ಯಾತನೂರ ಬಳಿ ಉದ್ಯಮಿ ಕೊಲೆ

ಕಲಬುರಗಿ:ಮಾ.20:ಜೇವರ್ಗಿ ತಾಲೂಕಿನ ಯಾತನೂರ ಬಳಿಯಲ್ಲಿ ಶನಿವಾರ ರಾತ್ರಿ ಉದ್ಯಮಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.
ಸಂಗನಗೌಡ ನಿಂಗನಗೌಡ ಪೆÇಲೀಸ್ ಪಾಟೀಲ ಎಂಬುವರೇ ಕೊಲೆಯಾದವರು. ಜೇರಟಗಿಯಲ್ಲಿ ಅಡತ್ ವ್ಯಾಪಾರ ಮಾಡಿಕೊಂಡಿದ್ದರು.
ಶನಿವಾರ ರಾತ್ರಿ ಬೈಕ್ ಮೇಲೆ ಯಾತನೂರ ಗ್ರಾಮಕ್ಕೆ ಹೋಗುತ್ತಿರುವಾಗ ಊರಿನ ಸಮೀಪದ ಮಡ್ಡಿಯ ಸಮೀಪದಲ್ಲಿ ದುಷ್ಕರ್ಮಿಗಳು ವಾಹನದಲ್ಲಿ ಬಂದು ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಯನ್ನು ಯಾರು ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಸ್ಥಳಕ್ಕೆ ಪೆÇಲೀಸರು ದೌಡಾಯಿಸಿ ಪರಿಶೀಲಿಸಿದ್ದಾರೆ. ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ