ಯಶಸ್ವಿಯಾದ ಭಾರತ ಹುಣ್ಣಿಮೆಯ ಶ್ರೀ ಗಾಯತ್ರಿ ಉಪಾಸನೆ 

ಸಂಜೆವಾಣಿ ವಾರ್ತೆ

ದಾವಣಗೆರೆ, ಫೆ.೨೬; ದಾವಣಗೆರೆಯ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆಯಿಂದ ಭಾರತ ಹುಣ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಆವರಣದಲ್ಲಿ ನಡೆದ ಶ್ರೀ ಗಾಯತ್ರಿ ಉಪಾಸನೆ, ಸಾಮೂಹಿಕ ಪೂಜೆ ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.ಧಾರ್ಮಿಕ ಪರಂಪರೆಯ ಈ ಆಧ್ಯಾತ್ಮ ಪೂಜೆಯ ಸೇವೆ ಶ್ರೀ ಸತ್ಯನಾರಾಯಣ ಮೂರ್ತಿ ಮತ್ತು ಕುಟುಂಬ ಪರಿವಾರದ ಗೌರವ ಅಧ್ಯಕ್ಷರಾದ ಡಾ. ಸುಶೀಲಮ್ಮ, ಗೌರವ ಉಪಾಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಅಧ್ಯಕ್ಷರಾದ ಡಾ. ರಮೇಶ್ ಪಟೇಲ್, ಖಜಾಂಚಿ ಪುರುಷೋತ್ತಮ ಡಿ.ಪಟೇಲ್, ಸಂಚಾಲಕರಾದ ಭಾವನ್ನಾರಾಯಣ ಸಮಿತಿ ಸದಸ್ಯರಾದ ಎಂ.ಎಸ್.ಪ್ರಸಾದ್, ಆರ್.ಎಂ.ಸತೀಶ್, ಸತ್ಯನಾರಾಯಣ ಮೂರ್ತಿ, ಶಿವಕುಮಾರ್, ವಾಸು ವೀರಭದ್ರರಾವ್, ವಿ.ಕೃಷ್ಣಮೂರ್ತಿ, ಬಿ.ವಿ. ಪ್ರಸಾದ್, ಶ್ರೀಮತಿ ಸುಮಾ ಏಕಾಂತಪ್ಪ ಮುಂತಾದವರು ಉಪಸ್ಥಿತರಿದ್ದರು.