ಯಾದಗಿರಿಯ 88 ವರ್ಷದ ಅನಾಥ ವೃದ್ದೆಗೆ ಸಿಂಧನೂರಿನ ಕಾರುಣ್ಯಾಶ್ರಮದ ನೆರಳು !

ಯಾದಗಿರಿ:ಎ.18: ನಗರದಲ್ಲಿ ಅನಾಥವಾಗಿ ಜೀವನ ನಡೆಸುತ್ತಿದ್ದ ವಯೋವೃದ್ಧೆಯನ್ನು ರಾಯಚೂರು ಜಿಲ್ಲೆಯ ಹರೇಟನೂರು ಶ್ರೀಮಠ ಸೇವಾ ಟ್ರಸ್ಟ್ ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮಕ್ಕೆ ಸೇರ್ಪಡೆ ಮಾಡಲಾಯಿತು.
ನಗರದ ಸರ್ಕಾರಿ ಆಸ್ಪ[ತ್ರೆಯ ಆವರಣದಲ್ಲಿಯೇ ಸುಮಾರು ದಿನಗಳಿಂದ ಅನಾಥೆಯಾಗಿ ಉಳಿದುಕೊಂಡು ತನ್ನ ಬಗ್ಗೆ ತನಗೆ ಪ್ರಜ್ಞೆ ಇಲ್ಲದೇ ಇದ್ದ, ಸುಮಾರು 88 ವರ್ಷದ ಯಲ್ಲಮ್ಮ ಎಂಬ ವೃದ್ದೆಯನ್ನು ಕಾರಣ್ಯ ನೆಲೆ ವೃದ್ಧಾಶ್ರಮಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಆಶ್ರಮದ ಆಡಳಿತಾಧಿಕಾರಿ ಶ್ರೀ ಚೆನ್ನಬಸವ ಸ್ವಾಮಿ ಹಿರೇಮಠ ತಿಳಿಸಿದರು.
ನಗರದ ಶ್ರೀ ಬಾಲಾಜಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಹಾಗೂ ಹಿರಿಯ ನಾಗರಿಕರ ಅಧಿಕಾರಿಗಳ ಮಾಹಿತಿಯ ಮೇರೆಗೆ ಶನಿವಾರ ನಗರಕ್ಕೆ
ಆಗಮಿಸಿ ನಮ್ಮ ಸಂಸ್ಥೆಯ ವಶಕ್ಕೆ ಒಪ್ಪಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾಲಾಜಿ ಸಂಸ್ಥೆಯ ಕಾರ್ಯದರ್ಶಿ ಆರ್. ವಿಶ್ವನಾಥರೆಡ್ಡಿ, ಅಂಗವಿಕಲರ ಕಲ್ಯಾಣ ಇಲಾಖೆ ಮಾಹಿತಿ ಸಲಹೆಗಾರರಾದ ಶರಣಪ್ಪ ಹಳಿಗೇರಾ, ಅಕ್ಷತ ಮಹಿಳಾ ಮಂಡಳಿ ವೃದ್ದಾಶ್ರಮ ವ್ಯವಸ್ಥಾಪಕ ಮಾಣಿಕ್ ಪ್ರಭು, ಸಿಬ್ಬಂದಿಗಳಾದ ಸೈಯದ್, ಅನಿಲ್ ರಾಠೋಡ್, ಸಿದ್ದಮ್ಮ ಇವರ ಮಾಹಿತಿಯ ಮೇರೆಗೆ ನಮ್ಮ ಆಶ್ರಮಕ್ಕೆ ಒಪ್ಪಿಸಿ ಕೊಳ್ಳಲಾಗಿದೆ ಎಂದು ಪತ್ರಿಕೆಗೆ ತಿಳಿಸಿದರು.
ಈ ವೃದ್ದೆಯ ಸಂಪೂರ್ಣ ಜವಾಬ್ದಾರಿಯನ್ನು ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ತಮ್ಮ ಕಾರುಣ್ಯ ನೆಲೆ ವೃದ್ರಾಶ್ರಮದ್ದಾಗಿದ್ದು ಈ ಕಾರ್ಯದಲ್ಲಿ ನಮ್ಮ ಜೊತೆಗೆ ವಯಸ್ಕರ ಬುದ್ದಿಮಾಂದ್ಯ ಆಶ್ರಮ ಮತ್ತು ಸಿಬ್ಬಂದಿಗಳಾದ ಪಂಪಯ್ಯ ಸ್ವಾಮಿ, ರಾಚಯ್ಯ ಸ್ವಾಮಿ ಹಿರೇಮಠ ಐಕೂರು, ರತ್ನ, ಪವನಕುಮಾರ, ಸಂಗನಗೌಡ ಗೋನವಾರ, ಸುಭಾಷ್ ಕರೆಪ್ಪ ಗೌಡ ನೆರವಾದರು ಎಂದು ತಿಳಿಸಿದರು.
ಸದರಿ ವೃದ್ಧೆಗೆ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಅಧಿಕಾರಿ ಗಾಲಿ ಕುರ್ಚಿಯನ್ನು ಹಾಗೂ ಬಾಲಾಜಿ ಸಂಸ್ಥೆಯವರು ಹಾಸಿಗೆಗಳನ್ನು ಸಂಸ್ತೆಗೆ ದೇಣಿಗೆಯಾಗಿ ನೀಡಿದರು.
ಅನಾಥರು ನಿರ್ಗತಿಕರು ಇದ್ದಲ್ಲಿ ತಮ್ಮ ವಿಳಾಸಕ್ಕೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು. ಮಾಹಿತಿ ನೀಡಲು ಜಂಗಮವಾಣಿ ಸಂಖ್ಯೆ: 9731983111 / ವೃದ್ಧಾಶ್ರಮಕ್ಕೆ ಸಹಾಯ ಮಾಡಲಿಚ್ಛಿಸುವವರು ಗೂಗಲ್ ಪೇ ನಂ: 9110858985 ಸಂಖ್ಯೆಗೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.