ಯಶಸ್ವಿಯಾದ ಯಶೋದಾ ಚಿತ್ರ : ಪತ್ರ ಬರೆದ ಧನ್ಯವಾದ ತಿಳಿಸಿದ ನಟಿ ಸಮಂತಾ

ಮುಂಬೈ, ನ ೧೯- ಥಿಯೇಟರ್‌ಗಳಲ್ಲಿ ಅಭಿಮಾನಿಗಳ ಸಿಳ್ಳೆ, ಸಂಭ್ರಮಾಚರಣೆಗಳೇ ಯಶೋದಾ ಚಿತ್ರಕ್ಕಾಗಿ ಪಟ್ಟ ಶ್ರಮ ಸಾರ್ಥಕವಾಗಿದೆ ಎಂದು ಬಹುಭಾಷಾ ನಟಿ ಸಮಂತಾ ರೂತ್ ಪ್ರಭು ಹೇಳಿದ್ದಾರೆ.
ಥಿಯೇಟರ್‌ಗಳಲ್ಲಿ ಸಂಭ್ರಮಾಚರಣೆಯನ್ನು ನೋಡುವುದು ’ಎಲ್ಲಾ ಶ್ರಮವು ಸಾರ್ಥಕವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಪತ್ರ ಬರೆದು ಸಮಾಂತ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ.ತನ್ನ ಪೋಸ್ಟ್ ನಲ್ಲಿ, “ಪ್ರಿಯ ಪ್ರೇಕ್ಷಕರೇ, ಯಶೋದಾ ಸಿನಿಮಾ ಬಗ್ಗೆ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನಿಮ್ಮ ಮೆಚ್ಚುಗೆ ಮತ್ತು ಬೆಂಬಲವನ್ನು ನಾನು ನೋಡುತ್ತಿದ್ದೇನೆ. ಇದು ನಾನು ಪಡೆದ ದೊಡ್ಡ ಉಡುಗೊರೆ. ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ನನಗೆ ತುಂಬಾ ಖುಷಿ ಕೊಡುತ್ತಿದೆ ಎಂದು ಸಮಂತಾ ಖುಷಿಯಿಂದ ಹೇಳಿಕೊಂಡಿದ್ದಾರೆ.
ಚಿತ್ರಮಂದಿರಗಳಲ್ಲಿ ಯಶೋದಾ ಚಿತ್ರ ವೀಕ್ಷಿಸಿ ನೀವುಪಟ್ಟ ಸಂಭ್ರಮವನ್ನು ನೋಡಿದೆ. ಸಿನಿಮಾದ ಬಗ್ಗೆ ನೀವು ಹೇಳಿದ್ದನ್ನು ಕೇಳಿದೆ. ಇದರ ಹಿಂದೆ ನಮ್ಮ ಚಿತ್ರತಂಡದ ಶ್ರಮವಿದೆ. ಈಗ ನನ್ನ ಮನಸ್ಸು ಗಾಳಿಯಲ್ಲಿ ತೇಲುತ್ತಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ’ಯಶೋದೆ’ಯನ್ನು ನಿಮ್ಮ ಮುಂದೆ ತರಲು ಕಾರಣರಾದವರಿಗೆ ಮತ್ತು ಈ ಯೋಜನೆಯಲ್ಲಿ ತೊಡಗಿಸಿಕೊಂಡವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಮತ್ತು ಈ ಕಥೆಯನ್ನು ನಂಬಿದ ನಿರ್ಮಾಪಕ ಶ್ರೀದೇವಿ ಮೂವೀಸ್ ಶಿವಲೆಂಕ ಕೃಷ್ಣಪ್ರಸಾದ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ನಿರ್ದೇಶಕರಾದ ಹರಿ ಮತ್ತು ಹರೀಶ್ ಜೊತೆ ಕೆಲಸ ಮಾಡಿದ್ದು ನನಗೆ ಅಪಾರ ಖುಷಿ ಕೊಟ್ಟಿದೆ. ಈ ಕಥೆಗಾಗಿ ಸಾಕಷ್ಟು ಸಂಶೋಧನೆಗಳು ನಡೆದಿವೆ. ವರಲಕ್ಷ್ಮಿ ಶರತ್‌ಕುಮಾರ್, ಉಣ್ಣಿ ಮುಕುಂದನ್, ಇತರ ಎಲ್ಲಾ ನಟರು ಮತ್ತು ತಂತ್ರಜ್ಞರೊಂದಿಗೆ ಕೆಲಸ ಮಾಡಲು ಸಂತೋಷವಾಗಿದೆ.
ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ನೀಡಿದ್ದಾರೆ. ಮಾರ್ತಾಂಡ್ ಕೆ. ವೆಂಕಟೇಶ್ ಸಂಕಲನ ಮಾಡಿದ್ದಾರೆ. ವೈಜ್ಞಾನಿಕ ಕಾಲ್ಪನಿಕ ಥ್ರಿಲ್ಲರ್ ಟ್ರ್ಯಾಕ್‌ನಲ್ಲಿ ಬಂದ ಈ ಚಿತ್ರದಲ್ಲಿ ರಾವ್ ರಮೇಶ್, ವರಲಕ್ಷ್ಮಿ ಶರತ್‌ಕುಮಾರ್, ಉಣ್ಣಿ ಮುಕುಂದನ್, ಮುರಳಿ ಶರ್ಮಾ, ಸಂಪತ್ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್, ದಿವ್ಯಾ ಶ್ರೀಪಾದ ಮತ್ತು ಪ್ರಿಯಾಂಕಾ ಶರ್ಮಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಸಮಂತಾ ಬಾಡಿಗೆ ತಾಯಿಯಾಗಿ ನಟಿಸಿದ್ದು, ಗಂಭೀರ ವೈದ್ಯಕೀಯ ಅಪರಾಧದ ರಹಸ್ಯಗಳನ್ನು ಧೈರ್ಯದಿಂದ ಬಿಚ್ಚಿಟ್ಟಿದ್ದಾರೆ. ಯಶೋದಾ ಬಹುಭಾಷಾ ಚಿತ್ರವಾಗಿದ್ದು, ತಮಿಳು ಮತ್ತು ತೆಲುಗಿನಲ್ಲಿ ಚಿತ್ರೀಕರಿಸಲಾಗಿದೆ, ಯಶೋದಾವನ್ನು ಹಿಂದಿ, ಕನ್ನಡ ಮತ್ತು ಮಲಯಾಳಂ ಎಂಬ ಮೂರು ಹೆಚ್ಚುವರಿ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ.ಕ್ರಿಸ್‌ಮಸ್ ೨೦೨೨ ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿರುವ ನಟ ವಿಜಯ್ ದೇವರಕೊಂಡ ಜೊತೆಗೆ ಮುಂಬರುವ ರೋಮ್ಯಾಂಟಿಕ್ ಚಿತ್ರ ಖುಷಿಯಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.