ಯಶಸ್ವಿ ಸೈಕಲ್ ಯಾತ್ರೆ: ವಿನಯಗೆ ರೋಟರಿ ಸನ್ಮಾನ

ಬೀದರ್:ಜ.1: ಸೈಕಲ್ ಮೇಲೆ ದೇಶದ 12 ಜ್ಯೋತಿಲಿರ್ಂಗಗಳ ಯಶಸ್ವಿ ಯಾತ್ರೆ ಕೈಗೊಂಡ ವಿನಯ್ ಜಿ. ಮಠ ಅವರನ್ನು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಗರದ ಐ.ಎಂ.ಎ. ಹಾಲ್‍ನಲ್ಲಿ ಸನ್ಮಾನಿಸಲಾಯಿತು

ವಿನಯ್ ಅವರು ಏಕಾಂಗಿಯಾಗಿ 129 ದಿನಗಳಲ್ಲಿ 12,600 ಕಿ.ಮೀ.ಸಂಚರಿಸಿ, 12 ಜ್ಯೋತಿಲಿರ್ಂಗಗಳ ಯಾತ್ರೆ ಪೂರ್ಣಗೊಳಿಸಿದ್ದಾರೆ. ಅವರ ಸಾಧನೆ ಜಿಲ್ಲೆಯ ಯುವಕರಿಗೆ ಮಾದರಿಯಾಗಿದೆ ಎಂದು ಕ್ಲಬ್ ಅಧ್ಯಕ್ಷ ನಿತಿನ್ ಕರ್ಪೂರ ಹೇಳಿದರು.

ಕ್ಲಬ್ ಉಪಾಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ, ಡಾ. ರಿತೇಶ ಸುಲೆಗಾಂವ್, ಖಜಾಂಚಿ ಸತೀಶ ಸ್ವಾಮಿ, ಸದಸ್ಯರಾದ ಡಾ. ಜಗದೀಶ ಪಾಟೀಲ, ಡಾ. ಲೋಕೇಶ ಹಿರೇಮಠ, ಡಾ.ನಿತೇಶ ಬಿರಾದಾರ, ಸುಧೀಂದ್ರ ಸಿಂದೋಲ್, ಡಾ. ಕಪಿಲ್ ಪಾಟೀಲ, ರಾಜಕುಮಾರ ಅಳ್ಳೆ, ದತ್ತಾತ್ರೇಯ ಪಾಟೀಲ, ಡಾ. ಶರಣ ಬುಳ್ಳಾ, ವೀರೇಶ ಖೇಳಗಿ ಮೊದಲಾದವರು ಇದ್ದರು.