆ ಒಂದು ಟ್ಯಾಕ್ಸಿ ಸ್ಟ್ಯಾಂಡ್ ಒದಗಿಸುವಲ್ಲಿ ವಿಫಲರಾಗಿದ್ದಾರೆ.
ಇಂದಿಗೂ ಲಘು ವಾಹನ ಚಾಲಕರು ರಸ್ತೆ ಬದಿಯಲ್ಲಿಯೇ ನಿಂತು ತಮ್ಮ ವ್ಯವಹಾರ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ತೆರಿಗೆ ಕಟ್ಟುವಲ್ಲಿ ಚಾಲಕರು ಮತ್ತು ಮಾಲಕರು ಮೊದಲ ಸ್ಥಾನದಲ್ಲಿದ್ದಾರೆ. ಏಕೆಂದರೆ ತೆರಿಗೆ ಪಾವತಿಸಿದ ನಂತರವೇ ವಾಹನವನ್ನು ರಸ್ತೆಗೆ ಇಳಿಸಲಾಗುತ್ತದೆ. ಇನ್ಸುರೆನ್ಸ್ ಪಾವತಿ ಮಾಡಿದ ಮೇಲೆಯೇ ವಾಹನ ಬಳಕೆಗೆ ಆರಂಭವಾಗುತ್ತದೆ. ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಮುಂಗಡವಾಗಿಯೇ ತೆರಿಗೆ ಪಾವತಿಸುವ ಇಂತಹ ವಾಹನ ಮಾಲಕರು ಮತ್ತು ಚಾಲಕರುಗಳಿಗೆ ಸೌಲತ್ತು ನೀಡುವಲ್ಲಿ ಜಿಲ್ಲೆಯಲ್ಲಿ ಇದುವರೆಗೆ ಸಾಧ್ಯವಾಗಿಲ್ಲ.
ಅದರಲ್ಲೂ ವಿಶೇಷವಾಗಿ ಜಿಲ್ಲೆಯಾದ ನಂತರ ಹೊರಗಿನವರೇ ಸಚಿವರಾಗಿದ್ದು ಅವರ ನಿರ್ಲಕ್ಷ್ಯ ತಾಳಿದ್ದರಿಂದ ಕೆಲಸ ಆಗಿಲ್ಲ. ಈಗ ಸ್ವತಃ ಜಿಲ್ಲೆಯವರೇ ಸಚಿವರಾಗಿದ್ದಿರಿ ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಚಿವರಿಗೆ ಮನವಿ ಮಾಡಿದರು.
ಮನವಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ದರ್ಶನಾಪೂರ, ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಸೂಚಿಸಿದರು. ಮತ್ತು ಸ್ಥಳದಲ್ಲಿ ಮೂಲಭೂತ ಸೌಕರ್ಯಗಳಾದ ಕೊಳವೆಬಾವಿ, ಶೇಡ್ ನಿರ್ಮಾಣ ಶೌಚಾಲಯ ವ್ಯವಸ್ಥೆ ಮಾಡಿಕೊಡಲು ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗಿರಿನಾಡು ಕಾರು ಚಾಲಕರ ಸಂಘದ ಜಿಲ್ಲಾಧ್ಯಕ್ಷ ಬಸಣ್ಣಗೌಡ ಇಟಗಿ, ಉಪಾಧ್ಯಕ್ಷ ಶಿವ ಶರಣಪ್ಪ ನಾರಣಪೇಟ್, ಖಜಾಂಚಿ ಸಾಬಯ್ಯ. ಗುತ್ತೇದಾರ್ ಸದಸ್ಯರಾದ ಶರಣು ಜೋತ, ಅಶೋಕ್ ಸಜ್ಜನ್, ವೆಂಕಟರೆಡ್ಡಿ ನಾಯ್ಕಲ್, ರಸಿದ್ ಪಾμÁ, ಬಾಬಾ ಸಲೀಂ, ಶೇಕ್, ಸಂತೋμï ರಾಥೋಡ್, ಬಾಬಾ ಪಟೇಲ್, ಸಾಬೀರ್, ಬಂದಪ್ಪ ಅಕ್ಕಿ, ಸಿದ್ದು ಉಮೇಶ್, ಸದಾಶಿವ ವಿಶ್ವನಾಥ್ ನವೀನ್, ಬಸ್ಸು, ಅಕ್ರಂ, ಜಮಲ್, ರಫೀಕ್, ಬಸ್ಸು, ಮೈನುದ್ದಿನ್, ಶರಣು ಹೊಸಮನಿ, ಅಪ್ಸರ್, ಬೀರಪ್ಪ, ಮಹೇಶ್ ಹೊಸಮನಿ, ದಿಲೀಪ್, ಅಜಿತ್, ನೈಮ್, ಬನಶಂಕರ್, ವಿಶ್ವ ಸ್ವಾಮಿ, ವಿಜಯಕುಮಾರ್, ಕಾಡಪ್ಪ, ವೀರೇಶ್ ಗೌಡ, ಮೌಲ, ಗೌಸ್, ರಿಯಾಜ್, ದೇವರಾಜ್ ಕುಮನೂರ್, ಷಡಕ್ಷಯ ಸ್ವಾಮಿ, ಅಯ್ಯಣ್ಣ, ಮೈಬೂಬ್, ಭೀಮು ಪೂಜಾರಿ, ತಾಯಪ್ಪ ಕೊಹಿಲೂರ್ ಸೇರಿದಂತೆ ಅನೇಕರಿದ್ದರು.