ಯಾತ್ರಾರ್ಥಿಗಳಿಗೆ ಸನ್ಮಾನ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಸೆ23 : ಪಟ್ಟಣದ ದೂದ್ ಪೀರಾಂ ದರ್ಗಾದ ಶಾದಿ ಮಹಲ್ ನಲ್ಲಿ ಇತ್ತೀಚೆಗೆ ಉಮ್ರಾ ಯಾತ್ರೆಗೆ ತೆರಳಿದ ಯಾತ್ರಾರ್ಥಿಗಳ ನ್ನು ಶಾದಿ ಮಹಲ್ ನಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿಎಸ್ ಗಡ್ಡದೇವರ ಮಠ ಅವರು ಮಾತನಾಡಿ, ಯಾವುದೇ ಧರ್ಮ ಜನಾಂಗಗಳಿರಲಿ ಧರ್ಮವು ಸತ್ಯಾಶಾಂತಿ ಮತ್ತು ಅಹಿಂಸೆ ಯನ್ನು ಪ್ರತಿಪಾದಿಸುತ್ತವೆ ಆದ್ದರಿಂದ ಎಲ್ಲರೂ ಸರ್ವ ಜನಾಂಗದ ಶಾಂತಿಯ ತೋಟವಾಗಿ ಬಾಳಿ ಬದುಕಬೇಕು ಎಂದು ಹೇಳಿದರು.
ದೂದಪೀರಾ ದರ್ಗಾ ಕಮಿಟಿ ಮತ್ತು ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಯಾತ್ರಿಕರನ್ನು ಮತ್ತು ಮಾಜಿ ಶಾಸಕ ಗಡ್ಡ ದೇವರ ಮಠ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದರ್ಗಾ ಕಮಿಟಿಯ ಅಧ್ಯಕ್ಷರಾದ ಸುಲೇಮಾನ್ ಕಣಿಕೆ ಅಂಜುಮನ್ ಕಮಿಟಿ ಅಧ್ಯಕ್ಷರಾದ ಎಂ ಎಂ ಗದಗ ಬಡೆ ಲಂಕಾ ಪತಿ ಚೋಟಿಲಂಕಾಪತಿ ಅಧ್ಯಕ್ಷರಾದ ದಾದಾಪೀರ್ ಮುಚ್ಚಾಲೆ ಸಾಹೀಬ್ ಜಾನ್ ಹವಾಲ್ದಾರ್ ಇರ್ಫಾನ್ ಬೇಗ್ ಮಿರಜಾ ದಾದಾಪೀರ್ ಕಾರಡಗಿ ಶಫೀಕ್ ಅಹ್ಮದ್ ಸಿದ್ದಾಪುರ ಇಕ್ಬಾಲ್ ಅಹ್ಮದ್ ಸೂರಣಗಿ ಸೇರಿದಂತೆ ಅನೇಕರಿದ್ದರು.