ಯಶಸ್ವಿಯಾಗಲು ಭಾಷಾ ಕೌಶಲ್ಯ ಮುಖ್ಯ

ಸಂಜೆವಾಣಿ ವಾರ್ತೆ 

ದಾವಣಗೆರೆ.ಆ.೧೨;: ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿ ಆಗಬೇಕೆಂದರೆ ಅದಕ್ಕೆ ತಕ್ಕಂತಹ ಉತ್ತಮ ಬಾಷಾ ಕೌಶಲ್ಯ ಗಳನ್ನು ಬೆಳೆಸಿಕೊಂಡಾಗ ಅದು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಅಂಜನಪ್ಪ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಉದ್ಯೋಗ  ಮತ್ತು ಕೌಶಲ್ಯ ಕೋಶದ ವತಿಯಿಂದ ಅಂತಿಮ ಎಂ ಕಾಂ ವಿದ್ಯಾರ್ಥಿಗಳಿಗೆ ಆಯೂಜಿಸಿದ್ದ ಉನ್ನತಿ ಫೌಂಡೇಶನ್ 30 ದಿನಗಳ ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಉದ್ಯೋಗ ಮಾರುಕಟ್ಟೆ ಎಂಬುದು ಕೌಶಲ್ಯಗಳ ಆಧಾರದ ಮೇಲೆ ಅವಲಂಬಿತವಾಗಿದೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಭಾಷೆ ಯಾವುದಾದರೂ ಪರವಾಗಿಲ್ಲ  ಅದರ ಪ್ರಭುತ್ವ ಸಾಧಿಸುವುದು ತುಂಬಾ ಮುಖ್ಯ ಹಾಗಾಗಿ ಈ ತರಹದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ  ಅವುಗಳನ್ನು ಗಳಿಸಿಕೊಂಡರೆ ನೀವು ಯಶಸ್ವಿ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದರು. ಸಂವಹನ ಕೌಶಲ್ಯ ಕಲಿಕೆ ಸಂದರ್ಶನ ಎದುರಿಸುವಿಕೆ ಇಂಥ ಮುಂತಾದ ಕೌಶಲ್ಯಗಳನ್ನು ಈ ತರಹದ  ಕಾರ್ಯಕ್ರಮಗಳಿಂದ ಕಾಲೇಜಿನಲ್ಲಿ ಆಯೋಜನೆ ಮಾಡಿದಾಗ ಅದರ ಪ್ರಯೋಜನ ಪಡೆದುಕೊಂಡು ಯಶಸ್ವಿಯಾಗಲು ಕರೆ ನೀಡಿದರು.ಪ್ಲೇಸ್ಮೆಂಟ್ ಸೆಲ್ ನ ಸಂಚಾಲಕರಾದ ಪ್ರೊ ವೆಂಕಟೇಶ ಬಾಬುರವರು ಮಾತನಾಡುತ್ತಾ ಉನ್ನತಿ ಫೌಂಡೇಶನ್ ಪ್ರತಿವರ್ಷ ಕಾಲೇಜಿನಲ್ಲಿ 30 ದಿನಗಳ ಕಾರ್ಯಗಾರವನ್ನು ಹಮ್ಮಿಕೊಂಡಿರುತ್ತೇದೆ ಈ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಉದ್ಯೋಗ ಕೌಶಲ್ಯ ತರಬೇತಿಗಳು ಜೀವನ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಕಲಿಕೆಯನ್ನು ಬರೀ ಪಾಠ ಪ್ರವಚನಗಳಿಂದ ಅಷ್ಟೇ ಅಲ್ಲದೆ ಚಟುವಟಿಕೆಗಳ ಮೂಲಕ ಗುಂಪು ಚರ್ಚೆಗಳ ಮೂಲಕ ಕ್ರಿಯಾತ್ಮಕವಾಗಿ ಕಲಿಯಬಹುದು ಎಂಬುದನ್ನು ಈ ಕಾರ್ಯಗಾರದ ಮೂಲಕ ಅವರಿಗೆ ಮನವರಿಕೆ ಮಾಡಿ ಮುಂದಿನ ಉದ್ಯೋಗ ಮಾರುಕಟ್ಟೆಗೆ ಸದೃಢಗೊಳ್ಳುವಲ್ಲಿ ಬೇಕಾಗುವ ಎಲ್ಲಾ ರೀತಿಯ    ಕೌಶಲ್ಯಗಳನ್ನು   ಒದಗಿಸುತ್ತದೆ ಎಂದು ಹೇಳಿದರು. ಪ್ರತಿ ವರ್ಷ ಕಾಲೇಜಿನಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಆ ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಉನ್ನತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಪವನ್ ರವರು ಮಾತನಾಡುತ್ತಾ  ನಮ್ಮ ಸಂಸ್ಥೆಯು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ತರಹದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ ಈ ತರ ಕಾರ್ಯಕ್ರಮಗಳು ಬೇರೆ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೋಸ್ಕರ ಆಯೋಜನೆ ಮಾಡುವುದಿಲ್ಲ ಸರ್ಕಾರವು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು   ಕೌಶಲ ಅಭಿವೃದ್ಧಿ ಕಾರ್ಯಗಾರಗಳನ್ನು ಮಾಡುತ್ತಿರುವುದು  ಸ್ವಾಗತ.  ವಿದ್ಯಾರ್ಥಿಗಳು ತಮಗೆ ಉತ್ತಮವಾಗಿ ಸ್ಪಂದಿಸಿ ಪ್ರಯೋಜನ ಪಡೆದುಕೊಂಡರು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾದ ಅಪೂರ್ವ ರವರು ಮಾತನಾಡುತ್ತಾ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಬಹು ಮುಖ್ಯವಾಗುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮವಾಗಿ ಪಾಲ್ಗೊಂಡರೆ ಏನನ್ನಾದರೂ ಕಲಿಯಲು ಸಾಧ್ಯ ಆಗ ಕ್ರಿಯಾತ್ಮಕತೆ ಹೊಸತನ ತಮ್ಮಲ್ಲಿ ಮೂಡಿ ಬರಲು ಅದು ಸಹಾಯವಾಗುತ್ತದೆ ಹಾಗಾಗಿ ಕಲಿಯುವಾಗ ಒಳಗೊಳ್ಳುವಿಕೆ  ತುಂಬಾ ಅನುಕೂಲ ಮಾಡುತ್ತದೆ ಅದನ್ನು ಮುಂದೆ ರೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ಕಾರ್ಯಕ್ರಮ ಕುರಿತು ವಿದ್ಯಾರ್ಥಿಗಳಾದ ಮಾರುತಿ ಸ್ವಪ್ನ ರಮೇಶ್ ರವಿ ಮಮತಾ ಸಹನಾ ಇವರುಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.ಕಾರ್ಯಕ್ರಮವನ್ನು  ವಿದ್ಯಾರ್ಥಿನಿ ನಾಗರತ್ನ ರವರು ನಿರೂಪಿಸಿದರು. ಮಧುರವರು ಸ್ವಾಗತಿಸಿದರು ರಾಹುಲ್ ರವರು ವಂದಿಸಿದರು ಅಶ್ವಿನಿ ಮತ್ತು ಸ್ವಾಮಿರವರು ಪ್ರಾರ್ಥನೆ ಗೀತೆಯನ್ನು ಹಾಡಿದರು.  ಉಪನ್ಯಾಸಕರಾದ ದೇವೇಂದ್ರಪ್ಪ ರವರು ಹಾಗೂ ಇತರೆ ಎಲ್ಲಾ ಅಧ್ಯಾಪಕರು ಭಾಗವಹಿಸಿದ್ದರು.