ಯಶ್ ಜೊತೆ ದಿಲ್ ರಾಜು ಸಿನಿಮಾ

ಬೆಂಗಳೂರು, ಏ ೬- ತೀವ್ರ ಕುತೂಹಲ ಕೆರಳಿಸಿದ್ದ ರಾಕಿಂಗ್‌ಸ್ಟಾರ್‌ಯಶ್‌ಮುಂದಿನ ಸಿನಿಮಾ ಬಗ್ಗೆ ಭಾರಿ ಸುದ್ದಿಯೊಂದು ಬಹಿರಂಗವಾಗಿದೆ.

ಹೌದು ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಅವರ ಪೋಸ್ಟ್ ವೈರಲ್ ಆಗಿದ್ದು. ಯಶ್ ೧೯ನೇ ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡುತ್ತಾರೆ ಎನ್ನಲಾಗಿದೆ.

ಯಶ್ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ’ಕೆಜಿಎಫ್ ೨’ ತೆರೆಕಂಡ ಬಳಿಕ ಅವರು ದೊಡ್ಡ ಬ್ರೇಕ್ ಪಡೆದಿದ್ದಾರೆ. ಯಶ್ ಮುಂದಿನ ಸಿನಿಮಾ ಬಗ್ಗೆ ಈವರೆಗೆ ಯಾವುದೇ ಅಪ್ಡೆಡೇಟ್ ಸಿಕ್ಕಿಲ್ಲ. ಈ ಮಧ್ಯೆ ದಿಲ್ ರಾಜು ಅವರ ಪೋಸ್ಟ್ ವೈರಲ್ ಆಗಿದೆ. ಯಶ್ ೧೯ನೇ ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡುತ್ತಾರಾ ಎನ್ನುವ ಪ್ರಶ್ನೆಯೂ ಮೂಡಿದೆ.
ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮೂಲಕ ದಿಲ್ ರಾಜು ಅವರು ಬಂಡವಾಳ ಹೂಡುತ್ತಾರೆ. ಇತ್ತೀಚೆಗೆ ಟ್ವಿಟರ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಲಾಯಿತು. ಈ ವೇಳೆ ಯಶ್ ಅಭಿಮಾನಿಯೊಬ್ಬರು ದಿಲ್ ರಾಜುಗೆ ಪ್ರಶ್ನೆ ಕೇಳಿದರು. ’ಯಶ್ ಜೊತೆ ಸಿನಿಮಾ ನಿರೀಕ್ಷಿಸಬಹುದೇ’ ಎಂದು ಕೇಳಲಾಯಿತು. ಇದಕ್ಕೆ ದಿಲ್ ರಾಜು ಪರವಾಗಿ ಉತ್ತರಿಸಿರುವ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ’ಹೌದು’ ಎನ್ನುವ ಉತ್ತರ ನೀಡಿದೆ.

ಸದ್ಯ ಈ ಟ್ವೀಟ್ ವೈರಲ್ ಆಗುತ್ತಿದೆ. ಯಶ್ ಮುಂದಿನ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರ್ಮಾಣ ಆಗಲಿದೆ ಎಂಬ ಅಂದಾಜು ಅಭಿಮಾನಿಗಳಿಗೆ ಇದೆ. ಆದರೆ, ಈ ಚಿತ್ರವನ್ನು ಯಾರು ನಿರ್ಮಾಣ ಮಾಡುತ್ತಾರೆ, ಯಾರು ನಿರ್ದೇಶನ ಮಾಡುತ್ತಾರೆ ಅನ್ನೋದು ಈವರೆಗೆ ರಿವೀಲ್ ಆಗಿಲ್ಲ. ಯಶ್ ೧೯ನೇ ಚಿತ್ರಕ್ಕೆ ದಿಲ್ ರಾಜು ಅವರೇ ಬಂಡವಾಳ ಹೂಡಲಿ ಎಂದು ಎಲ್ಲರೂ ಕೋರುತ್ತಿದ್ದಾರೆ.