ಯಶಸ್ಸಿನ ಗುಟ್ಟಿರುವುದೇ ಏಕಾಗ್ರತೆಯಲ್ಲಿ: ಗಂಗಾಧರ ಬಿ. ನಿಟ್ಟೂರು

ದಾವಣಗೆರೆ.ಮಾ.೧೫; ನಗರದಲ್ಲಿ ತಾಲ್ಲೂಕು ಕ.ಸಾ.ಪ. ದಾವಣಗೆರೆ ಹಾಗೂ ಡಿಜೆವಿ ಸರ್ಕಾರಿ ಪ್ರೌಢಶಾಲೆ, ಕೆಬಿ ಬಡಾವಣೆ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ‘ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ’ದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಜೆವಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ವಿಜಯಕುಮಾರ ಚಿಂದಿ ವಹಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನು ತಾಲ್ಲೂಕು ಕ.ಸಾ.ಪ. ನಿರ್ದೇಶಕ ಎಂ. ಷಡಕ್ಷರಪ್ಪ ಬೇತೂರು ಮಾತನಾಡಿ, ದತ್ತಿ ದಾನಿಗಳನ್ನು ಸ್ಮರಿಸುತ್ತ ಕನ್ನಡ ಸಾಹಿತ್ಯ ಪರಿಷತ್ತು ನಡೆದುಬಂದ ದಾರಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿಗಳಾದ ಗಂಗಾಧರ ಬಿ. ನಿಟ್ಟೂರು ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತೆ ಬಗ್ಗೆ ತಿಳಿಸುತ್ತ, ವಿದ್ಯಾರ್ಥಿಗಳಿಗೆ ಏಕಾಗ್ರತೆಯು ಬಹಳ ಮುಖ್ಯವಾದದ್ದು. ಯಶಸ್ಸಿನ ಗುಟ್ಟಿರುವುದೇ ಏಕಾಗ್ರತೆಯಲ್ಲಿ. ಯಾರು ಶಾಲೆಯಲ್ಲಿ ಶಿಕ್ಷಕರ ಪಾಠವನ್ನು ಏಕಾಗ್ರತೆಯಿಂದ ಕೇಳಿದ ವಿದ್ಯಾರ್ಥಿ ಹಾಗೂ ಮನೆಗೆ ಬಂದು ಮತ್ತೊಮ್ಮೆ ಓದಿ ಪನರಾವರ್ತನೆ ಮಾಡಿದ ವಿದ್ಯಾರ್ಥಿ ಉತ್ತಮ ಅಂಕಗಳಿಸಲು ಸಾಧ್ಯ. ಕಷ್ಟಪಡದೇ ಯಾವುದೇ ಸಾಧನೆಯು ಸಾಧ್ಯವಿಲ್ಲ, ಆದ್ದರಿಂದ ಇಷ್ಟಪಟ್ಟು ಓದಿ ಉತ್ತಮ ಅಂಕಗಳಿಸಿ ತೇರ್ಗಡೆ ಹೊಂದಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರುವ ಮಕ್ಕಳಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಮುಖ್ಯ ಅಥಿತಿಗಳಾಗಿ ತಾಲ್ಲೂಕು ಕ.ಸಾ.ಪ. ಅಧ್ಯಕ್ಷರಾದ ಸುಮತಿ ಜಯಪ್ಪ, ಪರಿಕ್ಷಾಪೂರ್ವ ತಯಾರಿ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಜಿಲ್ಲಾ ಕ.ಸಾ.ಪ. ನಿರ್ದೇಶಕಿ ಮಲ್ಲಮ್ಮ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕೇಳಿ ಉತ್ತರ ಹೇಳಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ನಿರೂಪಣೆ ಮತ್ತು ಸ್ವಾಗತವನ್ನು ಶಾಲಾ ಶಿಕ್ಷಕರಾದ ಪಂಪಾಪತಿ ಹಾಗೂ ಶಿಕ್ಷಕಿ ಮಂಗಳಗೌರಿ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷವೃಂದದವರು ಉಪಸ್ಥಿತರಿದ್ದರು.