ಯಶಸ್ಸಿಗೆ ನಿರಂತರ ಪ್ರಯತ್ನ ಅಗತ್ಯ

ಕೋಲಾರ,ಜು,೯-ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ಮುಂದೆ ಬರಲು ಅನೇಕ ಅವಕಾಶಗಳಿದ್ದು ನಿರಂತರವಾಗಿ ಪ್ರಯತ್ನಿಸಿದರೆ ಫಲ ಖಂಡಿತವಾಗಿ ಸಿಗುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ಉತ್ತರ ವಿವಿ ಮಟ್ಟದ ಅಂತರ ಕಾಲೇಜು ಚರ್ಚಾಸ್ಪರ್ಧೆ ಉದ್ಘಾಟಿಸಿ ವಿದ್ಯಾರ್ಥಿ ಜೀವನದಲ್ಲಿ ಯಾವಾಗಲೂ ಧನಾತ್ಮಕ ಚಿಂತನೆ ಹೊಂದಿರಬೇಕು. ಗೊತ್ತು ಗುರಿ ಇಲ್ಲದ ಶಿಕ್ಷಣ ಶೂನ್ಯಕ್ಕೆ ಸಮಾನ. ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪ್ರತಿಭೆ ಪ್ರದರ್ಶಿಸಬೇಕೆಂದರು.
ಏನನ್ನಾದರೂ ಸಾಧಿಸುತ್ತೇವೆ ಎಂಬ ಛಲ ಇರಬೇಕು. ಕಲಿಕೆಯಲ್ಲಿ ಪರಿಶ್ರಮ ಇರಬೇಕು. ಗುರಿ ತಲುಪುವವರೆಗೂ ತಪಸ್ಸಿನಂತೆ ಆಳವಾದ ಅಧ್ಯಯನ ಮಾಡಬೇಕು, ಪ್ರಜಾಪ್ರಭುತ್ವದ ಮೌಲ್ಯವನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಶ್ರೀನಿವಾಸಗೌಡ, ಪ್ರಾದ್ಯಾಪಕರಾದ ಇತಿಹಾಸ ವಿಭಾಗದ ಪ್ರೊ.ಡಾ.ಶಂಕರಪ್ಪ, ವಾಣಿಜ್ಯ ವಿಭಾಗದ ಮುರಳೀಧರ್, ಕನ್ನಡ ವಿಭಾಗದ ರವಿಕುಮಾರ್, ಸಂಗೀತಾ, ಕೋಮಲ, ಇತಿಹಾಸ ವಿಭಾಗದ ಮರಿಯಪ್ಪ, ಅಧ್ಯಾಪಕರ ಸಂಘದ ಕಾರ್ಯದರ್ಶಿ ಸತೀಶ್, ಶ್ರೀನಿವಾಸಪುರ ಕಾಲೇಜಿನ ಎಸ್.ಎಂ.ವೆಂಕಟೇಶಪ್ಪ, ಕೆಜಿಎಫ್ ಕಾಲೇಜಿನ ಡಾ.ಮಂಜುಳ, ಡಾ.ಪ್ರಸನ್ನ ಕುಮಾರಿ, ಅನಂತಮೂರ್ತಿ, ನಂದೀಶ್ ಇದ್ದರು.