ಯಲಿಯೂರು ಕೆರೆಗೆ ಶಾಸಕ ರಂಗನಾಥ್ ಬಾಗಿನ

ಕುಣಿಗಲ್, ಆ. ೬- ತಾಲ್ಲೂಕಿನ ಯಲಿಯೂರು ಕೆರೆಗೆ ಶಾಸಕ ಡಾ. ಎಚ್.ಡಿ. ರಂಗನಾಥ್ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.
ತಾಲ್ಲೂಕಿನ ಸತತ ಮಳೆಯಿಂದ ಅನೇಕ ಸಣ್ಣಪುಟ್ಟ ಕೆರೆಗಳು ಭರ್ತಿಯಾಗಿ ಹಿರಿಯರ ಆಶೀರ್ವಾದ ಪಾದಯಾತ್ರೆಯಿಂದ ಎಲ್ಲಾ ಕೆರೆಗಳು ಭರ್ತಿಯಾಗಿರುವುದು ಒಂದು ಕಡೆ ಸಂತೋಷ, ಮತ್ತೊಂದು ಕಡೆ ಪ್ರಕೃತಿ ವಿಕೋಪದಿಂದ ಸಮಸ್ಯೆಗಳ ಸೃಷ್ಠಿಯಾಗುತ್ತಿವೆ. ಶಾಸಕನಾದ ನಂತರ ಯಲಿಯೂರು ಕೆರೆಗೆ ಎರಡನೇ ಬಾರಿ ಬಾಗಿನ ಅರ್ಪಿಸುವ ಸೌಭಾಗ್ಯ ನನ್ನದಾಗಿದೆ ಎಂದರು.
೨೨ ವರ್ಷಗಳ ನಂತರ ದೀಪಾಂಬುದಿ ಕೆರೆಯು ಭರ್ತಿಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಂಗಶಾನಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೊನ್ನೇಗೌಡ, ಕೋಗಟ್ಟ ರಾಜಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಲೀಲಾವತಿ ಪ್ರಕಾಶ್, ಅಂದಾನಿಗೌಡ ಮತ್ತಿತರರು ಉಪಸ್ಥಿತರಿದ್ದರು.