
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೩; ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆಯ ಆಶ್ರಯದಲ್ಲಿ ನಿನ್ನೆ ದಿನ ಕೇರಳ ರಾಜ್ಯದ, ಕಾಸರಗೋಡು ಜಿಲ್ಲೆಯ, ಮಂಗಲ್ಪಾಡಿಯ ಏಕಾಹ ಭಜನಾ ಮಂದಿರದಲ್ಲಿ ಅಧಿಕ ಮಾಸದ ಶ್ರಾವಣ ಹಾಗೂ ರಾಮಾಯಣ ಮಾಸಾಚರಣೆ ಪ್ರಯುಕ್ತ ಕುವೆಂಪುರವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಶಬರಿಗದನು ಅತಿಥಿ ಧಾಶರಥಿ ಎಂಬ ಭಾಗದ ವಾಚನ ವ್ಯಾಖ್ಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.ಸಂಗೀತ ಖ್ಯಾತಿಯ ಶ್ರೀಮತಿ ದಿವ್ಯಾ ಚಂದನ್ ಕಾರಂತ್ ಗಮಕ ವಾಚನ ಮಾಡಿದರು. ವ್ಯಾಖ್ಯಾನವನ್ನು ಅಚ್ಚುಕಟ್ಟಾಗಿ ರಾಮಾಯಣದ ಮೂಲಗ್ರಂಥ ವಿವರಣೆಯನ್ನು ಕಲಾಕುಂಚ ಕೇರಳ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷಿö್ಮÃ ಕಾರಂತ್‌ರವರು ಪ್ರೇಕ್ಷಕರ ಮನ ಮುಟ್ಟುವಂತೆ ವಿವರಿಸಿದರು. ಈ ಶಾಖೆಯ ಪದಾಧಿಕರಿಗಳು ಉಪಸ್ಥಿತರಿದ್ದರು.