
ಕಲಬುರಗಿ,ಮಾ,13: ಚಿತ್ತಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಂಗಳೂರಿನ ಜನಹಿತ ಸಂಸ್ಥೆ (JANAHIT Organization Bengaluru) ಇವುಗಳ ಸಂಯುಕ್ತಾಶ್ರಯದಲ್ಲಿ ವಯೋವೃದ್ಧರಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರವು ರವಿವಾರ ಚಿತ್ತಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಜರುಗಿತು.
ಈ ಶಿಬಿರದಲ್ಲಿ 122 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ತಾಲೂಕಿನ ವಿವಿಧ ಪ್ರಾ.ಆ.ಕೇಂದ್ರ/ಸ.ಆ.ಕೇಂದ್ರ ಗಳ ವೈದಾಧಿಕಾರಿಗಳು, ನೇತ್ರ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಸದರಿ ಶಿಬಿರ ಯಶಸ್ವಿಗೊಳಿಸಲು ಶ್ರಮಿಸಿರುತ್ತಾರೆ.
ಚಿತ್ತಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ನೇತ್ರ ಶಸ್ತ್ರಚಿಕಿತ್ಸಕರಾದ ಡಾ|| ಶಿಲ್ಪಾ, ಆಡಳಿತ ವೈದಾಧಿಕಾರಿಗಳಾದ ಡಾ|| ರಮೇಶ ಜಾಧವ, ಇತರೆ ವೈದ್ಯಾಧಿಕಾರಿಗಳಾದ ಡಾ|| ನಂದಾ ರಾಂಪುರೆ, ಡಾ|| ರಾಜಕುಮಾರ, ಡಾ|| ಮುಬಾಶೀರ, ಡಾ|| ಕಾಝೀಮ್ ಅಲಿ, ಡಾ|| ಸ್ಮøತಿ, ಡಾ|| ವೀರೇಂದ್ರ ಡಾ|| ಶ್ರೀಧರ., ಡಾ|| ರಾಣಪ್ಪಾ, ಡಾ|| ಖಮರುದ್ದೀನ್ ಹಾಗೂ ಇನ್ನಿತರ ವೈದ್ಯರು ಹಾಗೂ ಸಿಬ್ಬಂದಿಗಳು ಶಿಬಿರದಲ್ಲಿ ಉಪಸ್ಥಿತರಿದ್ದರು.