ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಿ ಸ್ಟೀಫನ್ ಶಿರೋಮಣಿ ಆಗ್ರಹ

ಇಂಡಿ; ಮೇ.19:ಕರ್ನಾಟಕ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಲಿಂಬೆ ನಾಡು ಇಂಡಿ ಬ್ರಿಟೀಷರ ಕಾಲದಿಂದಲೂ ಅತ್ಯೆಂತ ಹಿಂದುಳಿದ ಪ್ರದೇಶವಾಗಿದ್ದು ಈ ಭಾಗದಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ದಿಗಳಾಗಿಲ್ಲ ಶಾಸಕ ಯಶವಂತರಾಯಗೌಡ ಪಾಟೀಲ ಕಳೆದ ಎರಡು ಅವಧಿಗಳಲ್ಲಿ ಶಾಸಕರಾದ ನಂತರ ಅಭಿವೃದ್ದಿಯ ದಶದಿಕ್ಕುಗಳನ್ನೆ ಬದಲಾವಣೆ ಮಾಡಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ ಹ್ಯಾಟ್ರಿಕ ವಿಜಯ ಸಾಧಿಸಿರುವುದರಿಂದ್ದ ದೂರದೃಷ್ಠಿಯ ನಾಯಕನಿಗೆ ಸಚಿವ ಸ್ಥಾನ ನೀಡಿ ಈ ಭಾಗದ ಸರ್ವೋತೋಮುಖ ಪ್ರಗತಿಗೆ ಕಾಂಗ್ರೆಸ್ ವರಿಷ್ಠರು ಸಹಕಾರ ನೀಡಬೇಕು ಎಂದು ಅಖಿಲ ಭಾರತ ಕ್ರೈಸ್ತ ಮಹಾಸಭಾ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷ ಸ್ಟೀಫನ್ ಶಿರೋಮಣಿ ಹೇಳಿದರು.

ಶಾಸಕ ಯಶವಂತರಾಯಗೌಡ ಪಾಟೀಲ ದಲಿತ,ಅಲ್ಪಸಂಖ್ಯಾತ, ಹಿಂದುಳಿದ .ಮುಂದುವರೆದ ಜನಾಂಗವನ್ನು ಒಂದೇ ಸೂರಿನಡಿ ನ್ಯಾಯ ನೀಡಿ ಬಸವಣ್ಣನ ತತ್ವದಂತೆ ನಡೇದುಕೊಂಡಿದ್ದಾರೆ ಇಂತಹ ರಾಜಕೀಯ ಚಾಣುಕ್ಯನಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.