ಯಶಸ್ವಿಯಾದ ಪೊಲೀಸರ ವಿಶೇಷ ಕಾರ್ಯಾಚರಣೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು21: ಪಟ್ಟಣದಲ್ಲಿ ಗುರುವಾರ ಕರ್ಕಶ ಶಬ್ದ ಮಾಡುತ್ತಾ ಮೋಟಾರ್ ಸೈಕಲ್ ಚಾಲನೆ ಮಾಡುತ್ತಿದ್ದ ಸವಾರರ ಮೇಲೆ ಕ್ರಮಕ್ಕೆ ಪೆÇಲೀಸರು ರೂಪಿಸಿದ್ದ ಸ್ಪೆಷಲ್ ಡ್ರೈವ್ ಕಾರ್ಯಕ್ರಮ ಯಶಸ್ವಿಯಾಯಿತು. ಮುಂಜಾನೆಯಿಂದ ಮಧ್ಯಾಹ್ನ 12 ಗಂಟೆ ಒಳಗಾಗಿ ಕರ್ಕಶ ಶಬ್ದ ಮಾಡುತ್ತಿದ್ದ 21 ಮೋಟರ್ ಸೈಕಲ್‍ಗಳ ಸೈಲೆನ್ಸರ್ ಪೈಪ್‍ಗಳನ್ನು ಕಿತ್ತು ಒಂದೆಡೆ ಕೂಡಿ ಹಾಕಿದ್ದಾರೆ ಮತ್ತೊಂದು ಕಡೆ ಅಪ್ರಾಪ್ತರು ಚಲಾಯಿಸುತ್ತಿದ್ದ 46 ಮೋಟರ್ ಸೈಕಲ್ ಗಳನ್ನು ವಶಪಡಿಸಿಕೊಂಡು ಠಾಣೆಯಲ್ಲಿ ಕೂಡಿ ಹಾಕಿದ್ದರು.
ಒಟ್ಟು 67 ಮೋಟರ್ ಸೈಕಲ್ ವಶಪಡಿಸಿಕೊಂಡ ಅದರಲ್ಲಿ 46 ಅಪ್ರಾಪ್ತ ಚಾಲನೆ ಮಾಡಿದ ಮೋಟರ್ ಸೈಕಲ್ ಸವಾರರಿಗೆ ಮತ್ತು 21 ಕರ್ಕಶ ಶಬ್ದ ಮಾಡುತ್ತಾ ಸಾಗುತ್ತಿದ್ದ ಮೋಟರ್ ಸೈಕಲ್ ಸವಾರರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಸ್ಪೆಷಲ್ ಡ್ರೈವ್ ಕಾರ್ಯಕ್ರಮ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ರ ಹಾಗೂ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ ಬೇಟಿಗೇರಿ ಸಿಪಿಐ ಬಿ ಎಸ್ ಸುಬ್ಬಾರ್ ಮಠ ಮುಳುಗುಂದ ಸಿಪಿಐ ಅಶೋಕ್ ಸದಲಗಿ ಸೇರಿದಂತೆ ಪಿಎಸ್‍ಐ ಗಳಾದ ಯೂಸುಫ್ ಜಮೂಲ ವಿಜಿ ಪವಾ ರ ವಿಜಯ ತಳವಾರ ಶಕುಂತಲಾ ನೂರ್ ಜಹಾನ್ ಕವಲೂರ ಜಕಲಿ ಸೇರಿದಂತೆ ಜಿಲ್ಲೆಯ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.