ಯಾಟಗಲ್ ಉತ್ತಮ ಶಿಕ್ಷಕ ಪ್ರಶಸ್ತಿ

ದೇವದುರ್ಗ.ಸೆ.೨೪-ಪಟ್ಟಣದ ಶರಣಪ್ಪ ಖೇಣೇದ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಹಾಗೂ ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಸವರಾಜ ಯಾಟಗಲ್‌ಗೆ ಉತ್ತಮ ಶಿಕ್ಷಕ ಪ್ರಸಸ್ತಿ ಲಭಿಸಿದೆ. ರಾಯಚೂರಿನಲ್ಲಿ ಲಯನ್ಸ್ ಕ್ಲಬ್ ಹಾಗೂ ಇನ್ನರ್ ವೇರ್ ಕ್ಲಬ್‌ವತಿಯಿಂದ ಆಯೋಜಿಸಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಉತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರ ಸಾಧನೆಗೆ ಶಿಕ್ಷಕರ ವರ್ಗ, ಮಕ್ಕಳು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಶಿಕ್ಷಕಿ ಗೀತಾ ಬಡಿಗೇರ್, ಕ್ಲಬ್ ನಿರ್ದೇಶಕ ಎನ್.ಶಿವಶಂಕರ್, ಶಿಕ್ಷಕರಾದ ಕಾಶಪ್ಪ ಬುದ್ದ, ನಾಗಭೂಷಣ್, ಉಮಾದೇವಿ ಇತರರಿದ್ದರು.