ಯಶಸ್ವಿಯಾದ ಹತ್ತನೇ ತರಗತಿ ಟಾಪರ್ಸ್ ಶೈಕ್ಷಣಿಕ ಪ್ರವಾಸ

ವಿಜಯಪುರ:ಜೂ.5: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪಂಚಾಯತಿಯ ಮೂಲಕ ಆಯೋಜಿಸಿಲಾದ ಎಸ್.ಎಸ್.ಎಲ್.ಸಿ ಟಾಪರ್ಸ್ ನಾಲ್ಕು ದಿನಗಳ ಟೂರ್ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಜೂನ್.1 ರಂದು ವಿಜಯಪುರ ಜಿಲ್ಲಾ ಪಂಚಾಯತಿಯ ಆವರಣದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ವಿಜಯಮಹಾಂತೇಶ ದಾನಮ್ಮನರ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಪ್ರವಾಸಕ್ಕೆ ಚಾಲನೆ ನೀಡಿದ್ದರು.
ಪ್ರವಾಸದ ಎರಡನೇ ದಿನವಾದ ಜೂನ್.2ರಂದು ಬೆಂಗಳೂರಿನ ಪ್ರಸಿದ್ಧ ಭಾರತೀಯ ವಿಜ್ಞಾನ ಸಂಸ್ಥೆ ( ಐಐಎಸ್ ಸಿ ) ಹಾಗೂ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ( ಜಿಕೆವಿಕೆ )ಮಕ್ಕಳು ಭೇಟಿ ನೀಡಿ, ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರೊಡನೆ ಮತ್ತು ಅಲ್ಲಿನ ವಿಜ್ಞಾನಿಗಳೊಂದಿಗೆ ಮಕ್ಕಳು ಸಂವಾದ ಮಾಡಿದರು. ಸಂಸ್ಥೆಯಲ್ಲಿ ಲಭ್ಯವಿರುವ ಅವಕಾಶಗಳು, ವಿದ್ಯಾರ್ಥಿಗಳು ಈ ಸಂಸ್ಥೆಗೆ ಸೇರಲು ಇರುವ ಮಾರ್ಗಸೂಚಿಗಳ ಮಾಹಿತಿ ಪಡೆದುಕೊಂಡರು
ಸಂಸ್ಥೆಯ ಆವರಣದ ಜೀವಿ ಶಾಸ್ತ್ರ ವಿಭಾಗ, ಏರೋ ಸ್ಪೇಸ್ ವಿಭಾಗ ಸೇರಿ ಹಲವು ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ವಿವರ ಪಡೆದುಕೊಂಡರು.
ಅದೇ ದಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಮಕ್ಕಳು ಭೇಟಿ ನೀಡಿ ಅಲ್ಲಿ ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಕೀಟ ಶಾಸ್ತ್ರ ಒಳಗೊಂಡಂತೆ ವಿವಿಧ ವಿಭಾಗಗಳಿಗೆ ಭೇಟಿ ಕೊಟ್ಟು , ರೇಷ್ಮೆ ಹುಳು ಸಾಕಾಣಿಕೆಯ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ತೋಟಗಾರಿಕೆ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿಯ ಶಾಸ್ತ್ರಜ್ಞರೊಡನೆ ಸಮಾಲೋಚಿಸಿ ವಿವಿಧ ತಳಿಯ ಬೆಳೆ ಪದ್ಧತಿ, ಕೀಟ ಶಾಸ್ತ್ರ ವಿಭಾಗದಲ್ಲಿ ಸಂಗ್ರಹಿಸಲಾದ ವಿವಿಧ ತರಹದ ಕೀಟಗಳ ಮಾಹಿತಿ ವಿವರ ಪಡೆದರು. ಜೇನುಹುಳು ಸಾಕಾಣಿಕೆ ಮಹತ್ವ, ಮಾನವನಿಗೆ ಹೇಗೆ ಕೀಟಗಳು ಸ್ಪರ್ದೆ ನೀಡುತ್ತವೆ ಎಂಬಿತ್ಯಾದಿ ತಿಳಿದುಕೊಂಡರು. ತಮ್ಮ ಇಷ್ಟದ ತೋಟಗಾರಿಕೆ ವಿಷಯ ವ್ಯಾಸಂಗಕ್ಕೆ ನಿಗದಿತ ಮಾನದಂಡಗಳು ವಿಷಯ ಆಯ್ಕೆ ಕುರಿತು ಕೇಳಿ ತಿಳಿದುಕೊಂಡರು.
ಜೂನ್.3 ರಂದು ನೆಹರು ತಾರಾಲಯ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ, ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ವಿಧಾನಸೌಧಕ್ಕೆ ಭೇಟಿ. ಮೆಟ್ರೋ ಪ್ರಯಾಣ ಮಾಡಿದರು.
ನೆಹರು ತಾರಾಲಯದಲ್ಲಿ ವಿಜ್ಞಾನ ಉದ್ಯಾನವನ, ನೆಹರು ತಾರಾಲಯದ ಸಿಬ್ಬಂದಿಗಳೊಡನೆ ಸಮಾಲೋಚಿಸಿ ವಿಜ್ಞಾನ ಕುರಿತಾದ ಮಾಹಿತಿ ಮತ್ತು ಗಗನಯಾನಕ್ಕೆ ಸಿದ್ಧತೆ ಇತ್ಯಾದಿ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನೆಹರು ತಾರಾಲಯದ 360% ಆಯಾಮದ ಚಿತ್ರಮಂದಿರಲ್ಲಿ ಗಗನಯಾನದ ಕುರಿತುಚಿತ್ರ ವೀಕ್ಷಿಸಿದರು. ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಹಾಗು ಐಎಎಸ್ ಅಧಿಕಾರಿಗಳಾದ ಶ್ರೀಮತಿ ಬಿ.ಬಿ. ಕಾವೇರಿ ಅವರೊಂದಿಗೆ ಸಂವಾದ ನಡೆಸಿ, SSಐಅ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯಲು ಮಕ್ಕಳು ವಹಿಸಿದ ಶ್ರಮ , ಶಿಕ್ಷಕರ ಮಾರ್ಗದರ್ಶನ , ಪಾಲಕರ ಪೆÇ್ರೀತ್ಸಾಹ ಕುರಿತು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ವಿವಿಧ ವಸತಿ ನಿಲಯಗಳಲ್ಲಿ ಓದಿದ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇರುವ ಆಯ್ಕೆಗಳು ಹಾಗೂ ಅವಕಾಶಗಳು ಅವುಗಳ ಸದುಪಯೋಗ ವಿಷಯವಾಗಿ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು. ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯಕ್ಕೆ ಭೇಟಿ ಪ್ರಾತ್ಯಕ್ಷಿಕೆಗಳನ್ನು , ವಿಜ್ಞಾನದ ಪರಿಕರಗಳ ಪ್ರಾಯೋಗಿಕವಾಗಿ ಉಪಯೋಗಿಸಿ ತಿಳಿದುಕೊಂಡರು. ಇನ್ನೋರ್ವ ಐಎಎಸ್ ಅಧಿಕಾರಿಗಳಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್ ಅವರ ಕಾರ್ಯಾಲಯಕ್ಕೆ ತೆರಳಿ ಅಲ್ಲಿ ಆಯುಕ್ತರೊಡನೆ ಸುಮಾರು ಒಂದು ಗಂಟೆಗಳ ಸಂವಾದ ನಡೆಸಿದರು.ಐಎಎಸ್ ಪರೀಕ್ಷೆ ಭಾಷಾ ಆಯ್ಕೆ, ಸಿದ್ಧತೆ ಕುರಿತು ವಿದ್ಯಾರ್ಥಿಗಳು ಕೇಳಿ ಮಾಹಿತಿ ಪಡೆದುಕೊಂಡರು. ಕನ್ನಡದಲ್ಲಿಯೇ ಬರೆದ ಸಾಧಕರ ಕುರಿತು ಮಕ್ಕಳಿಗೆ ಮಾಹಿತಿ ನೀಡಿ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದರು. ನಂತರ ಮಕ್ಕಳಿಗೆ ರಂಜಿಸುವ ಮೂರು ಕಥೆಗಳನ್ನು ಹೇಳಿ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಮಾತ್ರ ಇರುತ್ತದೆ. ನಿಮ್ಮ ಶಕ್ತಿ ನಂಬಿ ಮುನ್ನುಗ್ಗಿ ಎಂದರು. ವಿಧಾನಸೌಧಕ್ಕೆ ಭೇಟಿ,ರಾಜ್ಯದ ಮುಖ್ಯಮಂತ್ರಿಗಳ ಕಾರ್ಯಾಲಯ, ಅಧಿವೇಶನ ನಡೆಯುವ ಸ್ಥಳ, ಸಚಿವರ ಕಾರ್ಯಾಲಯ ಹೀಗೆ ವಿಧಾನಸೌಧದ ಎಲ್ಲ ಮಹಡಿಗಳನ್ನು ವೀಕ್ಷಣೆ ಮಾಡಿ ಸಂತೋಷಪಟ್ಟರು. ನಂತರ ವಿಧಾನಸೌಧದ ಪಕ್ಕದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಯ ಬಳಿ ಫೆÇೀಟೋ ತೆಗೆಸಿಕೊಂಡು ಮಕ್ಕಳು ಸಂಭ್ರಮಿಸಿದರು.
ಮಕ್ಕಳ ಕನಸಿನ ಪಯಣವಾದ ಮೆಟ್ರೋ ಪ್ರಯಾಣಕ್ಕೆ ತೆರಳಿ ಎಲ್ಲ ಮಕ್ಕಳು ಮೆಟ್ರೋದಲ್ಲಿ ಪ್ರಯಾಣಿಸಿ ಸಂತಸಗೊಂಡರು.ಮೆಟ್ರೋ ರೈಲಿನ ಬಗ್ಗೆ ಮಕ್ಕಳಲ್ಲಿರುವ ಸಂದೇಹಗಳನ್ನು ಶಿಕ್ಷಕರು ಪರಿಹರಿಸಿದರು. ರೈಲಿನ ಸಮಯಪಾಲನೆ, ಅಲ್ಲಿನ ಶಿಸ್ತು ಕಂಡು ಮಕ್ಕಳು ಆಶ್ಚರ್ಯ ವ್ಯಕ್ತಪಡಿಸಿದರು. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ವಿಜಯಪುರಕ್ಕೆ ಮರು ಪಯಣ ಆರಂಭವಾಗಿ ಜೂ.4ರಂದು ವಿಜಯಪುರದ ಉಪನಿರ್ದೇಶಕರು (ಆಡಳಿತ) ಅವರ ಕಾರ್ಯಾಲಯಕ್ಕೆ ಆಗಮನ.
ಪ್ರವಾಸದ ನೆನಪಿಗಾಗಿ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಗ್ರೂಪ್ ಛಾಯಾಚಿತ್ರ ಇರುವ ಸ್ಮರಣಿಕೆ ನೀಡಿ ಎಲ್ಲ ಮಕ್ಕಳನ್ನು ಅವರ ಪಾಲಕರೊಂದಿಗೆ ಬೀಳ್ಕೊಡಲಾಯಿತು ಎಂದು ಜಿಲ್ಲಾ ಪಂಚಾಯತಿಯ ಪ್ರಕಟಣೆ ತಿಳಿಸಿದೆ.

-ಎ——————————-

ಉದ್ಯಮದಾರರು ಪ್ರತಿಯೊಬ್ಬರು ಜಿಎಸ್‍ಟಿ ತೆಗೆಯಬೇಕು : ಲಖನ್ ಜಿ. ಜಾಜು

ವಿಜಯಪುರ :ಜೂ.5:ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಸಿಯೇಶನ್ (ರಿ) ವಿಜಯಪುರ ಹಾಗೂ ಅಪ್ಸರಾ ಸೀನಿಪ್ಲೇಕ್ಸ್ ಥೇಟರ್ , ವಿಜಯಪುರ ಇವರ ಸಹಯೋಗದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಾಹಿತಿ ಕಾರ್ಯಾಗಾರವು ನಗರದ ಅಪ್ಸರಾ ಮಲ್ಟಿ ಪರ್ಪಜ್ ಫಂಕ್ಷನ್ ಹಾಲ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಾಹಿತಿ ಕಾರ್ಯಗಾರ ಹಾಗೂ ಲೆಕ್ಕ ಪರಿಶೋಧಕರಾದ ಲಖನ್ ಜಿ. ಜಾಜು ಮಾತನಾಡಿ, ಸರಕು ಮತ್ತು ಸೇವೆಗಳ ತೆರಿಗೆ ಜಾರಿಗೊಳಿಸಿದಾಗ, ಅನ್ವಯವಾಗುವ ಸರಕುಗಳು ಮತ್ತು ಸೇವೆಗಳ ತೆರಿಗೆಗಳು 3 ವಿಧಗಳಾಗಿರುತ್ತವೆ: ಸಿ.ಜಿ.ಎಸ್.ಟಿ.ಎಸ್: ಆದಾಯವನ್ನು ಕೇಂದ್ರ ಸರಕಾರದಿಂದ ಸಂಗ್ರಹಿಸಲಾಗುವುದು ಎಸ್ ಜಿ.ಎಸ್ ಟಿ: ಇನ್ಟ್ರಾ-ಸ್ಟೇಟ್ ಮಾರಾಟಕ್ಕಾಗಿ ಆದಾಯವನ್ನು ರಾಜ್ಯ ಸರ್ಕಾರಗಳು ಸಂಗ್ರಹಿಸಲಿವೆ ಐಜಿಎಸ್ ಟಿ: ಅಂತರ್-ರಾಜ್ಯ ಮಾರಾಟಕ್ಕಾಗಿ ಕೇಂದ್ರ ಸರ್ಕಾರವು ಆದಾಯವನ್ನು ಸಂಗ್ರಹಿಸುತ್ತದೆ ಜಿಎಸ್ ಟಿ ಟ್ರೇಡಿಂಗದವರಿಗೆ 40 ಲಕ್ಷ ವರೆಗೂ ಯೂನಿಟ ಮಾಡುತ್ತಿರುವರಿಗೆ ಜಿಎಸ್ ಟಿ ಮಾಡಬಹುದು. ಜಾಬ್ ವರ್ಕ್ ಗೆ 6% ಆಗಬಹುದು. ಶಾಲೆಗೆ ಸಂಬಂಧಪಟ್ಟ ಮುದ್ರಣಕ್ಕೆ 12 % ಆಗಬಹುದು. ಇದು ಇನ್ನೀತರ ಮುದ್ರಣಕ್ಕೇ 18% ಆಗುತ್ತದೆ. ನಿಮ್ಮಗೆ ಸರ್ಕಾರದ ಅನುದಾನದಡಿ ಕಾರ್ಯ ನಿರ್ವಹಿಸಬೇಕೆಂದರೆ ಕಡ್ಡಾಯವಾಗಿ ಜಿಎಸ್ ಟಿ ಇರಬೇಕು. ಮುಂದಿನ ಭವಿಷ್ಯಕ್ಕಾಗಿ ನೀವು ಬೆಳೆಯಬೇಕೆಂದರೆ ಜಿಎಸ್ ಟಿ ಇರಬೇಕು. ನಿಮ್ಮ ಜಾಬವರ್ಕ್ ಗಳಾದ, ಬಿಲ್ ಬುಕ್, ಮ್ಯಾರೇಜ್ ಕಾರ್ಡ್ , ಕ್ಯಾಲೇಂಡರ್, ವಿಜಿಇಂಗ ಕಾರ್ಡ್ ಮುಂತಾದವುಗಳಿಗೆ 18 % ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಮಾಜಿ ಅಧ್ಯಕ್ಷರು ಹಾಗೂ ವಕೀಲರಾದ ಶಂಕ್ರೆಯ್ಯಾ ಆರ್. ಮಠಪತಿ ಮಾತನಾಡಿ, ಇವತ್ತಿನ ದಿನ ತಂತ್ರಜ್ಞಾನದ ದಿನವಾಗಿದೆ. ಜಿಎಸ್ ಟಿ ಬಗ್ಗೇ ಹೆದರುವ ಪ್ರಶ್ನೆ ಇಲ್ಲ ಯಾಕೆಂದರೇ ಈಗಿನ ಜನರಿಗೆ ಮಾಹಿತಿಯ ಬಗ್ಗೆ ಕಲೆ ಹಾಕಲು ಯಾರ ಬಳಿ ಹೋಗಲು ಅನಿವಾರ್ಯತೆ ಇಲ್ಲ ಅದಕ್ಕೇ ನಿಮ್ಮ ಗೂಗಲ್ ನಲ್ಲಿ ಸಾಕಷ್ಟು ಮಾಹಿತಿ ಲಭ್ಯ ಇವೆ. ಅದನ್ನು ಸರಿಯಾಗಿ ಓದುಕೊಂಡು ಅದರ ಪ್ರಕಾರ ಸರ್ಕಾರಕ್ಕೆ ವಂಚನೆ ಮಾಡದೇ ಜಿಎಸ್ ಟಿ ತುಂಬಿದರೆ ಸಾಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ತೆರಿಗೆ ಸಲಹೆಗಾರರಾದ ಸಂಘದ ಅಧ್ಯಕ್ಷರಾದ ರಾಜಶೇಖರ ಮಾತನಾಡಿ, ಜಿಎಸ್ ಟಿ ರೆಗ್ಯೂಲರ ಆಗಿ ತಗೆದುಕೊಳ್ಳುವುದು ಅತಿ ಉತ್ತಮವಾಗಿದೆ. ಜಿಎಸ್ ಟಿ ಯಾಗಿ ಪ್ರತಿಯೊಬ್ಬ ಉದ್ಯೋಗ ಮಾಡುವವರು ಕಡ್ಡಾಯವಾಗಿ ತಗೆದುಕೊಳ್ಳಬೇಕು. ಕಾನೂನು ರೀತಿಯಾಗಿ ಪ್ರತಿಯೊಬ್ಬರು ಮುದ್ರಣಕಾರರು ಕಾರ್ಯ ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಿಂಟಿಂಗ್ ಪ್ರೆಸ್ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಚಿದಾನಂದ ವಾಲಿ ಸ್ವಾಗತದೊಂದಿಗೆ ಕಾರ್ಯಕ್ರಮ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಚಂದ್ರಶೇಖರ ಬುರಾಣಪುರ, ಕಾರ್ಯದರ್ಶಿ ವೆಂಕಟೇಶ ಕಾಳೆ, ಖಜಾಂಚಿ ಹನಿಪ ಮುಲ್ಲಾ, ನಿರ್ದೇಶಕರುಗಳಾದ ನಬಿ ಮಕಾಂದಾರ, ಉಮೇಶ ಕುಲಕರ್ಣಿ, ನಾಗರಾಜ ಬಿಸನಾಳ, ಉಮೇಶ ಶಿವಶರಣ, ಸುರೇಶ ಗೊಳಸಂಗಿ, ಜಗದೀಶ ಶಹಾಪುರ, ಮಂಜು ರೂಗಿ, ದೀಪಕ ಜಾಧವ ಹಾಗೂ ಮುದ್ರಣಕಾರರಾದ ಈರಣ್ಣ ಅಳ್ಳಗಿ, ರವಿ ಕುಲಕರ್ಣಿ, ಗೀತಾ ಪ್ರಿಂಟಿಂಗ್ ಪ್ರೆಸ್, ಸಂತೋಷ ಹುಣಶ್ಯಾಳ, ಬಸವರಾಜ ಗೊಳಸಂಗಿ, ಉಬೇದ ಜಹಾಗೀರದಾರ, ಮಹ್ಮದಉಸ್ಮಾನ ಗಣಿ ಮುಲ್ಲಾ, ಮಹಾನಿಂಗ ಗುಬ್ಬಿ, ರಾಜು ರೇಶ್ಮೀ, ಬಸವರಾಜ ಬಿಜ್ಜರಗಿ, ರಮೇಶ ಹೆಗಡಿ, ಸಿದ್ದಲಿಂಗ ಸಿಂಪಗಿ, ಸದಾ ಘೋರ್ಪಡೆ, ಅಪ್ಪು ಹಳ್ಳಿ, ಹಿರಿಯರಾದ ಆರ್. ಬಿ. ಕುಲಕರ್ಣಿ ಮುಂತಾದವರು ಇದ್ದರು ಕಾರ್ಯಕ್ರಮವನ್ನು ಶ್ರೀಮಂತ ಬೂದಿಹಾಳ ನಿರೂಪಿಸಿದರು. ನಿರ್ದೇಶಕರಾದ ಉಮೇಶ ಶಿವಶರಣ ವಂದಿಸಿದರು.

-ಬಿ—————————

ತಾಯಿ ಆಶೀರ್ವಾದ ಪಡೆದ ಸಚಿವ ಎಂಬಿ ಪಾಟೀಲ

ವಿಜಯಪುರ: ಜೂ.5:ಮೂರನೇ ಬಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆತವರುಜಿಲ್ಲೆ ವಿಜಯಪುರಕ್ಕೆ ಆಗಮಿಸಿರುವ ಬೃಹತ್ ಮತ್ತು ಮಧ್ಯಮಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರುತಮ್ಮತಾಯಿ ಕಮಲಾಬಾಯಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಈ ಕುರಿತುಟ್ವೀಟ್ ಮಾಡಿರುವ ಅವರು, ತಾಯಿಗಿಂತಲೂ ಮಿಗಿಲಾದದೇವರಿಲ್ಲ. ಮಮತೆ, ಪ್ರೀತಿ-ವಾತ್ಸಲ್ಯತ್ಯಾಗ, ಅನುಕಂಪ ಹೀಗೆ ಎಲ್ಲ ಪದಗಳ ಮೂರ್ತರೂಪವೇತಾಯಿ. ನನ್ನ ಬೆಳವಣಿಗೆ, ಏಳಿಗೆ, ಶ್ರೇಯಸ್ಸು-ಯಶಸ್ಸುಎಲ್ಲಕ್ಕೂ ನನ್ನತಾಯಿಯೇಕಾರಣ. ತಾಯಿಯ ಆಶೀರ್ವಾದ ಪಡೆದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಮತ್ತು ಸಾಮಾಜಿಕವಾಗಿಎಷ್ಟೇಉನ್ನತ ಸ್ಥಾನಕ್ಕೇರಿದರೂ ಎಂ. ಬಿ. ಪಾಟೀಲರುತಮ್ಮ ಈ ಸಾಧನೆಗಳಿಗೆ ಕಾರಣರಾದವರನ್ನು ಸದಾ ಸ್ಮರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತಾವುಆಯ್ಕೆಯಾಗಲುಕಾರಣರಾದ ಮತದಾರರು, ಜಲಸಂಪನ್ಮೂಲ ಸಚಿವರಾಗಿಜನಮೆಚ್ಚುವ ಕೆಲಸ ಮಾಡಲು ಮಾರ್ಗದರ್ಶನ ನೀಡಿ ಆಶೀರ್ವದಿಸಿದ ನಡೆದಾಡುವದೇವರುಎಂದೇ ಹೆಸರಾಗಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಹಾಗೂ ಉತ್ತಮ ಸಂಸ್ಕಾರ ಪಡೆಯಲು ಹಾಗೂ ರಾಜಕೀಯವಾಗಿ ಸಾಧನೆ ಮಾಡಲು ಸ್ಪೂರ್ತಿಯಾಗಿರುವತಮ್ಮತಂದೆ ಬಿ. ಎಂ. ಪಾಟೀಲ ಅವರ ಬಗ್ಗೆ ಎಂ. ಬಿ. ಪಾಟೀಲರು ಸಮಯ ಸಿಕ್ಕಾಗಲೆಲ್ಲ ಉಪಕಾರ ಸ್ಮರಣೆ ಮಾಡುತ್ತಿರುತ್ತಾರೆ.
ಈಗಲೂ ಅಷ್ಟೇ, ಸಚಿವರಾದ ನಂತರ ವಿಜಯಪುರಕ್ಕೆ ಮೊದಲ ಬಾರಿಗೆ ಆಗಮಿಸಿದ ಅವರು, ನಾನಾ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ, ತಮ್ಮತಾಯಿಯನ್ನು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿಅವರ ಸಹೋದರ ಮತ್ತು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಮತ್ತುಕುಟುಂಬ ಸದಸ್ಯರುಕೂಡ ಉಪಸ್ಥಿತರಿದ್ದರು.
ಮಾಜಿ ಸಚಿವ ದಿ. ಬಿ. ಎಂ. ಪಾಟೀಲರ ಪತ್ನಿಯಾಗಿದ್ದರೂ ಮೊದಲಿನಿಂದಲೂ ಕಮಲಾಬಾಯಿ ಪಾಟೀಲ ಅವರುಜನಸಾಮಾನ್ಯರೊಂದಿಗೆ ಸರಳವಾಗಿ ಬೆರೆಯುತ್ತ ಮನೆಗೆ ಬಂದವರನ್ನು ಅತಿಥಿಗಳೆಂದು ಪ್ರೀತಿ ಮತ್ತುಆದರದಿಂದಅತಿಥಿ ಸತ್ಕಾರ ಮಾಡುತ್ತಗೌರವತೋರಿಸುತ್ತಿದ್ದಾರೆ. ಈಗಲೂ ಕೂಡಅದೇರೀತಿ ಸರಳ ಜೀವನ ನಡೆಸುವ ಮೂಲಕ ಅವರುಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಈ ಮಧ್ಯೆ, ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ವಿಜಯಪುರಕ್ಕೆ ಬಂದಾಗ ಎಂ. ಬಿ. ಪಾಟೀಲ ಅವರುತಮ್ಮತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಾರೆ. ತಾವು ಮಾಡುತ್ತಿರುವಜನಪರ ಕೆಲಸ ಕಾರ್ಯಗಳು, ಜನರಕಲ್ಯಾಣಕ್ಕಾಗಿ ಹೊಂದಿರುವ ಕನಸುಗಳ ಕುರಿತು ಮಾಹಿತಿ ನೀಡಿತಾಯಿಯಿಂದ ಸಲಹೆಯನ್ನು ಪಡೆಯುವುದು ವಾಡಿಕೆಯಾಗಿದೆ. ಹೀಗಾಗಿಯೇತಮ್ಮ ಕೆಲಸ ಕಾರ್ಯಗಳ ಕುರಿತುಯಾರೇ ಕೇಳಿದರೂ ತಮಗೆಉತ್ತಮ ಸಂಸ್ಕಾರ ನೀಡಿ ಆಶೀರ್ವದಿಸುತ್ತಿರುವತಾಯಿ ಕಮಲಾಬಾಯಿ, ತಮ್ಮನ್ನು ಏಳಿಗೆಗೆ ಕಾರಣರಾದತಂದೆ ದಿ. ಬಿ. ಎಂ. ಪಾಟೀಲ, ಜನಸೇವೆಗೆ ಸ್ಪೂರ್ತಿಯಾದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳನ್ನು ಸಚಿವರು ಸ್ಮರಿಸುತ್ತಿರುವುದುಗಮನಾರ್ಹವಾಗಿದೆ. ಅಷ್ಟೇಅಲ್ಲ, ವಿಜಯಪುರದಿಂದ ಹೊರಗಿದ್ದರೂ ಪ್ರತಿನಿತ್ಯದೂರವಾಣಿ ಮೂಲಕ ತಾಯಿಯಜೊತೆ ಸಂಪರ್ಕದಲ್ಲಿರುತ್ತಾರೆ.
ಈಗ ವಿಜಯಪುರಕ್ಕೆ ಬಂದ ನಂತರ ಸಚಿವರುತಾಯಿಯದರ್ಶನದ ಬಳಿಕ ಬಿ. ಎಲ್. ಡಿ. ಇ ಸಂಸ್ಥೆಯಆವರಣದಲ್ಲಿರುವ ದಿ. ಬಿ. ಎಂ. ಪಾಟೀಲ ಅವರಗದ್ದುಗೆಗೆ ತೆರಳಿ ನಮನ ಸಲ್ಲಿಸಿದರು. ಅಲ್ಲದೇ, ವಚನಪಿತಾಮಹಡಾ. ಫ. ಗು. ಹಳಕಟ್ಟಿ ಹಾಗೂ ಬಂಥನಾಳ ಶಿವಯೋಗಿಗಳ ದೇವಸ್ಥಾನಕ್ಕೆ ತೆರಳಿ ನಮಸ್ಕರಿಸಿದರು. ನಂತರಜ್ಞಾನಯೋಗಾಶ್ರಮಕ್ಕೆ ತೆರಳಿ ನಮಸ್ಕರಿಸಿ ಆಶೀರ್ವಾದ ಪಡೆದರು.