ಯಲಹಂಕದಲ್ಲಿ ವ್ಯಾಕ್ಸ್ ಕಾರ್ ಕೇರ್ ಸ್ಟುಡಿಯೋ ಆರಂಭ

ಯಲಹಂಕ, ನ. ೩- ವಿವಿಧ ರೀತಿಯ ಉತ್ಪನ್ನಗಳನ್ನು ಬಳಸಿ ಕಾರುಗಳಿಗೆ ಹೊಸ ಹೊಳಪು ಮತ್ತು ಸ್ವರೂಪನೀಡಿ, ಅಂದ ಹೆಚ್ಚಿಸುವ ನಿಟ್ಟಿನಲ್ಲಿ ಟರ್ಟಲ್ ವ್ಯಾಕ್ಸ್ ಕಾರ್ ಕೇರ್ ಸ್ಟುಡಿಯೋ ಕಾರ್ಯಾರಂಭ ಮಾಡಿದೆ.
ಯಲಹಂಕದ ಅಲ್ಲಾಳಸಂದ್ರದ ಬಳಿ ನೂತನವಾಗಿ ನಿರ್ಮಿಸಿದ್ದ ಸ್ಟುಡಿಯೋವನ್ನು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಸ್.ಆರ್.ವಿಶ್ವನಾಥ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಟರ್ಟಲ್ ವ್ಯಾಕ್ಸ್, ಅಮೆರಿಕಾದ ಕಂಪನಿಯಾಗಿದ್ದು, ಭಾರತದಲ್ಲೇ ಮೊದಲ ಬಾರಿಗೆ ಇಲ್ಲಿ ಈ ಸೇವಾಕೇಂದ್ರವನ್ನು ತೆರೆದಿರುವುದು ಹೆಮ್ಮೆಯ ಸಂಗತಿ. ದುಬಾರಿ ಹಣಕೊಟ್ಟು ಕಾರುಗಳನ್ನು ಖರೀದಿಸಿ ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಪ್ರಯೋಜನವಿಲ್ಲ. ಈ ದಿಸೆಯಲ್ಲಿ ನೂತನವಾಗಿ ಆರಂಭವಾಗಿರುವ ಈ ಶಾಖೆಯಲ್ಲಿ ಕಾರುಗಳನ್ನು ಸುಂದರವಾಗಿ ಕಾಣುವಂತೆ ಸಿದ್ಧಪಡಿಸುವ ವ್ಯವಸ್ಥೆಯಿದೆ ಎಂದು ತಿಳಿಸಿದರು.
ಕಂಪನಿಯ ವ್ಯವಸ್ಥಾಪಕ ಪಾಲುದಾರ ಪಿ.ರಾಮಕೃಷ್ಣರಾವ್ ಮಾತನಾಡಿ, ಕಡಿಮೆದರದ ಮತ್ತು ದುಬಾರಿವೆಚ್ಛದ ಕಾರುಗಳಿಗೆ ಫೋಮ್ ವಾಶ್, ಡ್ರೈವಾಶ್, ವ್ಯಾಕ್ಸಿಂಗ್, ರಬ್ಬಿಂಗ್, ಪಾಲಿಷಿಂಗ್, ಟ್ರಿಮ್ ರೀಸ್ಟೊರೇಶನ್ ಸೇವೆಗಳು ಲಭ್ಯವಿದ್ದು, ಗುಣಮಟ್ಟದ ಉತ್ಪನ್ನಗಳು ಮತ್ತು ನೂತನ ತಂತ್ರಜ್ಞಾನದ ಮೂಲಕ ಕಾರಿನ ಹೊಳಪನ್ನು ಹೆಚ್ಚಿಸಿ, ಅಂದವಾಗಿ ಕಾಣುವಂತೆ ಮಾರ್ಪಡಿಸಲಾಗುವುದು ಎಂದು ತಿಳಿಸಿದರು.
ಟರ್ಟಲ್ ವ್ಯಾಕ್ಸ್‌ನಿಂದ ನೂತನವಾಗಿ “ಸೆರಾಮಿಕ್ ಕೋಟಿಂಗ್-೧೦ ಎಚ್ ಎಂಬ ಉತ್ಪನ್ನವನ್ನು ಬಿಡುಗಡೆ ಮಾಡಲಾಗಿದ್ದು, ಕಂಪನಿಯು ಆರಂಭಿಕ ಕೊಡುಗೆಯಾಗಿ ಗ್ರಾಹಕರಿಗೆ ಶೇ.೫೦ರಷ್ಟು ರಿಯಾಯಿತಿ ನೀಡಲಿದೆ ಎಂದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ತ್ರಿವಿಕ್ರಮ್ ರಾವ್, ಯುವ ಮುಖಂಡ ಮಹೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.