ರಾಯಚೂರು.ಅ.೨೭- ಪ್ರಯಾಣಿಕರ ಒತ್ತಡ ಕಡಮೆ ಮಾಡಲು ಯಶವಂತಪುರ ಬೀದರ ನಡುವೆ ದಿ.೨೮ ರಂದು ವಿಶೇಷ ರೈಲು ೦೬೫೨೩ ಓಡಿಸಲಾಗುತ್ತಿದೆ ಎಂದು ರೈಲ್ವೆ ಸದಸ್ಯರಾದ ಬಾಬುರಾವ್ ತಿಳಿಸಿದ್ದಾರೆ.
ಈ ರೈಲು ಅಂದು ೧೧.೧೫ ಯಶವಂತಪುರದಿಂದ ಹೊರಟು ಅ.೨೯ ರಂದು ಮಧ್ಯಾಹ್ನ ೧ ಗಂಟೆಗೆ ಬೀದರ ತಲುಪುತ್ತದೆ. ಧರ್ಮವರಂ, ಗುಂತಕಲ್, ಮಂತ್ರಾಲಯ ಹಾಗೂ ರಾಯಚೂರು ಮಾರ್ಗವಾಗಿ ರೈಲ್ ಸಂಚಾರಿಸಲಿದೆ. ಅ.೨೯ ರಂದು ೭.೩೫ ಕ್ಕೆ ರಾಯಚೂರಿಗೆ ತಲುಪಲಿದೆ. ವಾಡಿ ಕಲ್ಬುರ್ಗಿ ಮೂಲಕ ಬೀದರಗೆ ತೆರಳುತ್ತದೆ ಎಂದು ಬಾಬುರಾವ್ ತಿಳಿಸಿದ್ದು, ಪ್ರಯಾಣಿಕರು ಇದರ ಲಾಭ ಪಡೆಯಲು ಕೋರಿದ್ದಾರೆ.