ಯಲ್ಲಮ್ಮ ನಗರದ 20 ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ದಾವಣಗೆರೆ.ನ.೨೨: ಇಲ್ಲಿನ ಯಲ್ಲಮ್ಮ ನಗರದ 20 ನಿವಾಸಿಗಳಿಗೆ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಹಕ್ಕುಪತ್ರ ವಿತರಿಸಿದರು.ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಗೃಹ ಕಛೇರಿ ಶಿವಪಾರ್ವತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಕ್ಕುಪತ್ರ ವಿತರಿಸಿದ ಎಸ್ಸೆಸ್ ಅವರು ಕಾಂಗ್ರೆಸ್ ಸರ್ಕಾರದ ಈ ಮಹತ್ವದ ಯೋಜನೆಯಿಂದ ಈ ಹಿಂದೆ ದಾವಣಗೆರೆಯ ಸಾವಿರಾರು ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿತ್ತು. ಕೆಲವು ತಾಂತ್ರಿಕ ತೊಂದರೆಗಳಿಂದ ಹಕ್ಕುಪತ್ರಗಳನ್ನು ನೀಡಲಾಗಿರಲಿಲ್ಲ ಎಂದರು.ಇಂದು ಹಕ್ಕುಪತ್ರ ಪಡೆದಿರುವ ಫಲಾನುಭವಿಗಳು ಮಾರಾಟ ಮಾಡದೇ ಆಸ್ತಿ ಉಳಿಸಿಕೊಂಡು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್, ದೇವರಮನಿ ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮುಖಂಡರಾದ ಉಮಾಶಂಕರ್ ಮತ್ತಿತರರಿದ್ದರು.