ಯಲಬುರ್ಗಾ ಬಿಜೆಪಿ ಟಿಕೆಟ್ ನೀಡುವಲ್ಲಿ  ವರಿಷ್ಠರು ಎಡವಿದ್ದಾರೆ: ಗುಂಗಾಡಿ


ಸಂಜೆವಾಣಿ ವಾರ್ತೆ
ಕುಕನೂರು, ಏ.13: ಯಲಬುರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ  ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡುವಲ್ಲಿ ಬಿಜೆಪಿ ವರಿಷ್ಠರು ಎಡವಿದ್ದಾರೆ ಎಂದು ಬಿಜೆಪಿ ಟಿಕೆಟ್ ವಂಚಿತ ಮುಖಂಡ ಶರಣಪ್ಪ ಗುಂಗಾಡಿ ಆರೋಪಿಸಿದರು.   ಅವರು ಬುಧವಾರ ಇಲ್ಲಿಯ ಪತ್ರಿಕೆ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ,, ಕ್ಷೇತ್ರದಲ್ಲಿ ತಾವು ಪ್ರಬಲ ಆಕಾಂಕ್ಷಿಯಾಗಿದ್ದು ಟಿಕೆಟ್ ದೊರೆಯುತ್ತದೆ ಎಂಬ ಆಸೆ ಚಿಗುರಿತ್ತು, ಆದರೆ  ಟಿಕೆಟ್ ಫಲ ಪ್ರದವಾಗ ಲಿಲ್ಲ. ಕೇಂದ್ರ ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರ ಕೃಪಾಕಟಾಕ್ಷ ಯಿಂದ  ಹಾಲಪ್ಪಾ ಆಚಾರ ಟಿಕೆಟು ಒಲಿಸಿಕೊಂಡಿದ್ದಾರೆ.  ಇರಲಿ ಈ ಬೆಳವಣಿಗೆ ನಮ್ಮಂತ ಸಂಘ ಪರಿವಾರದ ಮುಖಂಡರಿಗೆ ಬಹಳ ಜನರಿಗೆ ನಿರಾಸೆ ತಂದಿದೆ. ಬಿಜೆಪಿ ಅಭ್ಯರ್ಥಿ ಸೋಲಿಗೆ ಹಾಗೂ ಮುಖಂಡರಿಗೆ ತಕ್ಕ ಪಾಠ ಕಲಿಸಲು ತಾವು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದರು. ತಾಲೂಕಿನ ಬಿಜೆಪಿ  ಕೆಲ ಮುಖಂಡರ ಬೆಳವಣಿಗೆ ನೋಡಿದರೆ   ಅನುಮಾನ ಬರುತ್ತದೆ, ಸಾಕಷ್ಟು ಪ್ರಮಾಣದಲ್ಲಿ ವಿವಿಧ. ಇಲಾಖೆ ಗಳಲ್ಲಿ, ಗಾಳಿ ಯಂತ್ರ ಹಾಗೂ ಲೆಕ್ಕಪತ್ರ ಅಪರಾ ತಪರ, ರೈತರಿಗೆ ಮೋಸ ಇಂಥ ಪ್ರಮುಖ ಆರೋಪಗಳು ಮುಖಂಡರ ಮೇಲಿವೆ, ಇಂಥ ಆರೋಪ ಹೊತ್ತ ಮುಖಂಡರು ಯಾವ ಮುಖ ಇಟ್ಕೊಂಡು ಮತ ಕೇಳಲು ಹೋಗುತ್ತಿದ್ದಾರೆ    ನೋಡಬೇಕಾಗಿದೆ ಎಂದು ತಿಳಿಸಿದರು. ಪ್ರಹ್ಲಾದ ಜೋಶಿ ಹಾಗೂ ಹಾಲಪ್ಪ ಆಚಾರ  ಇಬ್ಬರೂ ವ್ಯಾಪಾರಸ್ತರು ಹಾಗೂ ಇಬ್ಬರು ಒಂದೇ ಖಾತೆ ಹೊಂದಿದ್ದಾರೆ. ಹೀಗಾಗಿ ಟಿಕೆಟ್ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿದೆ, ಜೋಶಿ ಅವರಿಗೆ ಪಕ್ಷಕ್ಕಿಂತ ವ್ಯಾಪಾರ ಮನಸ್ತಿತಿ ಇಟ್ಟುಕೊಂಡಿದ್ದಾರೆ ಎಂದು  ಜನರಿಗೆ ಮನವರಿಕೆ ಯಾಗಿದೆ. ಹೀಗಾಗಿ ಯಲಬುರ್ಗಾ ದಲ್ಲಿ ಬಿಜೆಪಿ ಅಭ್ಯರ್ಥಿ ೪ ನೆಯ ಸ್ಥಾನ ಕ್ಕೆ ಇಳಿದರೂ ಅಚ್ಚರಿ ಪಡುವಂತೆ ಇಲ್ಲ ಎಂದು ಗುಂಗಾದಿ ಹೇಳಿದರು. ತಾವು ಶೀಘ್ರದಲ್ಲಿ ಪಂಚಾಂಗ ಕೇಳಿ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದರು.