ಧಾರವಾಡ, ಮಾ.23: ರಾಜ್ಯ ಕೈಮಗ್ಗ, ಜವಳಿ ಮತ್ತು ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಸುಳ್ಳ ಗ್ರಾಮದಲ್ಲಿನ ಪಂಚಗೃಹ ಹಿರೇಮಠದ ಆವರಣದಲ್ಲಿ ವೀರಸೋಮೇಶ್ವರ ಯಾತ್ರಿ ನಿವಾಸ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಜಿಲ್ಲೆಯ ಪ್ರತಿ ಮನೆ ಮನೆಗೆ ಕುಡಿಯಲು ಮಲಪ್ರಭಾ ನದಿ ನೀರು ಸರಬರಾಜು ಮಾಡಲು ಜಲ್ ಜೀವನ್ ಮಿಷನ್ ಯೋಜನೆ ಅನುμÁ್ಠನಗೊಳಿಸಲಾಗಿದೆ. ಸುಳ್ಳ – ಹೆಬ್ಬಸೂರ ರಸ್ತೆ ಕಾಮಗಾರಿಗೆ 17 ಕೋಟಿ, ಬ್ಯಾಹಟ್ಟಿ -ಸುಳ್ಳ ರಸ್ತೆ ಅಭಿವೃದ್ಧಿಗೆ 6.5 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಸುಳ್ಳ ಗ್ರಾಮದ ಪ್ರಸಿದ್ಧ ಕಲ್ಮೇಶ್ವರ ದೇವಸ್ಥಾನ ಅಭಿವೃದ್ಧಿಗೆ 25 ಲಕ್ಷ ಹಾಗೂ ಪಂಚಗೃಹ ಹಿರೇಮಠ ಆವರಣದಲ್ಲಿ ಶ್ರೀ ವೀರಸೋಮೇಶ್ವರ ಯಾತ್ರಿ ನಿವಾಸ ನಿರ್ಮಿಸಲು 25 ಲಕ್ಷ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚಿÀ್ಚನ ಅನುದಾನ ನೀಡಲಾಗುವುದು ಎಂದು ಸಚಿವರು ಹೇಳಿದರು.
ಕಲ್ಮೇಶ್ವರ ದೇವಸ್ಥಾನದ ಆರ್ಚಕ ಸಣಕಲ್ಲಪ್ಪ ಒಂಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸುಳ್ಳ ಗ್ರಾಮ ಪಂಚಾಯತ ಉಪಾಧ್ಯಕ್ಷ ಬಸವರಾಜ ಸಂಗಳ, ಗ್ರಾಮದ ಪ್ರಮುಖರಾದ ಮುದಕಣ್ಣ ಹೆಬ್ಬಾಳ, ಬಸಣ್ಣ ಮತ್ತಿಹಳ್ಳಿ, ಅರ್ಜುನಪ್ಪ ಮೆಣಸಿನಕಾಯಿ, ಈರಣ್ಣ ಸಾಲಿ, ಮಲ್ಲಿಕಾರ್ಜುನ ಅಸುಂಡಿ, ಸತೀಶ ದ್ಯಾಮಕ್ಕನವರ, ಸಿದ್ರಾಮಪ್ಪ ಹೊಸಮನಿ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಮಹಿಳಾ ಮಂಡಳ ಸದಸ್ಯರು, ಗ್ರಾಮಸ್ಥರು ಭಾಗವಹಿದ್ದರು.