ಯಶವಂತರಾಯಗೌಡ ಪಾಟೀಲ ಸ್ವಾಮಿವಿವೇಕಾನಂದ ಪುತ್ಥಳಿಗೆ ಹಣ ನೀಡಿರುವುದರಿಂದ ಗಣ್ಯರಿಂದ ಅಭಿನಂದನೆ

ಇಂಡಿ: ಜ.20:ಪಟ್ಟಣದಲ್ಲಿ ನಿರ್ಮಿಸುತ್ತಿರುವ ಸ್ವಾಮಿ ವಿವೇಕಾನಂದರ ಕಂಚಿನ ಪುತ್ಥಳಿಗೆ ಸುಮಾರು 7 ಲಕ್ಷ ಹಣ ನೀಡಿದ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷರು. ಪದಾಧಿಕಾರಿಗಳು ಹಾಗೂ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

 ಬಹುದಿನಗಳಿಂದ ನಮ್ಮ ಸಂಘದ ಬೇಡಿಕೆ ಇತ್ತು. ಈ ದೇಶದ ಸಾಂಸ್ಕøತಿಕ ಅಧ್ಯಾತ್ಮಿಕ,ಧಾರ್ಮಿಕ  ತತ್ವಶಾಸ್ತ್ರಗಳಿಗೆ ಸ್ವಾಮಿ ವಿವೇಕಾನಂದರು ಈ ದೇಶ ಆಸ್ತಿ ಇದ್ದಂತೆ. ಇಂದಿನ ಯುವ ಸಮುದಾಯಕ್ಕೆ  ದೇಶಾಭಿಮಾನ, ರಾಷ್ಟ್ರೀಯತೆ ,ಮಾನವೀಯ ಮೌಲ್ಯಗಳು  ಅವಶ್ಯಕತೆ ಇದ್ದು ಇಂತಹ ಮಹಾತ್ಮರ ಆದರ್ಶಗಳೆ ದಾರಿ ದೀಪ . ಮಹಾನ್ ತೇಜಸ್ವೀ ಸಂತ ವಿವೇಕಾನಂದ ಪುತ್ಥಳಿ ನೋಡಿದಾಗ  ಪ್ರತಿಯೋಬ್ಬರಲ್ಲಿ ಅಭಿಮಾನ ಇಮ್ಮಡಿಗೋಳ್ಳುತ್ತದೆ ಆದ್ದರಿಂದ ಪಟ್ಟಣದಲ್ಲಿ ಶಾಸಕರು ವಿವೇಕಾಂದರ ಪುತ್ಥಳಿಗೆ ಹಣ ನೀಡಿ ಯುವ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ ಎಂದು ರಾಮಸಿಂಗ ಕನ್ನೋಳ್ಳಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮುಖಂಡರಾದ ಜಗದೀಶ ಕ್ಷತ್ರಿ, ಯಮುನಾಜಿ ಸಾಳುಂಕೆ, ಶ್ರೀಕಾಂತ ಕುಡಿಗನೂರ, ಸತೀಶ ಕುಂಬಾರ, ಹುಚ್ಚಪ್ಪ ತಳವಾರ, ರಾಜು ಕಟ್ಟಿಮನಿ, ಮಹೇಶ ಮೈದರಗಿ, ಉಮೇಶ ದೇಗಿನಾಳ, ಸುಧೀರ ಕರಕಟ್ಟಿ, ಪವನ ಡಮನಾಳ, ಧಾನಪ್ಪ ಹತ್ತಿ, ಪ್ರಕಾಶ ಬಿರಾದಾರ, ನೀಲ ತಡಕಲ್, ಪ್ರಕಾಶ ಕಂಬಾರ, ಶ್ರೀಧರ ಜಂಪಾ, ಷಣ್ಮುಖ ಲಬ್ಬಾ, ಮಹೇಶ ಕುಂಬಾರ ಸೇರಿದಂತೆ ಅನೇಕರು ಅಭಿನಂದೆ ಸಲ್ಲಿಸಿದ್ದಾರೆ.