ಯಶವಂತರಾಯಗೌಡ ಪಾಟೀಲರಿಗೆ ಅಭಿನಂದನಾ ಸಮಾರಂಭ

ಇಂಡಿ:ಮೇ.30: ನಾಳೆ ಸಾಯಂಕಾಲ 5-00 ಗಂಟೆಗೆ ಇಂಡಿ ನಗರದ ಸ್ಟೇಶನ್ ರಸ್ತೆಯ ಅಮರ್ ಇಂಟರನ್ಯಾಶನಲ್ ಹೋಟೇಲ್ ಆವರಣದಲ್ಲಿ ಹ್ಯಾಟ್ರೀಕ ವಿಜಯ ಸಾಧಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಇವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಇಂಡಿ ಪಟ್ಟಣಕ್ಕೆ ಪ್ರಪ್ರಥಮ ಬಾರಿಗೆ ಹ್ಯಾಟ್ರೀಕ ವಿಜಯ ಸಾಧಿಸಿ ನಗರಕ್ಕೆ ಆಗಮಿಸುತ್ತಿರುವ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಇಂಡಿ ,ಬಳ್ಳೋಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿವತಿಯಿಂದ ಸಾವಿರಾರು ಕಾರ್ಯಕರ್ತರು ,ಕಾಂಗ್ರೆಸ್ ಅಭಿಮಾನಿಗಳು ಅಭಿನಂದನೆ ಸಲ್ಲಿಸಲ್ಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಮಾಜಿ.ಜಿ.ಪಂ ಅಧ್ಯಕ್ಷರು,ಸದಸ್ಯರು,ತಾ.ಪಂ ಅಧ್ಯಕ್ಷರು ಸದಸ್ಯರು. ಪುರಸಭೆ ಅಧ್ಯಕ್ಷರು ಸದಸ್ಯರು ಗ್ರಾ.ಪಂ ಅಧ್ಯಕ್ಷರು ,ಸದಸ್ಯರು ಹಾಗೂ ಇಂಡಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಅಂಗ ಘಟಕಗಳ ಪದಾಧಿಕಾರಿಗಳು ಯುವ ಸಂಘಟನೆ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡು ಕಾರ್ಯಕ್ರಮ ಯಶಸ್ವೀಗೋಳಿಸಬೇಕು ಎಂದು ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲನಗೌಡ ಬಿರಾದಾರ ಪ್ರಕಟಣೆಗೆ ತಿಳಿಸಿದ್ದಾರೆ.