ಯಶಸ್ಸಿನ ಝಂಡಾ ಹಾರಿಸಿದ ಝೇಂಡೆ..

** ಚಿಕ್ಕನೆಟಕುಂಟೆ ಜಿ.ರಮೇಶ್

ಪಾತ್ರ ಯಾವುದಾದರೇನು ಅದರ ಮೂಲಕ ನಾಡಿನ ಜನರ ಮನ ಗೆಲ್ಲಬಹುದು ಎನ್ನುವುದನ್ನು ಅನೇಕ ಕಲಾವಿದರು ತೋರಿಸಿಕೊಟ್ಟಿದ್ದಾರೆ. ಕೆಲವೊಮ್ಮೆ ನಾಯಕನ ಪಾತ್ರಗಳನ್ನೂ ಪಕ್ಕಕ್ಕೆ ಇಡುವಷ್ಟರ ಮಟ್ಟಿಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಕಲಾವಿದರು ಪಾತ್ರವನ್ನು ಜೀವಿಸಿಬಿಡುತ್ತಾರೆ..
ಅರೆ.. ವಿಷಯ ಹೀಗ್ಯಾಕೆ ಅಂತೀರಾ ರಂಗಭೂಮಿಯ ಹಿನ್ನೆಲೆಯಿಂದ ಬಂದು, ಸಿನಿಮಾ,ಧಾರಾವಾಹಿ, ಡಬ್ಬಿಂಗ್ ಕಲಾವಿದ ಹೀಗೆ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡು ತನ್ನದೇ ಅಭಿಮಾನಿ ವರ್ಗ ಸೃಷ್ಠಿಕೊಂಡವರು ಬಿ.ಎಂ ವೆಂಕಟೇಶ್.
ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಕಲಾವಿದರ ನಿಜವಾದ ಹೆಸರು ಹೇಳಿದರೆ ಜನರಿಗೆ ಥಟ್ಟನೆ ಅರ್ಥವಾಗುವುದಿಲ್ಲ. ಆದರೆ ಅವರು ನಿರ್ವಹಿಸುವ ಪಾತ್ರದ ಹೆಸರಿನ ಮೂಲಕವೇ ಹೆಚ್ಚು ಚಿರಪರಿಚಿತರು. ಅವರೇ ಝೇಂಡೆ. ಅರ್ಥಾತ್ ಕೇಶವ ಝೇಂಡೆ.
ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಬಿದರಕ್ಕ ಹಳ್ಳಿಯವರು. ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ ಅಪ್ಪ ಪೆÇಲೀಸ್ ಇಲಾಖೆಯಲ್ಲಿದ್ದರು ಹಾಗಾಗಿ ಬೆಂಗಳೂರಿನಲ್ಲಿ ಬದುಕು ಕಂಡುಕೊಂಡಿದ್ದಾರೆ.
ಈ ಹೆಸರು ಕೇಳಿದಾಕ್ಷಣ ಧಾರಾವಾಹಿ ನೋಡುಗರ ಮನದಲ್ಲಿ ಒಹೋ.. ಇವರಾ ನಾನು ದೊಡ್ಡ ಅಭಿಮಾನಿ ಎನ್ನುವ ಉದ್ಗಾರ ಬಾರದೆ ಇರದು. ಅದಕ್ಕೆ ಕಾರಣ ಅವರ ಅಭಿನಯ. ಪಾತ್ರ ಯಾವುದೇ ಇರಲಿ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿಯೇ ಅವರು ಜನಸಾಮಾನ್ಯರಿಗೆ ಅಚ್ಚುಮೆಚ್ಚು.
ಯಶಸ್ವಿ ಧಾರಾವಾಹಿ “ಜೊತೆ ಜೊತೆಯಲಿ’ಯಲ್ಲಿ ದೊಡ್ಡ ಉದ್ಯಮಿಯ ಸ್ನೇಹಿತ, ಆಪ್ತರಕ್ಷಕನಾಗಿ ಝೇಂಡೆ ಕಾಣಿಸಿಕೊಂಡಿದ್ದಾರೆ.ಧಾರಾವಾಹಿಯಲ್ಲಿ ಅವರು ಒಳ್ಳೆಯವರ ಕೆಟ್ಟವರ ಸದ್ಯಕ್ಕಿರುವ ಕುತೂಹಲ.


ಈ ಕುರಿತು ವೆಂಕಟೇಶ್ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಅವರದೇ ಮಾತಗಳಲ್ಲಿ ಹೇಳುವುದಾದರೆ, ನನ್ನ ಅದೃಷ್ಟವೋ ಏನೋ ಒಳ್ಳೆಯ ಪಾತ್ರ ಸಿಕ್ಕಿದೆ ಇಲ್ಲ ನನ್ನನ್ನು ನೋಡಿ ಪಾತ್ರ ಕೊಟ್ಟಿದ್ದಾರೋ ಗೊತ್ತಿಲ್ಲ. ಈಗ ಸಾಮಾಜಿಕ ಮಾದ್ಯಮ ಪ್ರಬಲವಾಗಿದೆ.ನನ್ನ ಕೆರಿಯರ್‍ಲ್ಲಿ ನಾನು ನೋಡದೆ ಇರುವ ಬಹುದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ. ನನಗೆ ತುಂಬಾ ಇಷ್ಟವಾದ ಪಾತ್ರ.
ವಿಭಿನ್ನ ಶೈಡ್‍ಗಳಿವೆ. ಕೆಲವರು ಸ್ನೇಹಿತನಾ ಅಥವಾ ನೀವು ವಿಲನ್‍ನಾ ಅಂತ ಕರೆಯುತ್ತಾರೆ. ಭಿನ್ನವಾದ ಪಾತ್ರ ನಿರ್ಮಾಪಕ-ನಿರ್ದೇಶಕತರಾಗಿರುವ ಆರೂರು ಜಗದೀಶ್ ಅವರಿಗೆ ಧನ್ಯವಾದ ಹೇಳಬೇಕು.ಜೊತೆಗೆ ವಾಹಿನಿಗೂ ಕೂಡ. ಒಳ್ಳೆಯ ಪಾತ್ರ ಕೊಟ್ಟು ನಟಿಸಲು ಹೇಳಿದ್ದಾರೆ ಇದು ನನಗೆ ನಿಜಕ್ಕೂ ಖುಷಿ ಕೊಟ್ಟ ಪಾತ್ರ.
ಮಾಂಗಲ್ಯ ಧಾರಾವಾಹಿಯಲ್ಲಿ 9ವರ್ಷಗಳ ಕಾಲ ನಟಿಸಿದ್ದೇನೆ. ಅತಿ ಹೆಚ್ಚು ವರ್ಷ ನಟಿಸಿದ ಧಾರಾವಾಹಿ. ಆಗ ಮಾಧ್ಯಮಗಳು ಅಷ್ಟೊಂದು ಪ್ರಬಲವಾಗಿ ಇಲ್ಲದ ಕಾರಣ ನಮ್ಮ ಪ್ರತಿಭೆ ಬೆಳಕಿಗೆ ಬಂದಿರಲಿಲ್ಲ ಆದರೆ ಇತ್ತೀಚೆಗೆ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಹೆಚ್ಚು ಇರುವುದರಿಂದ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ.


ಪಾತ್ರ ಇಷ್ಟವಾದರೆ ನಟಿಸುತ್ತೇನೆ
ಪಾತ್ರದ ಬಗ್ಗೆ ಕೇಳುತ್ತೇನೆ ಇಷ್ಟವಾದರೆ ಮಾತ್ರ ನಟಿಸುತ್ತೇನೆ.. ಇಲ್ಲದಿದ್ದರೆ ಪರ್ಯಾಯವಾಗಿ ನಾನು ನನ್ನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ.. ಬಣ್ಣದ ಬದುಕನ್ನು ವೃತ್ತಿಯಾಗಿ ತೆಗೆದುಕೊಂಡಿದ್ದೇನೆ ಇದನ್ನು ಬಿಟ್ಟು ಬೇರೆ ದಾರಿ ಗೊತ್ತಿಲ್ಲ.


ರಾಜೀನಾಮೆ

2009 ಕನ್ನಡ ಸಾಹಿತ್ಯ ಪರಿಷತ್ತು ಹುದ್ದೆಗೆ ರಾಜೀನಾಮೆ ಕೊಟ್ಟು ಸಂಪೂರ್ಣವಾಗಿ ಈ ಕಡೆ ತೊಡಗಿಸಿಕೊಂಡಿದ್ದೇನೆ.. ನಟನೆ ಮಾಡುವುದು ನನಗೆ ಸಹಾಯವಾಗುತ್ತಿತ್ತು ಹೀಗಾಗಿ ಅನಿವಾರ್ಯವಾಗಿ ರಾಜೀನಾಮೆ ಕೊಡುವ ಪ್ರಸಂಗ ಎದುರಾಯಿತು.ಆ ಬಳಿಕ ಪೂರ್ಣಪ್ರಮಾಣದಲ್ಲಿ ನಟನೆಯನ್ನೇ ವೃತ್ತಿಯಾಗಿ ತೆಗೆದುಕೊಂಡಿದ್ದೇನೆ.ನನ್ನದೇ ಆದರೆಕಾರ್ಡಿಂಗ್ ಮತ್ತು ಎಡಿಟಿಂಗ್ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದೇನೆ