ಯಶಸ್ವಿಯಾಗಿ ನಡೆದ ಶ್ರೀ ಗಾಯತ್ರಿ  ಸಾಮೂಹಿಕ ಶ್ರೀ ಗಾಯತ್ರಿ ಉಪಾಸನೆ

ದಾವಣಗೆರೆ, ನ.೯;ದಾವಣಗೆರೆಯ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದಿಂದ  ಗೌರಿ ಹುಣ್ಣಿಮೆಯ ಅಂಗವಾಗಿ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದಲ್ಲಿ ಶ್ರೀ ಗಾಯತ್ರಿ ದೇವಿ ಸಾಮೂಹಿಕ ಪೂಜೆ, ಉಪಾಸನೆ ಸಾಂಗವಾಗಿ ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದರು.ಹುಣ್ಣಿಮೆ ದಿನದ ರಾಹುಗ್ರಸ್ತ ಚಂದ್ರ ಗ್ರಹಣದ ಬಗ್ಗೆ ವಿವರಿಸಿ ಶೆಣೈಯವರ ಜತೆಯಲ್ಲಿ ಇಂದಿನ ಪೂಜಾ ಸೇವಾಕರ್ತರಾದ ಉತ್ತಮ್‌ಚಂದ್ ಗಾಂಧಿ, ಪರಿವಾರದ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಸಂಚಾಲಕರಾದ ಭಾವನ್ನಾರಾಯಣ, ಕಛೇರಿ ಕಾರ್ಯದರ್ಶಿ ವಿ.ಕೃಷ್ಣಮೂರ್ತಿ, ಸಮಿತಿ ಸದಸ್ಯರಾದ ವಾಸು ವೀರಭದ್ರಪ್ಪ, ಬಿ.ಸತ್ಯನಾರಾಯಣ, ಸತೀಶ್, ಎಂ.ಎಸ್.ಪ್ರಸಾದ್, ಉಪಾಧ್ಯಕ್ಷರಾದ ಡಾ. ರಮೇಶ್ ಪಟೇಲ್ ವೀರಭದ್ರಪ್ಪ ದಂಪತಿಗಳು ಮುಂತಾದವರು ಉಪಸ್ಥಿತರಿದ್ದರು.