ಯವರಾಣಿ ಪಡಸಾಲೆಯಲ್ಲಿ ಅನಿಕೇತ್

  • ಚಿಕ್ಕನೆಟಕುಂಟೆ ಜಿ. ರಮೇಶ್

“ನಮ್ಮನೆ ಯುವರಾಣಿ” ಪಡಸಾಲೆಯಲ್ಲಿರುವ ಅನಿಕೇತ್,ರಾಣಿಯ ಒಲೈಕೆಗೆ ಮುಂದಾಗಿದ್ದಾರೆ..
ಅರೆ ಗಾಬರಿಯಾಗುವುದು ಬೇಡ ಅನಿಕೇತ್ ಖ್ಯಾತಿಯ ದೀಪಕ್ ಗೌಡ,ಬನ್ನೂರಿನ ಯುವ ನಟ. ಜಿ.ಕೆ ಸತೀಶ್ ಕೃಷ್ಣನ್ ನಿರ್ದೇಶನದ “ನಮ್ಮನೆ ಯುವರಾಣಿ” ಧಾರಾವಾಹಿಯ ನಟ.
ಅಣ್ಣ ಡಬಲ್ ಡಿಗ್ರಿ ಮಾಡಿದ್ದಾನೆ. ನೀನಿನ್ನು ಪದವಿಯಲ್ಲಿ ಇದ್ದೀಯ ಎಂದು ಮನೆಯಲ್ಲಿ ಬೈಗುಳ ತಪ್ಪಿಸಿಕೊಳ್ಳಲು ಬೆಂಗಳೂರಿಗೆ ಬಂದ‌‌ ಹುಡುಗ ಸ್ನೇಹಿತನ ಸ್ನೇಹಿತ ಬಣ್ಣದ ನಂಟು ಅಂಟಿಸಿದ್ದಾರೆ‌.
ಆ ಬಗ್ಗೆ ದೀಪಕ್ ಮಾಹಿತಿ ಹಂಚಿಕೊಂಡಿದ್ದಾರೆ..
ಸ್ನೇಹಿತನ ಸ್ನೇಹಿತ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ. ಪ್ರೀ ಇದ್ದಾಗ ನಾಟಕಕ್ಕೆ ಕೆರೆದುಕೊಂಡು ಹೋಗುತ್ತಿದ್ದ.ಆಗ ಆತ ನೀನ್ಯಾಕೆ
ನಟಿಸಬಾರದು ಎಂದಾಗ ನಾಟಕಗಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದೆ.ಅನೇಕ ಧಾರಾವಾಹಿಗಳ ಆಡಿಷನ್ ಗೆ ಹೋಗಿ ತಿರಸ್ಕರಿಸಿಕೊಂಡಿದ್ದೇನೆ. ನನಗೆ ಬೇಜಾರಾಗಿ ಊರಿಗೆ ವಾಪಸ್ ಹೋಗಿದ್ದೆ. ಕೊನೆಗೆ ಸ್ನೇಹಿತನೇ ವಾಪಸ್ ಕರೆಸಿಕೊಂಡು ಆಡಿಷನ್ ಗೆ ಹೋಗು ಎಂದರು.
ಆಡಷನ್ ಕೊಟ್ಟು ಬಂದೆ ಆಗಲೂ ಆಯ್ಕೆಯಾಗಲಿಲ್ಲ.‌ ನನ್ನ ಅದೃಷ್ಟ ಆ ಧಾರಾವಾಹಿಗೆ ಮೊದಲು ಆಯ್ಕೆಯಗಿದ್ದ ವ್ಯಕ್ತಿ ಬರದಿದ್ದಾಗ ನನಗೆ ಅವಕಾಶ ಸಿಕ್ಕಿತ್ತು.ಅದುವೇ “ಗಾಂಧಾರಿ” ಯಲ್ಲಿ ನಾಯಕನ ತಮ್ಮನ ಪಾತ್ರ.
ಬಳಿಕ “ತ್ರಿವೇಣಿ ಸಂಗಮ”ಬಿಳಿ ಹೆಂಡ್ತಿ ,ಈಗ “ನಮ್ಮನೆ ಯುವರಾಣಿ”ಯಲ್ಲಿ ನಟಿಸುತ್ತಿದ್ದೇನೆ ಇದರಲ್ಲಿ ಉದ್ಯಮಿಯ ಪಾತ್ರ.ಒಳ್ಳೆಯ ಸಹ ಕಲಾವಿದರು ಇದ್ದಾರೆ ಹಾಗಾಗಿ ನನ್ನ ಪಾತ್ರ ಜನರು ಗುರುತಿಸುವಂತಾಗಿದೆ.
ಅಮ್ಮನೂ ಅನಿ ಅಂತಾರೆ:
ಜನರಿಗೆ ದೀಪಕ್ ಎನುವ ನನ್ನ ಹೆಸರು ಮರೆತುಹೋಗಿದೆ ಎಲ್ಲರೂ ಅನಿಕೇತ್ ಎಂದು ಗುರುತಿಸುವುದು ಖುಷಿಯ ಸಂಗತಿ.ಮನೆಯಲ್ಲಿ ಅಮ್ಮ ಕೂಡ ನನ್ನನ್ನು ಅನಿ ಎನ್ನುತ್ತಾರೆ.ಹೋಟೆಲ್ ನಲ್ಲಿ ದೋಸೆ ತಿನ್ನಲು ಅವಕಾಶ ಮಾಡಿಕೊಟ್ಟಿರಲಿಲ್ಲ ಅಭಿಮಾನಿಗಳು ಫೋಟೋಗಾಗಿ ಮುಗಿಬಿದ್ದರು ಬಟ್ಟೆ ಹರಿದುಹಾಕಿದರು.ಈ ಅಭಿಮಾನಕ್ಕೆ ಏನು ಹೇಳಬೇಕೊ ಗೊತ್ತಾಗುವುದಿಲ್ಲ

500 ಎಪಿಸೋಡ್ ಪೂರ್ಣ

ಇತ್ತೀಚೆಗಷ್ಟೆ “ನಮ್ಮನೆ ಯುವರಾಣಿ “500 ‌ಎಪಿಸೋಡ್ ಪೂರ್ಣಗೊಳಿಸಿ ಮುನ್ನೆಡೆದಿದೆ. ನಿರ್ದೇಶಕ ಸತೀಶ್ ಕೃಷ್ಣನ್ ಎಲ್ಲರನ್ನೂ ಜೊತೆಯಾಗಿ ಕೊಂಡೊಯ್ಯುತ್ತಾ ಅನೇಕ ಮಾರ್ಗದರ್ಶನ ನೀಡುತ್ತಿದ್ದಾರೆ.
-ದೀಪಕ್ ಗೌಡ,ನಟ


ಎರಡು ಸಿನಿಮಾ

ಸದ್ಯ ಎರಡು ಸಿನಿಮಾ ಒಪ್ಪಿಕೊಂಡಿದ್ದೇನೆ‌‌.ಒಂದು ಡಿಸೆಂಬರ್ ನಲ್ಲಿ ಚಿತ್ರಿಕರಣ ಆಗಲಿದೆ ಅದರ ನಿರ್ದೇಶಕ ಮಂಜು‌. ಮತ್ತೊಂದು ಸಿನಿಮಾ ಮಾತುಕತೆಯಾಗಿದೆ ಮುಂದಿನ ವರ್ಷದಿಂದ ಆರಂಭವಾಗಲಿದೆ ಎಂದರು ದೀಪಕ್