ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನನೀಡಿ :ಗುರುನಾಥ ಹಾವಳಾಗಿ

ಇಂಡಿ : ಮೇ.16:ಮಹಾರಾಷ್ಟ್ರ ಕರ್ನಾಟಕ ಗಡಿಭಾಗದಲ್ಲಿರುವ ಇಂಡಿ ವಿಧಾನ ಸಭೆ ಕ್ಷೇತ್ರವು ಅಭಿವೃದ್ಧಿ ಯಿಂದ ವಂಚಿತವಾಗಿದೆ. ನಂಜುಂಡಪ್ಪ ವರದಿಯ ಪ್ರಕಾರ ಈ ಭಾಗವು ಅತ್ಯಂತ ಹಿಂದುಳಿದ ಭಾಗವಾಗಿದೆ. ಅದನ್ನು ಅಳಿಸಿ ಹಾಕಲು ಅತ್ಯಂತ ಶ್ರಮ ವಹಿಸಿ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಗೊಳಿಸಿ ಅಭಿವೃದ್ಧಿಪರ ಚಿಂತನೆಯಿಂದ ಸತತ 3ಬಾರಿ ಗೆಲುವು ಸಾಧಿಸಿರುವ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಗಾಣಿಗ ಸಮಾಜದ ಮುಖಂಡರಾದ ಗುರುನಾಥ ಹಾವಳಗಿ ಪ್ರಕಟಣೆಯಲ್ಲಿ ಆಗ್ರಹಿಸಿದರು.
ಸ್ವತಂತ್ರ ಬಂದಾಗಿನಿಂದ ಇಲ್ಲಿವರೆಗೂ ಸಚಿವ ಸ್ಥಾನದಿಂದ ವಂಚಿತವಾಗಿದೆ. ಶಿಕ್ಷಣ, ನೀರಾವರಿ, ಔದೋಗಿಕಿರಣ್, ಸಾರಿಗೆ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ದೊರೆಯಬೇಕಾದರೆ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡುವುದು ಅವಶ್ಯಕತೆ ಇದೆ. ಸಕ್ಕರೆಕಾರ್ಖಾನೆ, ಲಿಂಬೆ ಅಭಿವೃದ್ಧಿ ಮಂಡಳಿ, 24*7ಕುಡಿಯುವ ನೀರು, ರಸ್ತೆ, ಶಿಕ್ಷಣ, ನೀರಾವರಿ, ಸಮಾಜ ಕಲ್ಯಾಣ, ಹೀಗೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳು ಮಾಡಿದ ಶಾಸಕ ಯಶವಂತರಾಯ ಗೌಡ ಪಾಟೀಲ ರಿಗೆ ಸಚಿವಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು.