ಯಶಸ್ಸಿನ ರಹಸ್ಯ ಏಕಾಗ್ರತೆಯಲ್ಲಿ


ಧಾರವಾಡ,ಜ.26: ಯಶಸ್ಸಿನ ರಹಸ್ಯವಿರುವುದೇಏಕಾಗ್ರತೆಯಲ್ಲಿ. ನಿರಂತರ ಪರಿಶ್ರಮದಿಂದ ವಿದ್ಯಾರ್ಥಿಗಳು ಜೀವನದಲ್ಲಿಎಂತಹ ಮಹತ್ಕಾರ್ಯವನ್ನಾದರೂ ಸಾಧಿಸಬಹುದುಎಂದು ಹುಬ್ಬಳ್ಳಿ ಗ್ರಾಮೀಣಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ಹುಬ್ಬಳ್ಳಿ ತಾಲೂಕಿನ ರಾಯನಾಳದ ಶ್ರೀ ರೇವಣಸಿದ್ಧೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲದಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ `ಅಧ್ಯಯನದಲ್ಲಿಏಕಾಗ್ರತೆ ಸಾಧಿಸುವುದು ಹೇಗೆ?’ಉಪನ್ಯಾಸ ಹಾಗೂ ಸಂವಾದಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ವಿದ್ಯಾರ್ಥಿಗಳು ದೃಢ ಸಂಕಲ್ಪ, ಸಾಧನೆ ಮಾಡುತ್ತೇನೆಂಬ ಛಲದಿಂದಅಧ್ಯಯನ ನಿರತರಾದರೆ ಪರೀಕ್ಷೆಯಲ್ಲಿಖಂಡಿತಜಯ ಸಾಧಿಸಬಹುದು.ಅನೇಕ ಕೊರತೆಗಳಿದ್ದರೂ ಮಹಾನ್ ವ್ಯಕ್ತಿಗಳು ಮಾಡಿದ ಸಾಧನೆ ವಿದ್ಯಾರ್ಥಿಗಳು ಗಮನಿಸಬೇಕು. ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿಉದ್ವೇಗ ಹಾಗೂ ನಕಾರಾತ್ಮಕ ಭಾವನೆಗೆ ಒಳಗಾಗದೇ ಏಕಾಗ್ರತೆ ಹಾಗೂ ಸಮಯ ಪ್ರಜ್ಞೆಯಿಂದಓದಬೇಕುಎಂದು ಹೇಳಿದರು.
ಪ್ರಾಚಾರ್ಯ ಮಹಾಂತೇಶಕೋರಿಶೆಟ್ಟರ ಮಾತನಾಡಿ, ಎಸ್.ಎಸ್.ಎಲ್.ಸಿ.ನಿಮ್ಮ ಮುಂದಿನ ದಾರಿ ನಿರ್ಧರಿಸುವ ಹಂತ.ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಜೀವನದ ಪಾಠ ಕಲಿಸುತ್ತವೆಎಂದು ಹೇಳಿದರು.
ರಾಯನಾಳ ಗ್ರಾಮ ಪಂಚಾಯತಅಧ್ಯಕ್ಷರುದ್ರಪ್ಪ ಮೇಟಿಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯಾಧ್ಯಾಪಕಿ ಶ್ರೀಮತಿ ಡಾ.ರೇಣುಕಾತಾಯಿ ಸಂತಬಾಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಮಕ್ಕಳ ಉತೀರ್ಣತೆ ಪ್ರಮಾಣ ಹೆಚ್ಚಿಸಲು ಕ.ವಿ.ವ. ಸಂಘದ ಈ ಪ್ರಯತ್ನವು ಶ್ಲಾಘನೀಯ. ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಪಡದೇಆತ್ಮವಿಶ್ವಾಸ ಹಾಗೂ ಸಕಾರಾತ್ಮಕತೆಯಿಂದ ಎದುರಿಸಿ ಎಂದು ಹೇಳಿದರು.
ಧಾರವಾಡಡಿಮ್ಹಾನ್ಸನ ಮನೋ ವೈದ್ಯಕೀಯ ಸಮಾಜಕಾರ್ಯಕರ್ತ ಪ್ರಶಾಂತ ಪಾಟೀಲ ಅಧ್ಯಯನದಲ್ಲಿಏಕಾಗ್ರತೆ ಸಾಧಿಸುವತಂತ್ರ ಹಾಗೂ ಕ್ರಮಬದ್ಧಅಧ್ಯಯನದ ಬಗ್ಗೆ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕಆರ್.ಬಿ. ಪಾಟೀಲ, ಶಿವಾನಂದ ಹರಕುಣಿ, ಎಂ.ಎಸ್. ನರೇಗಲ್‍ಇದ್ದರು.
ಜಯಪ್ಪ ಕುದರಿಹಾಳ ಸ್ವಾಗತಿಸಿದರು. ಶಿಕ್ಷಣ ಮಂಟಪ ಸಂಚಾಲಕ ವೀರಣ್ಣಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಎಂ.ಆರ್.ವಂದಿಸಿದರು.ಪ್ರತಿಭಾ ಹೂಗಾರ ನಿರೂಪಿಸಿದರು.
ಗಂಗಮ್ಮ ಮಾರಡಗಿ, ವಿದ್ಯಾವತಿ ಕಾಂಬಳೆ, ಗೀತಾಕುಲಕರ್ಣಿ, ಎಸ್.ಎಂ.ಅಮಲಶೆಟ್ಟಿ, ಅರ್ಚನಾಜೋಗ, ಚಂದ್ರಕಾ ಪಿ.ಬಸವರಾಜ ಹಿರೇಮಠ, ಡಾ.ಜಿ.ಎನ್. ದೊಡಮನಿ ಇದ್ದರು.