ಯಾದಗಿರಿ ಅಂದಾಜು ಪ್ರತಿಶತ 66.66 ರಷ್ಟು ಮತದಾನ :ಜಿಲ್ಲಾಧಿಕಾರಿ ಸ್ನೇಹಲ್.ಆರ್

ಯಾದಗಿರಿ : ಮೇ 11 : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಿಲ್ಲೆಯಾದ್ಯಂತ ಮತದಾನವು ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಪ್ರತಿಶತ-ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶ್ರೀಮತಿ ಸ್ನೇಹಲ್.ಆರ್ ಅವರು ತಿಳಿಸಿದ್ದಾರೆ.
ಜಿಲ್ಲೆಯ 36-ಶೋರಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಶತ 68% ರಷ್ಟು ಮತದಾನವಾಗಿದೆ. 37-ಶಹಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಶತ 69.26% ರಷ್ಟು ಮತದಾನವಾಗಿದೆ. ಅದರಂತೆ 38-ಯಾದಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಶತ 64.53% ರಷ್ಟು ಹಾಗೂ 39-ಗುರುಮಿಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿಶತ 64.7% ರಷ್ಟು ಮತದಾನವಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು ಅಂದಾಜು ಪ್ರತಿಶತ 66.66% ರಷ್ಟು ಮತದಾನವಾಗಿದೆ.
ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ ಶೋರಾಪುರ, ಶಹಾಪುರ, ಯಾದಗಿರಿ ಮತ್ತು ಗುರುಮಿಠಕಲ್ ಕ್ಷೇತ್ರಗಳಲ್ಲಿ ಒಟ್ಟು 9,99,959 ಮತದಾರರಿದ್ದು, ಅದರಲ್ಲಿ 4,98,648 ಮಹಿಳಾ ಮತದಾರರು, 5,01,254 ಪುರುಷ ಮತದಾರರು ಹಾಗೂ 57 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಇದ್ದಾರೆ.
ಶೋರಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 139039 ಪುರುಷ ಮತದಾರರು, 136359 ಮಹಿಳಾ ಮತದಾರರು ಹಾಗೂ ಇತರೆ 21 ಮತದಾರರು ಸೇರಿದಂತೆ ಒಟ್ಟು 275419 ಮತದಾರರು ಇದ್ದಾರೆ.
ಅದರಂತೆ 37 ಶಹಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 119897 ಪುರುಷ ಮತದಾರರು ಹಾಗೂ 119037 ಮಹಿಳಾ ಮತದಾರರು ಹಾಗೂ 16 ಇತರೆ ಮತದಾರರು ಸೇರಿದಂತೆ ಒಟ್ಟು 238950 ಮತದಾರರಿದ್ದಾರೆ.
38-ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 118471 ಪುರುಷ ಮತದಾರರು ಹಾಗೂ 118935 ಮಹಿಳಾ ಮತದಾರರು, 17 ಇತರೆ ಮತದಾರರು ಸೇರಿದಂತೆ ಒಟ್ಟು 237423 ಮತದಾರರಿದ್ದಾರೆ.
39-ಗುರುಮಿಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 123847 ಪುರುಷ ಮತದಾರರು ಹಾಗೂ 124317 ಮಹಿಳಾ ಮತದಾರರು ಮತ್ತು 3 ಇತರೆ ಮತದಾರರು ಸೇರಿದಂತೆ ಒಟ್ಟು 248167 ಮತದಾರರಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ಒಟ್ಟು 1135 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತ ಏಣಿಕೆಯು ದಿನಾಂಕ 13-05-2023 ರಂದು ಯಾದಗಿರಿ ನಗರದ ಸರಕಾರಿ ಪದವಿ ಪೂರ್ವ ಕಾಲೇಜು (ಸ್ವಪ್ನಾ ಮೈದಾನ ) ಇಲ್ಲಿ ಬೆಳಿಗ್ಗೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಕರ್ತರಿಂದ ಚುನಾವಣಾ ಪ್ರಕ್ರಿಯೆ ವೀಕ್ಷಣೆ : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮತದಾನ ಪ್ರಕ್ರಿಯೆ ವೀಕ್ಷಣೆಗಾಗಿ ಇಂದು ಬೆಳಿಗ್ಗೆ 39-ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಂದಳ್ಳಿ ಮತಗಟ್ಟೆ ಸಂಖ್ಯೆ 72, ಸಖಿ/ ಪಿಂಕ್ ಮತಗಟ್ಟೆ ಸಂಖ್ಯೆ 73, 71, ಚಾಮನಳ್ಳಿ ಸಖಿ ಮತಗಟ್ಟೆ ಸಂಖ್ಯೆ 66, 67, ಮತಗಟ್ಟೆ ಸಂಖ್ಯೆ 166, ಕೊಂಕಲ್ ಮತಗಟ್ಟೆ ಸಂಖ್ಯೆ 168 ಹಾಗೂ 38-ಯಾದಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೋಳಿವಾಡ ಇಲ್ಲಿನ ಮತಗಟ್ಟೆಗೆ ಭೇಟಿ ನೀಡಿ ವಾರ್ತಾ ಇಲಾಖೆ ಹಮ್ಮಿಕೊಂಡಿದ್ದ ಪ್ರವಾಸದ ಸಂದರ್ಭದಲ್ಲಿ ಅವಶ್ಯಕ ಮಾಹಿತಿಯನ್ನು ಪಡೆದರು. ಮಹಿಳೆಯರು ಹಾಗೂ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವುದು ಕಂಡುಬಂತು. ಮತದಾನವು ಶಾಂತಿಯುತವಾಗಿ ನಡೆಯುತ್ತಿರುವುದು ಕಂಡುಬಂತು.