ಯಶಸ್ಸಿಗೆ ಶ್ರಮದ ಮೆಟ್ಟಿಲು ಹತ್ತಬೇಕು:ರಮೇಶ ಸುಂಬಡ

ಕಲಬುರಗಿ ನ 15: ಯಶಸ್ಸು ಮುಟ್ಟಲು ಎಲ್ಲಿಯೂ ಸುಲಭದ ಲಿಫ್ಟ್ ವ್ಯವಸ್ಥೆ ಇಲ್ಲ.ಅದನ್ನು ತಲುಪಲು ಪ್ರತಿಯೊಬ್ಬರು ಶ್ರಮದ ಮೆಟ್ಟಿಲು ಹತ್ತಬೇಕೆಂದು ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಹೇಳಿದರು.ನಗರದ ಶೇಕ್‍ರೋಜ ಆಶ್ರಯ ಕಾಲೊನಿಯ ಸರಕಾರಿ ಶಾಲೆಯ ಆವರಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ,ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಎ ಐ ಟಿ ಯು ಸಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಸುರಕ್ಷಾ ಕಿಟ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಂಘಟನೆ ಅಧ್ಯಕ್ಷ ಪ್ರಭುದೇವ ಯಳಸಂಗಿ, ಎಐಟಿಯುಸಿ ಅಧ್ಯಕ್ಷ ಎಚ್ ಎಸ್ ಪತಕಿ, ಕಾರ್ಯದರ್ಶಿ ನ್ಯಾಯವಾದಿ ಹಣಮಂತರಾಯ ಅಟ್ಟೂರ,ಕಲ್ಯಾಣಿ ತುಕ್ಕಾಣಿ, ಸುವರ್ಣ, ನ0ದಾ ಪಾಟೀಲ,ಆಗಮಿಸಿದರು. ಶಿವಲಿಂಗಮ್ಮ ಲೇಂಗಟಿಕರ ಅಧ್ಯಕ್ಷತೆ ವಹಿಸಿದ್ದರು. ವೀರಣ್ಣ ಲೆ0ಗಟಿಕರ, ರುಕ್ಮಣ್ಣ ವಾಡೇಕರ್,ಅಮರ್ ಡಿ. ಸಾಗರ್, ಪವನ ಸತೀಶ, ಶಿವಮ್ಮ , ತಾರಾಬಾಯಿ, ಶರಣಮ್ಮ, ಸಾಬಮ್ಮ,ಹಲವಾರು ಜನ ಭಾಗವಹಿಸಿದರು.