ಯಲಬುರ್ಗಾ  ಅಸೆಂಬ್ಲಿ  : ಬಿಜೆಪಿ‌ ಕಾಂಗ್ರೆಸ್ ಹೊಂದಾಣಿಕೆ ರಾಜಕೀಯ – ಗುಂಗಾಡಿ ಆರೋಪ


ಸಂಜೆವಾಣಿ ವಾರ್ತೆ
ಯಲಬುರ್ಗಾ, ಸೆ.16: ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಾವು ಬಿಜೆಪಿ ಆಕಾಂಕ್ಷಿ ಎಂದು ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಶರಣಪ್ಪ ಗುಂಗಾಡಿ ಹೇಳಿದರು . ಗುರುವಾರ ಯಲಬುರ್ಗದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು . ಪ್ರಸ್ತುತ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆ ರಾಜಕಾರಣದಿಂದ ಜನರು ರೋಸಿ ಹೋಗಿದ್ದಾರೆ . ಇದರಿಂದ ಜನರು ಅನೇಕ ಸವಲತ್ತುಗಳಿಂದ ಜನರು ವಂಚಿತರಾಗಿದ್ದಾರೆ . ಆದರೆ ಜನರು ಮತ್ತು ಕಾರ್ಯಕರ್ತರು ಯಾರು ಉದ್ದಾರ ಆಗಿಲ್ಲ ಸಚಿವ ಹಾಲಪ್ಪ ಆಚಾರ್ ಅವರು ಕ್ಷೇತ್ರಕ್ಕೆ ನಿರಾವರಿ ತರುತ್ತೇನೆಂದು ಹೇಳಿದ್ದಾರೆ, ಹೇಳುತ್ತಾ ಬಂದಿದ್ದಾರೆ ಆದರೆ ಒಂದು ಹನಿ ನೀರು ಸಹ ಹರಿದು ಬಂದಿಲ್ಲ . ಒಂದು ವೇಳೆ ಮೂರನೇ ವ್ಯಕ್ತಿ ಯಾರಾದರೂ ಕ್ಷೇತ್ರಕ್ಕೆ ಅಭ್ಯರ್ಥಿಯಾದರೆ ಹಾಲಪ್ಪ, ರಾಯರೆಡ್ಡಿ ಒಂದೇ ರಾಜಕೀಯ ಮಾಡುತ್ತಾರೆ ಇದು ಸತ್ಯವಾದ ಮಾತು . ಜನರ ಸೇವೆಗಾಗಿ ತಾವು ನೌಕರಿ ತ್ಯಾಗ ಮಾಡಿ ಜನರ ಸೆವೆಗೆ ದುಡಿಯಲು ಹಂಬಲ ಹೊಂದಿದ್ದೇನೆ . ಕೊನೆಗಳಿಗೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಜ್ಜಾಗಿದ್ದಾರೆ ಎಂದು ತಿಳಿಸಿದರು . ಪ್ರಸ್ತುತ ಎಲಬುರ್ಗ ಕ್ಷೇತ್ರದ 25 ವಿವಿಧ ಸಹಕಾರ ಸಂಘಗಳಿಗೆ ನುಡಿಸಲು ಬಾಕಿ ಇರುವ ಹಣವನ್ನು ಪಾವತಿಸುವಂತೆ ನೋಟಿಸ್ ನೀಡಲಾಗಿದೆ ಇದರಿಂದ ಪಿಎಲ್ಡಿ ಹಾಗೂ ಸಹಕಾರ ಸಂಘಗಳು ಸಂಪೂರ್ಣವಾಗಿ ನೆಲಕಚ್ಚುವ ಸಂಭವಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.  ಈಗಾಗಲೇ ಎಲ್ಇಡಿ ಬ್ಯಾಂಕು ಸಂಪೂರ್ಣವಾಗಿ ನೆಲಕಚ್ಚಿದೆ . ಹೊಸದಾಗಿ ಕುಕನೂರಿಗೆ ಬ್ಯಾಂಕ್ ಮಂಜೂರು ಮಾಡುವಂತೆ ತಾವು ಮೂರು ತಿಂಗಳ ಹಿಂದೆ ಮನವಿಪತ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಆದರೆ ಇನ್ನೂ ಯಾವುದೇ ಕೆಲಸ ಆಗಿಲ್ಲ ಎಂದು . ಯಲಬುರ್ಗಾ ಕ್ಷೇತ್ರಕ್ಕೆ ತಾವು ಅಳಿಲು ಸೇವೆ ಮಾಡಬೇಕೆಂದು ಕಳೆದ ಹತ್ತು ವರ್ಷಗಳಿಂದ  ಸಂಕಲ್ಪ ಮಾಡಲಾಗಿದೆ ಎಂದರು.