
ಬಹುನಿರೀಕ್ಷಿತ ಚಿತ್ರ ಕೆ.ಜಿಎಫ್ -2 ಚಿತ್ರದ ಟೀಸರ್ ನಟ ಯಶ್ ಅವರ ಹುಟ್ಟುಹಬ್ಬಕ್ಕೆ ಚಿತ್ರ ತಂಡ ಬಿಡುಗಡೆ ಮಾಡುವ ಮೂಲಕ ಉಡುಗೊರೆ ನೀಡಲು ಚಿತ್ರತಂಡ ಮುಂದಾಗಿದೆ.
ಜನವರಿ 8 ರಂದು ಚಿತ್ರದ ಎರಡನೇ ಟೀಸರ್ ಬಿಡಿಗಡೆ ಮಾಡುವುದಾಗಿ ತಂಡ ಪ್ರಕಟಿಸಿದೆ.
ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿಯೇ ಮೂಡಿ ಬಂದಿದ್ದು, ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಮುಂತಾದ ತಾರಾಗಣ ಹೊಂದಿದೆ.
ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣ, ರವಿ ಬಸರೂರ್ ಅವರೇ ಮತ್ತೊಮ್ಮೆ ಮನಸೂರೆಗೊಳ್ಳುವ ಸಂಗೀತ ಸಂಯೋಜಿಸಿದ್ದಾರೆ.
ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಲಾಗುತ್ತದೆ ಎಂದು ನಿರ್ಮಾಪಕ ವಿಜಯ್ ಕಿರಂಗದೂರು ಮಾಹಿತಿ ನೀಡಿದ್ದಾರೆ.