ಕೋಲಾರ,ಜೂ.೨೨- ಕೋಲಾರದ ಜಿಲ್ಲಾ ಶ್ರೀ ಯಾಜ್ಞವಲ್ಕ್ಯ ಸೇವಾ ಟ್ರಸ್ಟ್ ವತಿಯಿಂದ ನಿವೃತ್ತ ಅರಣ್ಯ ಅಧಿಕಾರಿ ಪುರುಷೋತ್ತಮರಾವ್ ರವರ ಉಪಸ್ಥಿತಿಯಲ್ಲಿ ಬ್ರಾಹ್ಮಣ ವಿಧ್ಯಾರ್ಥಿಗಳಿಗೆ ಪ್ರೊತ್ಸಾಹ ಧನ ವಿತರಣಾ ಕಾರ್ಯಕ್ರಮವನ್ನು ನಗರದ ಸಪಲಮ್ಮ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಅಶ್ವಥ್ ನಾರಾಯಣ ಹಾಗೂ ಕಾರ್ಯಾಧ್ಯಕ್ಷ ಕೆ.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಖಜಾಂಚಿ ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರೆ, ವಿಶ್ವಸ್ಥ ಜನಾರ್ಧನ್ ಸ್ವಾಗತಿಸಿದರು. ರವೀಂದ್ರ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯದರ್ಶಿ ಎಂ.ಕೆ.ಸತ್ಯನಾರಾಯಣ ವಂದಿಸಿದರು. ವಿಶ್ವಸ್ಥರಾದ ವಿಶ್ವನಾಥ್ ಹಾಗೂ ಪ್ರೋತ್ಸಾಹಧನ ಸ್ವೀಕರಿಸಿದ ಮಕ್ಕಳೊಂದಿಗೆ ಪೋಷಕರು ಉಪಸ್ಥಿತರಿದ್ದರು.
ಶ್ರೀ ಯಾಜ್ಞವಲ್ಕ್ಯರು ಸೂರ್ಯನ ವೇಗದಲ್ಲಿ ಚಲಿಸಿ ಶುಕ್ಲಯಜುರ್ವೇದ ಪ್ರಪಂಚಕ್ಕೆ ತಂದರು. ಅವರಲ್ಲಿದ್ದ ಸಾಧಿಸುವ ಛಲ ಅವರ ಅನುಯಾಯಿಗಳಾದ ನಮ್ಮಲ್ಲೂ ಸಹ ಇರಬೇಕು. ವಿದ್ಯೆ ಹಾಗು ಸಾಧನೆಗಳಿಗೆ ಬಡತನ ಕಾರಣವಾಗಬಾರದು. ಶ್ರಮ ಪಟ್ಟು ಗುರಿಯನ್ನು ಸಾಧಿಸಲು ಮಕ್ಕಳಿಗೆ ಮುಖ್ಯ ಅತಿಥಿಗಳು ಕಿವಿಮಾತು ಹೇಳಿದರು.