ಯಳನಾಡುವಿನಲ್ಲಿ ಕೌಶಲ್ಯ ತರಬೇತಿ

ಹುಳಿಯಾರು, ಡಿ. ೪- ಕರ್ನಾಟಕ ರಾಜ್ಯ ಸರ್ಕಾರದ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ೫೦ ಜನರಿಗೆ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದ ಹಾಲಿನ ಡೇರಿಯ ಸಭಾಂಗಣದಲ್ಲಿ ಪೂರ್ವ ಕಲಿಕಾ ಕೌಶಲ್ಯ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಮಿಕ ಮುಖಂಡದ ಗಿರೀಶ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ಅತೀ ಮುಖ್ಯವಾಗಿದ್ದು ಈ ತರಬೇತಿಯಿಂದ ಕಾರ್ಮಿಕರಿಗೆ ಕೌಶಲ್ಯದ ಮಾಹಿತಿ ಸಿಕ್ಕಿದಂತಾಗಿದೆ. ಅಲ್ಲದೆ ಮುದ್ರಾ ಯೋಜನೆಯಲ್ಲಿ ಸುಲಭವಾಗಿ ಸಾಲ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರಘು, ಲಿಂಗದೇವರು ಮತ್ತಿತರರು ಉಪಸ್ಥಿತರಿದ್ದರು. ತರಬೇತಿ ನಂತರ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.