ಯಶಸ್ವಿಯಾಗಿ ಜರುಗಿದ ಸೈನಿಕ್ ಶಾಲೆ ವಜ್ರಮಹೋತ್ಸವ

(ಸಂಜೆವಾಣಿ ವಾರ್ತೆ)
ವಿಜಯಪುರ: ಜು.15:ಸೈನಿಕ ಶಾಲೆಯ ವಜ್ರಮಹೋತ್ಸವ ಅಂಗವಾಗಿ ಶುಕ್ರವಾರ ಸಂಜೆ ನಗರದ ಸೈನಿಕ ಶಾಲೆಯ ಆಡಿಟೋರಿಯಂನಲ್ಲಿ ಪ್ಲಾಯಿಂಗ್ ಲೆಫ್ಟಿನಂಟ್ ಎಲ್.ಎಸ್.ರೂಪಚಂದ್ರ ನೇತೃತ್ವದಲ್ಲಿ ಜರುಗಿದ ವಾಯುದಳದ ಸಿಂಫೋನಿ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
ಸಂಗೀತ ಕಾರ್ಯಕ್ರಮದಲ್ಲಿ ದೇಶ ಭಕ್ತಿಗೀತೆ, ಚಲನಚಿತ್ರ ಗೀತೆಗಳು ಹಾಗೂ ಕನ್ನಡದ ಹೆಸರಾಂತ ಕಲಾವಿದರಾದ ಪುನೀತರಾಜ್‍ಕುಮಾರ ಅವರ ಬೊಂಬೆ ಹೇಳುತೈತಿ ಹಾಗೂ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಕನ್ನಡ ಗೀತೆಗಳು ವಿಜಯಪುರದ ಕಿಶೋರಕುಮಾರ ಭಜಂತ್ರಿ ಅವರು ಹಾಡಿದ ಹಾಡುಗಳು ಸಭಿಕರನ್ನು ರಂಜಿಸಿತು.
ಕಾರ್ಯಕ್ರಮದಲ್ಲಿ ಸೈನಿಕ ಶಾಲೆ ಪ್ರಾಚಾರ್ಯರಾದ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಭಿಷ್ಟ ಅವರು ನೆನಪಿನ ಕಾಣಿಕೆ ವಿತರಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಡಾ.ಶ್ವೇತಾ ದಾನಮ್ಮನವರ, ಜಾವೀದ ಜಮಾದಾರ, ಸೈನಿಕ ಶಾಲೆಯ ವಿದ್ಯಾರ್ಥಿಗಳು, ಪಾಲಕರು ಇತರರು, ಉಪಸ್ಥಿತರಿದ್ದರು.