ಯಲಬುರ್ಗಾ: ಪಕ್ಷೇತರ ಅಭ್ಯಥಿ೯ಯಿಂದ ನಾಮಪತ್ಸ ಸಲ್ಲಿಕೆ


ಸಂಜೆವಾಣಿ ವಾರ್ತೆ
ಯಲಬುರ್ಗಾ, ಏ.20: ತಾಲೂಕಿನ ತಳಕಲ್ ಗ್ರಾಮದ ನಿವೃತ್ತ ಉಪನ್ಯಾಸಕ ಪ್ರೊ.ಎಸ್.ವಿ.ಸೋಮರೆಡ್ಡಿ ಅವರು ಪ್ರಸಕ್ತ ಯಲಬುರ್ಗಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯಾಗಿ ತಮ್ಮ ಬೆಂಬಲಿಗರೊಂದಿಗೆ  ಬುಧವಾರ ನಾಮ ಪತ್ರ ಸಲ್ಲಿಸಿದರು.   ನಂತರ ಪತ್ರಿಕೆ ಜೊತೆ ಮಾತನಾಡಿದ ಸೋಣರೆಡ್ಡಿ ಅವರು, ಪ್ರಸ್ತುತ ಚುನಾವಣೆಯಲ್ಲಿ ಹಣ ಬಲ ಮತ್ತು ತೋಳ್ಬಲ ವಿದ್ದವರನ್ನು ತಿರಸ್ಕರಿಸಿ ನಮ್ಮಂಥ ಜನ ಸಾಮಾನ್ಯ ವಿದ್ಯಾವಂತರು ಶಾಸಕ್ರ ಆ ಜನ ಬಯಸಿದ್ದಾರೆ. ಈ ಬೆಳವಣಿಗೆ ಹಿನ್ನಲೆಯಲ್ಲಿ ಜನರು ತಮಗೆ ಬೆಂಬಲಿಸಿ ಆಶೀವಾ೯ದ ಮಾಡುತ್ತಾರೆಂಬ ಆಶಾಭಾವನೆ ಇದೆ ಎಂದು ವಿಶ್ವಾಸ ವ್ಯಕ್ತಡಿಸಿದ್ದಾರೆ.