ಯಶಸ್ವಿಯಾಗಿ ನಡೆದ ಕಾಲ್ನಡಿಗೆ ಜಾಥ

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.೨೭: ಕುಂದುವಾಡ ಕೆರೆ ವಾಯು ವಿಹಾರ ಬಳಗದಿಂದ ದಾವಣಗೆರೆಯಿಂದ ಹರಿಹರಕ್ಕೆ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥದಲ್ಲಿ ಸುಮಾರು 500 ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿ ನಡೆಸಲಾಯಿತು.ಹರಿಹರಕ್ಕೆ ತಲುಪಿದ ನಂತರ ಅಲ್ಲಿ ದೇವಸ್ಥಾನದ ಆವರಣದಲ್ಲಿ ವಾಯು ವಿಹಾರಿಗಳಿಗೆ ಯೋಗ ಮತ್ತು ಧ್ಯಾನ ಮಾಡಿಸಲಾಯಿತು. ನಂತರ ಬಳಗದವರಿಂದ ಏರ್ಪಡಿಸಿದ್ದ ಉಪಹಾರವನ್ನು ಸೇವಿಸಿ ದಾವಣಗೆರೆಗೆ ಹಿಂತಿರುಗಿದರು.ಬಳಗದ ಮುಖ್ಯಸ್ಥ ಜೆ. ಈಶ್ವರಸಿಂಗ ಕವಿತಾಳ್, ಬಿ.ಹೆಚ್. ಶಿವಕುಮಾರ, ಸೋಮಶೇಖರ ಬಾಬು, ಮುರುಳಿಧರ ಗುಪ್ತ, ಜಿ.ಎಸ್. ರಾಜರಾವ್, ವಿಜಯಕುಮಾರ್ ಬಾಳೆಹೊಲ, ರಮೇಶ ಕೆ.ಹೆಚ್. ಪ್ರಕಾಶ್ ಅಧಿಕಾರಿ, ಮಹಾಲಿಂಗೇಶ್, ಪ್ರಭು ರಾಜ್, ಜಯಣ್ಣ ಆಲೂರು, ಬಸವರಾಜ ಆಲೂರು, ರಾಕೇಶ್, ಮಲ್ಲಿಕಾರ್ಜುನ ಕಂಬ್ಳೆ, ನಿರಂಜನ ಮೂರ್ತಿ, ಥಾಮೊಸರ ರಾಮಮೂರ್ತಿ, ಅರುಣ ಮತ್ತಿತರರು ಪಾಲ್ಗೊಂಡಿದ್ದರು