ಯಲಹಂಕದಲ್ಲಿ ಕೈ ನಾಯಕರ ಒಗ್ಗಟ್ಟು

ಬೆಂಗಳೂರು, ಏ.೧೧- ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು,ನಾಯಕರು ಒಗ್ಗಟ್ಟಿನ ಪ್ರದರ್ಶನ ನಡೆಸಿ, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕೇಶವ ರಾಜಣ್ಣ ಅವರ ಕೈ ಬಲಪಡಿಸುತ್ತೇವೆಂದು ಒಕ್ಕೂರಲಿನಿ ಶಪಥ ಮಾಡಿದರು.
ಯಲಹಂಕದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು ಚುನಾವಣೆಗೆ ರಣ ಕಹಳೆ ಊದಿದರು.
ಯಲಹಂಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೇಶವರಾಜಣ್ಣ ಮಾತನಾಡಿ, ನಾವೆಲ್ಲ ಒಂದು ಕುಟುಬಂದ ಸದಸ್ಯರು, ಮುಖಂಡರು ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ.ಕ್ಷೇತ್ರದಲ್ಲಿ ದಲಿತರ ಮೇಲೆ ದೌರ್ಜನ್ಯ, ರೈತರಿಗೆ ಅನ್ಯಾಯ, ಫಿಟ್‌ಪುಲ್ ನಾಯಿಗಳ ದೌರ್ಜನ್ಯ ರಾಜಕೀಯಕ್ಕೆ ತಿಲಾಂಜಲಿ ಇಡಲು ಸನ್ನದ್ಧರಾಗಿದ್ದೇವೆ. ಅವರ ಪಕ್ಷದ ಮುಖಂಡರಿಗೆ ಭಯದ ವಾತಾವರಣವಿದೆ. ಯಾವ ಕಾರ್ಯಕರ್ತರು ಭಯಪಡುವ ಅಗತ್ಯವಿಲ್ಲ. ಈ ಬಾರಿ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.
ಬೆಂ.ನ.ಜಿಲ್ಲಾಧ್ಯಕ್ಷ ರಾಜಕುಮಾರ್: ಸುಮಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಇದೀಗ ಪಕ್ಷ ಟಿಕೆಟ್ ನೀಡಿ ಕಣಕ್ಕಿಳಿಸುತ್ತಿದೆ. ಕಾಂಗ್ರೆಸ್ ನಾಯಕರು ಒಮ್ಮತದಿಂದ ಸಹಕರಿಸುತ್ತಿದ್ದಾರೆ. ಬಿಜೆಪಿ ೪೦% ಭ್ರಷ್ಟಾಚಾರ ಸ್ಥಳೀಯ ಶಾಸಕರ ಹಗರಣ,ಲೂಟಿ ಮಾಡಿದ್ದಾರೆ. ಜನತೆಯೆ ಬೇಸತ್ತಿದ್ದಾರೆ. ಈ ಚುನಾವಣೆಯಲ್ಲಿ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜಿ.ಪಂ.ಮಾಜಿ ಸದಸ್ಯೆ ಲಾವಣ್ಯ ನರಸಿಂಹ ಮೂರ್ತಿ ಮಾತನಾಡಿ, ಯಲಹಂಕದಲ್ಲಿ ಕಾಂಗ್ರೆಸ್ ಪರ ಮತದಾರರು ದೃಢವಾದ ನಿರ್ಧಾರ ತಳೆದಿದ್ದಾರೆ. ರೈತ ವಿರೋಧಿ ದಲಿತ ವಿರೋಧಿ, ಮಹಿಳಾ ವಿರೋಧಿ ಸ್ಥಿರವಾದ ಸರ್ಕಾರ ನೀಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ.ನಮ್ಮ ನಾಯಕರಾದ ಕೇಶವರಾಜಣ್ಣ ಗೆಲುವಿಗೆ ಎಲ್ಲಾ ನಾಯಕರು ಪಣ ತೊಡುತ್ತೇವೆ ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಮಂಜುನಾಥ ಅದ್ದೆ ಮಾತನಾಡಿ,ಮತದಾರರು ಪ್ರಜ್ಞಾವಂತರಾಗಿ, ಬೇರೆ ಪಕ್ಷಗಳ ಯಾವುದೇ ಆಮಿಷಗಳಿಗೆ ಒಳಗಾಗೆ ಸ್ವಾತಂತ್ರ್ಯ ನಂತರ ದೇಶ ಕಟ್ಟಿದ ತ್ರಿವರ್ಣ ಧ್ವಜದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕಿದೆ. ಬಂಡವಾಳಶಾಹಿಗಳ ಗುಲಾಮರಾಗಿ, ಜನರ ಜೀವವನ್ನು ಕಿತ್ತು ತಿನ್ನುವ ಡಬಲ್ ಇಂಜಿನ್ ಬಿಜೆಪಿ ಪಕ್ಷವನ್ನು ಬುಡ ಸಮೇತ ಕಿತ್ತೊಗೆಯಲು ಸಂಕಲ್ಪ ಮಾಡಬೇಕಿದೆ. ಈ ನಿಟ್ಟಿನಲ್ಲಿ ಯಲಹಂಕ ಕ್ಷೇತ್ರದಲ್ಲಿ ಮುಖಂಡರು, ಕಾರ್ಯಕರ್ತರು ಕ್ಷೇತ್ರದಲ್ಲಿ ಕೇಶವರಾಜಣ್ಣ ಪರ ತನುಮನ ಪೂರ್ವಕವಾಗಿಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಜಿ.ಜಯರಾಮಯ್ಯ, ಶ್ರೀಧರ್, ನಾಗೇನಹಳ್ಳಿ ಶ್ರೀನಿವಾಸ್, ನಾಗರಾಜ ಗೌಡ ಹಿರಿಯ ಮುಖಂಡರಾದ ಕೇಶವಮೂರ್ತಿ,ರಾಜಕುಮಾರ್, ಕೋಗಿಲು ವೆಂಕಟೇಶ್, ಭಾಷಾ,ಗೋಪಿನಾಥ್,ವೈ.ಎನ್.ಅಶ್ವಥ್, ಮೆಡಿಕಲ್ ಮೂರ್ತಿ, ಶಶಿಕುಮಾರ್,ತಿಮ್ಮರಾಜು, ಮಹಿಳಾ ಮುಖಂಡರಾದ ಶಾರದ ವೆಂಕಟೇಶ್,ಯುವ ಕಾಂಗ್ರೆಸ್ ಮುಖಂಡ ದಿಲೀಪ್, ಮಾರುತಿ, ಸೇರಿ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.