ಯರ್ರಂಗಳಿಯಲ್ಲಿ ರಾಜು ನಾಯಕ ಭರ್ಜರಿ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.25: ತಾಲೂಕಿನ ಕಂಪ್ಲಿ ಕ್ಷೇತ್ರದ ಯರ್ರಂಗಳಿ ಗ್ರಾಮದಲ್ಲಿ ಇಂದು ಜೆಡಿಎಸ್ ಅಭ್ಯರ್ಥಿ ರಾಜು ನಾಯಕ ಅವರು ಪಕ್ಷದ ಜಿಲ್ಲಾ ಅಧ್ಯಕ್ಷ ಸೋಮಲಿಂಗನಗೌಡ ಅವರೊಂದಿಗೆ ಭರ್ಜರಿ ಪ್ರಚಾರ ನಡೆಸಿದರು.
ರಾಜ್ಯದಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಸರ್ಕಾರ ಎಂದರೆ ಜೆಡಿಎಸ್ ಆಡಳಿತದಲ್ಲಿ‌ ಮಾತ್ರ. ಅದಕ್ಕಾಗಿ ಕ್ಷೇತ್ರದ ಜನತೆ ನನಗೆ ಮತ ನೀಡಿ. ಜೆಡಿಎಸ್ ನ್ನು ಅಧಿಕಾರಕ್ಕೆ ತನ್ನಿ. ಈ ಹಿಂದೆ ರೈತರ ಸಾಲ‌ಮನ್ನಾ ಮಾಡಿದ ಕುಮಾರಸ್ವಾಮಿ ಅವರು ಈ ಬಾರಿ ರೈತರನ್ನು ಸಾಲ‌ಮುಕ್ತ ಮಾಡುವಂತಹ ಯೋಜನೆಗಳನ್ನು ನೀಡಲುದ್ದಾರೆಂದರು. ಮತದಾರರು ಅವರ ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದರು.
ರಾಜು ನಾಯಕ್ ಸ್ಪರ್ಧೆ ಕಾಂಗ್ರೆಸ್ ಬಿಜೆಪಿ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಪಕ್ಷದ ಜಿಲ್ಲಾ ಅಧ್ಯಕ್ಷ ಪಿ.ಎಸ್.ಸೋಮಲಿಂಗನಗೌಡ ಸೇರಿದಂತೆ ಇತರೇ ಮುಖಂಡರು ಇದ್ದರು.

One attachment • Scanned by Gmail