ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಕಟ್ಟಡ ಬೀಳುವ ಸ್ಥಿತಿಯಲ್ಲಿ ….!
ತಲೆ ಮೇಲೆ ಹೆಲ್ಮೆಟ್ ಹಾಕಿಕೊಂಡು ಒಳಗೆ ಬಾ ಜಾಣ ಜ್ಞಾನ ದೇಗುಲವಿದು : ರುದ್ರಪ್ಪ ಭಂಡಾರಿ

                    
ಯಲಬುರ್ಗಾ, ಸೆ.03: ಇದು ಶಾಲಾ ಕಟ್ಟಡ ಅಲ್ಲ …ವಿದ್ಯಾರ್ಥಿಗಳು ಕುಳಿತುಕೊಳ್ಳುವ ಕೋಣೆಯು ಅಲ್ಲ. ಆದರೆ ತಾಲೂಕು ಮಟ್ಟದ ವಿದ್ಯಾಧಿಕಾರಿಗಳ ಕಾರ್ಯಾಲಯದ ದುಸ್ಥಿತಿ. ಕಳೆದ 70 ವರ್ಷಗಳಿಂದ ನಿರ್ಮಾಣಗೊಂಡಿದ್ದ ಯಲಬುರ್ಗಾ ಬಿ ಇ. ಓ ಕಚೇರಿ ಎಂದು ಜೀವನವೆಲ್ಲದೆ ಬೀಳುವ ಸ್ಥಿತಿಯಲ್ಲಿದೆ ಅಲ್ಲಿಯ ನೌಕರಿ ಮಾಡುವ ಸಿಬ್ಬಂದಿಯವರ ಪರಿಸ್ಥಿತಿ ಹೇಳುತ್ತಿರದು ಆತಂಕದಲ್ಲಿ ಕಾರ್ಯನಿರ್ವಹಿಸುವಂತಹ ದುಷ್ಥಿತಿ ಎದುರಾಗಿದೆ, ಕಳೆದ ಎರಡು ಮೂರು ವರ್ಷಗಳಿಂದ ನಿರಂತರವಾಗಿ ಸುರಿಯುತ್ತಿರುವ ಅತಿವೃಷ್ಟಿಯಿಂದ ಹಳೆಯ ಕಟ್ಟಡಕ್ಕೆ ಮೇಲಿಂದ ಮೇಲೆ ನೀರಿನ ತೇವಾಂಶ ಹೆಚ್ಚಾಗಿ ಸಿಮೆಂಟ್ ಉದುರುತ್ತಾ ಸಾಗಿದೆ, ಆದರೆ ಮುಂದೆ ಇದೇ ರೀತಿ ವಿಳಂಬವಾದರೆ ಯಾರಿಗೆ ಯಾವ ರೀತಿ ತೊಂದರೆ ಆಗುತ್ತದೆ ಯೋ ಹೇಳ ತೀರದು,  ಈಗಾಗಲೇ ಹಲವಾರು ಬಂದು ಹೋದರು ಕೂಡ ಯಾರು ಸಹ ಈ ಹಳೆ ಕಟ್ಟಡವನ್ನು ನೆಲಸಮ ಮಾಡಿ ನೂತನ ಕಟ್ಟಡ ಚಲಾವಣೆಗೆ ಯಾರೂ ಮುಂದಾಗುತ್ತಿಲ್ಲ ಹೀಗಾಗಿ ಇಲ್ಲಿ ನುಕ್ರಿ ಮಾಡುವ ಅಧಿಕಾರಿಗಳ ಪಾಡು ದೇವರೇ ಕಾಪಾಡಬೇಕು, ಕುಕನೂರು ಹೊಸ ತಾಲೂಕು ಆಗಿದೆ ಅಲ್ಲಿ ಬಿ ಓ ಆಫೀಸ್ ಪ್ರಾರಂಭವಾದರೆ ನಾನು ಮುಂದೆ ವರ್ಗಾವಣೆಗೆ ಎನ್ನುವಂತೆ ಕಾದು ಕುಳಿತಿದ್ದಾರೆ, ಇನ್ನು ಕೆಲವರು ಇಲ್ಲಿ ನೌಕರಿ ಮಾಡಬೇಕೆಂದರೆ ಹೆಲ್ಮೆಟ್ ಹಾಕೊಂಡು ಕುಳ್ತು ಡ್ಯೂಟಿ ಮಾಡಬೇಕು ಎನ್ನುವ ಆತಂಕ ಎದುರಿಸುತ್ತಿದ್ದಾರೆ. ತಾಲೂಕಿನಲ್ಲಿ ಶಾಸಕರು ಹಾಗೂ ಸಚಿವರಾಗಿರುವ ಹಾಲಪ್ಪ ಆಚಾರ್ ಅವರು ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಡುತ್ತಿದ್ದಾರೆ ಆದರೆ ಶಿಕ್ಷಣ ಅಧಿಕಾರಗಳ ಕಟ್ಟಡವನ್ನು ನವೀಕರಣವಾಗಲಿ ಅಥವಾ ನೂತನ ಕಟ್ಟಡ ಶಂಕುಸ್ಥಾಪನೆ ಆಗಲಿ ಉತ್ತರ ಕನ್ನಡ ನಿರ್ಮಿಸುವ  ಬಗ್ಗೆ ಗಮನ ಹರಿಸುತ್ತಿಲ್ಲ ವಿಳಂಬ ಏಕೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ವಿ ಕುರಿತು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ಸಂಪರ್ಕಿಸಿದರೆ ನೂತನ ಕಚೇರಿ ನವೀಕರಣಕ್ಕೆ ಸರಕಾರಕ್ಕೆ ಪ್ರಸ್ತಾಪಿ ಸಲ್ಲಿಸಲಾಗಿದೆ ಆದರೆ ಸರ್ಕಾರದಿಂದ ಯಾವುದೇ ಆದೇಶ ಬಂದಲ್ಲ ಎಂದು ಜವಾಬ್ದಾರಿಯಿಂದ ನುಣು ಚಿ ಕೊಳ್ಳುತ್ತಿದ್ದಾರೆ. ಸುದ್ದಿ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ ಆದರೂ ಸಹ ಸಿಬ್ಬಂದಿಯವರು ಸುಣ್ಣ ಬಣ್ಣ ಹಚ್ಚಿ ಅದಕ್ಕೆ ಮೇಕಪ್ ಮಾಡಿ ರಂಗು ಮಾಡಿದ್ದಾರೆ ಇದನ್ನು ಹೊರತುಪಡಿಸಿದರೆ ಯಾವ ಕೆಲಸವು ಶೂನ್ಯ.  ಮುಡುಗರಿಗೆ ಬಿಎ ಕಚೇರಿ ಹೊರಗೆ ಬೃಂದಾವನದಂತೆ ಕಂಡರು ಒಳಗೆ ಮಾತ್ರ ನೋವಿನಲ್ಲಿ ಕೂಡಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ ಶಾಸಕರಾಗಲಿ ಬೇಗನೆ ಈ ಕಚೇರಿ ಅತ್ತ ಗಮನ ಹರಿಸಿ ಮುಂದಾಗುವ ಅನಾಥವನ್ನು ತಪ್ಪಿಸುವರು ಎಂಬುದು ಶಿಕ್ಷಣ ಪ್ರೇಮಿಗಳ ಒತ್ತಾಸೆ.