ಯಶಸ್ವಿಯಾದ ಶ್ರೀರಾಮ ಮಂತ್ರಾಕ್ಷತೆ ವಿತರಣೆಯ ಶೋಭಾಯಾತ್ರೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.22; ಅಯೋಧ್ಯೆಯ ಶ್ರೀರಾಮಚಂದ್ರನ ಭವ್ಯದಿವ್ಯ ದೇಗುಲವು ಜನವರಿ 22 ರಂದು ಲೋಕಾರ್ಪಣೆಯ ಪ್ರಯುಕ್ತ ಇತ್ತೀಚಿಗೆ ದಾವಣಗೆರೆ ಎಂ.ಸಿ.ಸಿ.`ಬಿ’ ಬ್ಲಾಕ್‌ನ 38ನೇ ವಾರ್ಡ್ನಲ್ಲಿ ಶ್ರೀರಾಮ ಮಂದಿರದ ಮನೆ ಮನೆಗೆ ಮಂತ್ರಾಕ್ಷತೆ ವಿತರಣಾ ಅಭಿಯಾನ ನಿಮಿತ್ತವಾಗಿ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಮಹಿಳೆಯರು ಶ್ರೀರಾಮ, ಶ್ರೀ ಆಂಜನೇಯನ ಸಾಮೂಹಿಕ ಭಜನೆಯಲ್ಲಿ ಮಿಂದೆದ್ದರು. ದಾರಿಯುದ್ಧಕ್ಕೂ ಪ್ರತೀ ಮನೆಯ ಸಾರ್ವಜನಿಕರು ಅಭೂತಪೂರ್ವವಾಗಿ ಸ್ವಾಗತಿಸಿದರು. ವಾರ್ಡ್ನಲ್ಲಿ ಶ್ರೀರಾಮಚಂದ್ರ, ಸೀತೆ, ಲಕ್ಷö್ಮಣ ಭರತ, ಶತುÈಘ್ನನ, ಶ್ರೀ ಆಂಜನೇಯ ಬೃಹತ್ ಭಾವಚಿತ್ರದೊಂದಿಗೆ ಈ ವಾರ್ಡಿನ ಶ್ರೀ ಗಣಪತಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಶ್ರೀಲಕ್ಷಿö್ಮÃವೆಂಕಟೇಶ್ವರ ದೇವಸ್ಥಾನದಲ್ಲಿ ಕೊನೆಗೊಂಡಿತು. ಈ ಯಶಸ್ವಿ ಶೋಭಾಯಾತ್ರೆಯಲ್ಲಿ ಹರಿಹರದ ಶಾಸಕರಾದ ಬಿ.ಪಿ.ಹರೀಶ್, ಲೋಕಿಕೆರೆ ನಾಗರಾಜ್, ಡಾ. ರವಿಕುಮಾರ್ ಟಿ.ಜಿ., ಶ್ರೀನಿವಾಸ್ ದಾಸಕರಿಯಪ್ಪ ಈ ವಾರ್ಡ್ ಪ್ರಮುಖರಾದ ಪ್ರಶಾಂತ್, ಒ.ಬಿ.ಸಿ.ಪ್ರಧಾನ ಕಾರ್ಯದರ್ಶಿ ಪೋತುಲ ಶ್ರೀನಿವಾಸ್, ಬಿ.ಎಸ್.ಮೋಹನ್‌ರಾವ್, ಶ್ರೀ ಗಾಯತ್ರಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ, ಶ್ರೀಮತಿಯವರಾದ ನಿರ್ಮಲಾ, ವೇದಾ ಅವಿನಾಶ್, ಗಾಯತ್ರಿ ಬಾಳಿಗಾ, ಶೋಭಾ ವೆಂಕಟೇಶ್ ಕಿಣಿ, ಕೃತಿಕಾ ಕಿರಣ್‌ಶೆಣೈ, ಪದ್ಮಾ ವೆಂಕಟರಮಣ ಭಟ್, ರೇಖಾ ಪ್ರಭು, ಮುಕ್ತಾ ಶ್ರೀನಿವಾಸ್ ಪ್ರಭ, ಜ್ಯೋತಿ ಗಣೇಶ್ ಶೆಣೈ, ಶೀಲಾ ರವೀಂದ್ರ ನಾಯಕ್À, ರವಿಕಲಾ ಯೋಗಿಶ್ ಪೈ, ಮಮತಾ ಕೊಟ್ರೇಶ್ ಸೇರಿದಂತೆ ಪ್ರಮುಖ ಹಿಂದೂ ಬಾಂಧವರು, ಮಹಿಳೆಯರು, ಪುರುಷರು ಮಕ್ಕಳು, ಶ್ರೀರಾಮ ಭಜನೆಗೆ ಸಮೂಹ ನೃತ್ಯದೊಂದಿಗೆ ಉತ್ಸಾಹದಿಂದ ಪಾಲ್ಗೊಂಡಿದ್ದರು.