ಯಲ್ಲದೊಡ್ಡಿ : ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಅರಕೇರಾ,ಜು,೧೧- ದೇವದುರ್ಗ ತಾಲ್ಲೂಕಿನ ಕೊತ್ತದೊಡ್ಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಬರುವ ಯಲ್ಲದೊಡ್ಡಿ ಗ್ರಾಮದಲ್ಲಿನ ಬಿಜೆಪಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಇಂದು ಅರಕೇರಾ ಗ್ರಾಮದಲ್ಲಿನ ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡರಾದ ಎ.ರಾಜಶೇಖರನಾಯಕರವರ ನಿವಾಸದಲ್ಲಿ ಯುಕರನ್ನು ಕಾಂಗ್ರೆಸ್ ಪಕ್ಷದ ಶಾಲುಹಾಕಿ ಸ್ವಾಗತಿಸಿಕೊಂಡರು.
ಕಾಂಗ್ರೇಸ್ ಪಕ್ಷದ ಸಾಧನೆಗಳನ್ನು ಮೆಚ್ಚಿ ತಾವು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದಾಗಿ ಯುವಕಾರ್ಯಕರ್ತರು ತಿಳಿಸಿದರು. ಈ ಸಂದರ್ಭದಲ್ಲಿ ಅಹ್ಮದಸಾಬ, ರಾಜುಕೋಳೂರು, ಲಿಂಗಣ್ಣ ಹವಲ್ದಾರ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರು ಅರಕೇರಾ ಬ್ಲಾಕ್, ಹನುಮಂತ ಯೂತ್ ಕಾಂಗ್ರೆಸ್ ದೇವದುರ್ಗ ಬ್ಲಾಕ ಪ್ರಧಾನಕಾರ್ಯದರ್ಶಿ. ಕುಮಾರ ರಾಠೋಡ ಗೋರ್ ಸೇನಾ ತಾಲ್ಲೂಕಾ ಪ್ರರದಾನ ಕಾರ್ಯದರ್ಶಿ ಸಿದ್ದು ಪೂಜಾರಿ,ಆದನಗೌಡ ಪೋಲಿಸ್ ಪಾಟೀಲ್, ಅಮೀನ್ ಕೆ ಪವಾರ ಮುಂತಾದವರು ಇದ್ದರು.