ಯಾತ್ರಿ ನಿವಾಸ ಕಾಮಗಾರಿಗೆ ಶಾಸಕರಿಂದ ಚಾಲನೆ

ರಾಯಚೂರು.ಜ.೧೧- ನಗರದ ವಾರ್ಡ್ ನಂ.೫ರಲ್ಲಿ ಬರುವ ಬಸವೇಶ್ವರ ಕಾಲೋನಿಯ ಈಶ್ವರ ದೇವಸ್ಥಾನದ ಹತ್ತಿರ ೫೦ಲಕ್ಷ ರೂಪಾಯಿಗಳ ಯಾತ್ರಿನಿವಾಸಭವನ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಸ್. ಶಿವರಾಜ ಪಾಟೀಲ್ ಅವರು ಭೂಮಿ ಪೂಜೆ ನೆರವೇರಿಸಿದರು.
ಯಾತ್ರಿನಿವಾಸ ಭವನದ ಕಾಮಗಾರಿಯನ್ನು ಗುಣಮಟ್ಟ ಕಾಪಾಡಿಕೊಂಡು ನಿರ್ಮಿಸಬೇಕು. ಅಧಿಕಾರಿಗಳು ಈ ಕುರಿತು ಗಮನ ವಹಿಸಬೇಕು ಎಂದು ಸೂಚನೆ ನೀಡಿದರು.