ಸಂಜೆವಾಣಿ ವಾರ್ತೆ
ಯಲಬುರ್ಗಾ, ಏ.28: ಪ್ರಧಾನಿ ಮೋದಿ ವಿಶ್ವದ ನಾಯಕರಾಗಿದ್ದು ಅವರನ್ನು ವಿಷಕಾರಿ ನಾಗರ ಹಾವಿಗೆ ಹೋಲಿಸಿದ್ದು ಕಾಂಗ್ರೆಸ್ ಹೀನ ಸಂಸ್ಕೃತಿಗೆ ಹಿಡಿದ ಕನ್ನಡಿ ಎಂದು ಬಿಜೆಪಿ ಹಿರಿಯ ಮುಖಂಡ ಬಸವರಾಜ್ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಇಲ್ಲಿಯ ಬಯಲು ರಂಗ ಮಂದಿರದಲ್ಲಿ ಬಿಜೆಪಿ ಆಯೋಜಿಸಿದ್ದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ ಅವರ ಪರ ಚುನಾವಣಾ ಪ್ರಚಾರ ಕಾಯ೯ಕ್ರಮದಲ್ಲಿ ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಮುಖಂಡರನ್ನು ಹಾಗೂ ಲಿಂಗಾಯತ ಮುಖಂಡರನ್ನು ಅನಗತ್ಯ ಟೀಕಿಸುತ್ತಾ ರಾಜಕೀಯ ಮಾಡುತ್ತಿದ್ದಾರೆ.ಆದರೆ ಪಾಲಿ೯ಮೆಂತಿನಲ್ಲಿ ಕಾಂಗ್ರೆಸ್ಗೆ ರೋಧ ಪಕ್ಷದ ಸ್ಥಾನ ವಹಿಸಿಕೊಳ್ಳುವಸ್ಟು ಅ ಹ೯ತೆಯಿಲ್ಲ. ಕನಾ೯ಟಕದಲ್ಲಿ ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಮುಂತಾದವರು ಜೇ.ಏಚ್.ಪಾಟೀಲ್ ಮುಂತಾದವರು ಉತ್ತಮ ಆಡಳಿತ ನಡೆಸಿದ್ದಾರೆ ಆದರೆ ಅವರೆಲ್ಲ ಭ್ರಷ್ಟರಾ ? ಕಾಂಗ್ರೆಸ್ ಗೆ ದಮ್ ಇದ್ದರೆ ಲಿಂಗಾಯತರನ್ನು ಸಿ.ಎಂ.ಘೋಷಣೆ ಮಾಡಿ ಎಂದು ಸವಾಲು ಹಾಕಿದರು. ದೆಹಲಿಯಲ್ಲಿ ರಾಹುಲ್ ಗಾಂಧಿ ಹುಚ್ಚನ ನಂತೆ ವತಿ೯ಸಿದರೆ ಇಲ್ಲಿ ರಾಯರೆಡ್ಡಿ ತಿಕ್ಕಂತೆ ವತಿ೯ಸುವರು.ಎಲ್ಲ ಜನಾಂಗಕ್ಕೆ ಮೀಸಲು ಕೊಡಿ ಎಂದು ಹೋರಾಡಿದ ಶ್ರೇಯಸ್ಸು ತಮಗಿದೆ. ನನಗೇನು ಮಂತ್ರಿ ಬೇಡ ಎಲ್ಲ ರಿಗು ಮೀಸಲು ಕೊಡಿ ಎಂದು ಕೋರಿದ ಫಲವಾಗಿ ಇಂದು ಎಲ್ಲರಿಗೂ ಸಹಾಯಕವಾಗಿದೆ ಎಂದರು. ಹಿಂದೆ ತಾಲೂಕಿನ ಮುದೊಳದ ಸಮಾರಂಭದಲ್ಲಿ ಸಿಹಿ ಸುದ್ದಿ ಭರವಸೆ ನೀಡಿದ್ದೆ ಆ ಪ್ರಕಾರ, ೨ಡಿ ವೀರಶೈವ ,ಮರಾಠಾ ಮೀಸಲು ದೊರೆತಿದೆ. ಆಗಿಲ್ಲ.. ಡಿಕೆ ಹೇಳ್ತಾರೆ ಕಾಂಗ್ರೆಸ್ ಬಂದ್ರೆ ಮೀಸಲು ರದ್ದು ಮಾಡುತಿವಿ ಅಂತಾರೆ ಅವರಿಗೆ ಈ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕು. ಅಂಬೇಡ್ಕರ್ ಅವರು ಕಾಂಗ್ರೆಸ್ ಅನ್ನು ಎಂದು ಒಪ್ಪಲಿಲ್ಲ ಎಂಬುದು ಜನರು ಅಥ೯ಮಾಡಿಕೊಳ್ಳಬೇಕು .
ಈ ಚುನಾವಣೆಯಲ್ಲಿ ಸಚಿವರಾಗಿ ಉತ್ತಮ ಕಾಯ೯ಮಾಡಿದ ಹಾಲಪ್ಪ ಆಚಾರ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು. ಅಭ್ಯಥಿ೯ ಹಾಲಪ್ಪ ಆಚಾರ ಮಾತನಾಡಿ, ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಅವರ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ ಈ ಎಲ್ಲಾ ಅಂಶಗಳನ್ನು ಆಧರಿಸಿ ಕ್ಷೇತ್ರದಲ್ಲಿ ಬಿಜೆಪಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ.ಶಿಕ್ಷಣ ಮತ್ತು ನೀರಾವರಿ ಯೋಜನೆಗಳನ್ನು ಸಮಪ೯ಕ ಜಾರಿಗೊಳಿಸಿದೆ. i ಆಧಾರದ ಮೇಲೆ ಮತ್ತಷ್ಟು ಕೆಲಸ ಕಾಯ೯ಮಾಡಲು ಜನರು ತಮಗೆ ಬೆಂಬಲಿಸಿ ಆಶಿವ೯ದಿಸಬೇಕೆಂದು ಕೋರಿದರು. ಈ ಸಂದಭ೯ದಲ್ಲಿ ಅನೇಕ ಗಣ್ಯರು , ವಿವಿಧ ಘಟಕಗಳ ಮುಖಂಡರು ಹಾಜರಿದ್ದರು. ಇದಕ್ಕೂ ಮುನ್ನ ರೋಡ್ ಶೋ ನಡೆಸಿ ಮತಯಾಚಿಸಲಾಯಿತು.
One attachment • Scanned by Gmail