ಯಲ್ಬರ್ಗದಲ್ಲಿ ಎರಡು ನಾಮಪತ್ರ ತಿರಸ್ಕೃತ


ಸಂಜೆವಾಣಿ ವಾರ್ತೆ
ಯಲಬುರ್ಗಾ, ಏ.22: 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಉಮೆದುವಾರರು ಸಲ್ಲಿಸಿರುವ ನಾಮಪತ್ರಗಳನ್ನು  ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ ಅವರು ಪರಿಶೀಲಿಸಿದರು.
ಒಟ್ಟು 25 ನಾಮಪತ್ರಗಳಲ್ಲಿ 23 ನಾಮಪತ್ರಗಳು ಅಂಗೀಕೃತವಾಗಿರುತ್ತವೆ. 2 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿರುತ್ತವೆ. ಅಂತಿಮವಾಗಿ 14 ಜನ ಉಮೇದುವಾರರು ಕ್ರಮಬದ್ಧವಾಗಿ ನಾಮನಿರ್ದೇಶಿತರಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿರುತ್ತಾರೆ.
ತಿರಸ್ಕೃತಗೊಂಡ ನಾಮ ಪತ್ರದಲ್ಲಿ ಬಾಳಪ್ಪ ಎಸ್. ವೀರಾಪುರ ಒಂದು ನಾಮಪತ್ರದಲ್ಲಿ 9  ಜನ ಸೂಚಕರು ಸಹಿ ಮಾಡಿರುವುದರಿಂದ ತಿರಸ್ಕೃತಗೊಂಡಿದ್ದು, ಮತ್ತೊಂದು ನಾಮಪತ್ರ ಪುರಸ್ಕೃತಗೊಂಡಿದೆ. ಅಲ್ಲಾಭಕ್ಷಿ ಕುಕನೂರ ಇವರು ಭದ್ರತಾ ಠೇವಣಿ ಸಲ್ಲಿಸದ ಕಾರಣ ಇವರ ನಾಮಪತ್ರ ತಿರಸ್ಕೃತಗೊಂಡಿರುತ್ತದೆ.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ವಿಠಲ್ ಚೌಗಲೆ, ಪಕ್ಷದ ಉಮೆದುವಾರರು ಹಾಗೂ ಅವರ ಪರ ಎಜಂಟರು, ಸೂಚಕರು ಹಾಜರಿದ್ದರು.