ಯಶಸ್ವಿಯಾಗಿ ನಡೆದ ಕ್ರೀಡಾಕೂಟ

ಶಹಾಪೂರ:ನ.12:ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಸಮಾಜ ಕಲ್ಯಾಣ,ಪರಿಶಿಷ್ಠ ವರ್ಗಗಳ ಇಲಾಖೆ ,ಹಿಂದುಳಿದ ವರ್ಗಗಳ ಇಲಾಖೆ ಯಾದಗಿರಿ ಇವರ ಸಹಯೋಗದಲ್ಲಿ ಜಿಲ್ಲಾ ಕ್ರೀಡಾಂಗಣ ಯಾದಗಿರಿ ಇಲ್ಲಿ ನಡೆದ ಜಿಲ್ಲೆಯ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚನ್ನಮ್ಮ /ಡಾ:ಬಿ.ಆರ್ ಅಂಬೇಡ್ಕರ್ / ಇಂದಿರಾಗಾಂಧಿ/ಏಕಲವ್ಯ ವಸತಿ ಶಾಲೆ ಸೇರಿದಂತೆ ಎಲ್ಲಾ ವಸತಿ ಶಾಲೆಗಳ ವಿದ್ಯಾರ್ಥಿಗಳ ಕ್ರೀಡಾಕೂಟವು ಯಶಸ್ವಿಯಾಗಿ ಜರುಗಿತು.
ಮೊದಲು ತಾಲೂಕ ಮಟ್ಟದಲ್ಲಿ ಗೆದ್ದ ತಂಡಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು ಗ್ರಾಮೀಣ ಸೊಗಡಿನ ಆಟವಾದ ಕಬ್ಬಡ್ಡಿ ಆಟವು ಅತ್ಯಂತ ರೋಮಾಂಚನಕಾರಿಯಾಗಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ ಜಿದ್ದಾ ಜಿದ್ದಿನ ಸ್ಪರ್ಧೆಯಲ್ಲಿ ಯಾದಗಿರಿ ಜಿಲ್ಲೆಯ ಆರು ತಾಲೂಕುಗಳಿಂದ ಆಗಮಿಸಿದ ತಂಡಗಳು ಸ್ಪರ್ಧೆಗೆ ಇಳಿದು ಅಂತಿಮ ಪಂದ್ಯದಲ್ಲಿ ಹುಣಸಿಗಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡರು ದ್ವಿತೀಯ ಸ್ಥಾನವನ್ನು ಯಾದಗಿರಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪಡೆದುಕೊಂಡರು, ಪ್ರಾಥಮಿಕ ವಿಭಾಗದಲ್ಲಿ ವಾಲಿಬಾಲ್ ಸ್ಪರ್ಧೆಯಲ್ಲಿ ಕೆಂಭಾವಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ವಡಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪಡೆದುಕೊಂಡರು ಮತ್ತು ವೈಯಕ್ತಿಕ ಆಟದಲ್ಲಿ 100 ಮೀಟರ್ ರಿಲೇ,200 ಮೀಟರ್ ರಿಲೇ, ಗುಂಡು ಎಸೆತ ಚಕ್ರ ಎಸೆತ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸ್ಪರ್ದಿಸಿ ವಿಜಯಶಾಲಿಗಳಾದರು.