ಯರ್ರಂಗಳಿ ಗ್ರಾಮದಲ್ಲಿ ಗ್ರಾಮವಾಸ್ತವ್ಯಸಭೆ ; ಜಿಲ್ಲಾಧಿಕಾರಿ ಬೇಟಿ
ಸಾರ್ವಜನಿಕರ ಸಮಸ್ಯೆಗಳನ್ನು ವಿಳಂಬಮಾಡದೇ ಈಡೇರಿಸಲು ಅಧಿಕಾರಿಗಳಿಗೆ ಸೂಚನೆ- ಡಿಸಿ


ಸಂಜೆವಾಣಿ ವಾರ್ತೆ
ಕುರುಗೋಡು.ಸೆ.18 ಗ್ರಾಮೀಣ ಪ್ರದೇಶಗಳ ಸಾರ್ವಜನಿಕರ ಸಮಸ್ಯೆಗಳನ್ನು ಸಕ್ರಿಯವಾಗಿ ಈಡೇರಿಸುವಲ್ಲಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಮುತುವರ್ಜಿವಲ್ಲಿ ಪ್ರಮುಖ ಪಾತ್ರವಹಿಸಬೇಕು, ಇಲ್ಲದಿದ್ದರೆ ಅಂಥಹ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪವನ್‍ಕುಮಾರ್‍ಮಾಲಪಾಟಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಶನಿವಾರ ಸಮೀಪದ ಯರ್ರಂಗಳಿ ಗ್ರಾಮದ ಮೊರಾರ್ಜಿದೇಸಾಯಿ ವಸತಿ ಶಾಲೆ ಆವರಣದಲ್ಲಿ ಜಿಲ್ಲಾಡಳಿತ ಬಳ್ಳಾರಿ, ಜಿಪಂ. ಪಂಚಾಯಿತಿ ಹಾಗು ಕುರುಗೋಡು ತಾಲೂಕು ಅಡಳಿತ ನೆರವಿನೊಂದಿಗೆ  ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಗ್ರಾಮವಾಸ್ತವ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಸಾರ್ವಜನಿಕರಿಂದ ಗ್ರಾಮದಲ್ಲಿ ರಸ್ತೆನಿರ್ಮಾಣ, ಚರಂಡಿಸ್ವಚ್ಚತೆ, ವಿದ್ಯುತ್ ಸಮಸ್ಯೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಸಾರ್ವಜನಿಕರಿಂದ ದೂರುಬಂದಿದ್ದು, ಮುಂದಿನದಿನಗಳಲ್ಲಿ ಸಂಬಂದಪಟ್ಟ ಅಧಿಕಾರಿಗಳು ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಸೂಚಿಸಿದರು.
ಮಾಜಿ ತಾಪಂ. ಸದಸ್ಯ ಕೆ.ಬಸವರಾಜ್, ಎರ್ರಿಸ್ವಾಮಿ, ನಾಗಲಿಂಗ, ಬೀಮರೆಡ್ಡಿ ಇತರೆ ಗ್ರಾಮದ ಮುಖಂಡರು ಮಾತನಾಡಿ, ಗ್ರಾಮದಲ್ಲಿ ಹಾದುಹೋಗುವ ಹಳ್ಳವು ಬರೀ ಆಪು, ಇತರೆ ಪೊದೆಯಿಂದ ತುಂಬಿದೆ. ಅತಿಯಾದ ಮಳೆಯಿಂದಾಗಿ ಹಳ್ಳದ ನೀರು ಗ್ರಾಮದ ಮನೆಗಳಿಗೆ ನೀರು ನುಗ್ಗುತ್ತಿವೆ, ಜೊತೆಗೆ ಸೊಳ್ಳೆಗಳ ಹಾವಳಿ, ದುರ್ನಾತವಾಸನೆ ಹೆಚ್ಚಾಗಿದೆ ಎಂದು ದೂರಿದರು 9,10, 11 ಉಪಕಾಲುವೆ ಮೇಲೆ ರೈತರು ಹೋಗಬೇಕಾದರೆ ರಸ್ತೆಯಿಲ್ಲದೆ ತೀರ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಕಂದಾಯ, ಶಿಕ್ಷನ, ಅರೋಗ್ಯ, ಪಂಚಾಯತ್‍ರಾಜ್‍ಇಲಾಖೆ, ಕೆಎಸ್‍ಆರ್‍ಟಿಸಿ, ಸೇರಿದಂತೆ ಇತರೆ ವಿಷಯಗಳಿಗೆ ಸಂಬಂದಿಸಿದಂತೆ ಒಟ್ಟು 336 ಅರ್ಜಿಸಲ್ಲಿಕೆಯಲ್ಲಿ 262 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಯಿತು. 74 ಅರ್ಜಿಗಳು ಬಾಕಿ ಉಳಿದ ಅರ್ಜಿಗಳನ್ನು ಮುಂದಿನದಿನಗಳಲ್ಲಿ ಶೀಘ್ರವಾಗಿ ಈಡೇರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಯರ್ರಂಗಳಿ ಗ್ರಾಪಂ. ಅದ್ಯಕ್ಷ ಸುನಿಲ್‍ಕುಮರ್ ಅದ್ಯಕ್ಷತೆವಹಿಸಿದ್ದರು. ಬಳ್ಳಾರಿ ಅಪರಜಿಲ್ಲಾಧಿಕಾರಿ ಮಂಜುನಾಥ, ಸಹಾಯಕ ಆಯುಕ್ತ ಆಕಾಶಶಂಕರ್, ಕುರುಗೋಡು ತಹಶೀಲ್ದಾರ್ ರಾಘವೇಂದ್ರರಾವ್, ತಾಪಂ. ಕಾರ್ಯನಿರ್ವಾಹಕಅದಿಕಾರಿ ನಿರ್ಮಲ, ಉಪತಹಶೀಲ್ದಾರ್, ಯಾಕೂಬ್‍ಅಲಿ, ವಿಜಯಕುಮಾರ್, ಶಿವರತ್ನಮ್ಮ, ಆರ್‍ಐ. ಕರಿಬಸಪ್ಪ, ಸುರೇಶ, ವಿಎ. ನಾಗರಾಜ, ವಿಎ. ಮೌನೇಶ, ಪಿಡಿಒ. ಕೆ.ರಾಮಾರಾವ್, ಪ್ರಚಾರ್ಯ ಬಾದನಹಟ್ಟಿಎರ್ರಿಸ್ವಾಮಿ,  ಜಿಲ್ಲಾ ಮಟ್ಟ ಹಾಗು ತಾಲೂಕುಮಟ್ಟದ ಅಧಿಕಾರಿಗಳು, ಯರ್ರಂಗಳಿ ಗ್ರಾಪಂ. ಉಪಾದ್ಯಕ್ಷೆ, ಗ್ರಾಪಂ. ಎಲ್ಲಾ ಸದಸ್ಯರು, ಊರಿನ ಮುಖಂಡರು ಇದ್ದರು.

Attachments area