
ಕೋಲಾರ,ನ,೯- ಯರ್‌ಗೋಳ್ ಡ್ಯಾಮ್ ನಿರ್ಮಾಣಕ್ಕೆ ಮೂಲ ಕಾರಣಕರ್ತರಾದ ಮಾಜಿ ಕೃಷಿ ಸಚಿವ ಕೆ. ಶ್ರೀನಿವಾಸಗೌಡರ ಹೆಸರನ್ನು ನಾಮಕರಿಸುವ ಮೂಲಕ ಅವರ ಶ್ರಮವನ್ನು ಗುರುತಿಸಬೇಕು , ನ,೧೧ ರಂದು ಉದ್ಘಾಟನ ಸಮಾರಂಭದಲ್ಲಿ ಶ್ರೀನಿವಾಸಗೌಡರನ್ನು ವಿಶೇಷವಾಗಿ ಆಹ್ವಾನಿಸಿ ಮುಖ್ಯ ಮಂತ್ರಿಗಳು ಸನ್ಮಾನಿಸ ಬೇಕೆಂದು ಡಿ.ಸಿ.ಸಿ. ಬ್ಯಾಂಕ್ ದಯಾನಂದ್ ಆಗ್ರಹ ಪಡೆಸಿದರು.
ನಗರದ ಸಹಕಾರ ಯೊನಿಯನ್ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡಿ ಕಳೆದ ೨೦೦೬-೦೭ನೇ ಸಾಲಿನಲ್ಲಿ ಕೋಲಾರದ ಶಾಸಕರಾದ ಕೆ. ಶ್ರೀನಿವಾಸಗೌಡರು ಯರ್‌ಗೋಳ್ ಡ್ಯಾಮ್ ಯೋಜನೆಯ ಅನುಷ್ಠನಕ್ಕೆ ಅಗಿನ ಸಮ್ಮೀಶ್ರ ಸರ್ಕಾರದಲ್ಲಿ ಮುಖ್ಯ ಮಂತ್ರಿಗಳಾಗಿದೆ ಹೆಚ್.ಡಿ.ಕುಮಾರಸ್ವಾಮಿ ಮೇಲೆ ಒತ್ತಡ ತಂದು ೧೦೦ ಕೋಟಿ ರೂ ಮಂಜೂರಾತಿ ಮಾಡಿಸಿ ಶಂಕು ಸ್ಥಾಪನೆಗೆ ಕಾರಣಕರ್ತರಾಗಿದ್ದರು ಎಂದರು.
ನಂತರದಲ್ಲಿ ಬಿ.ಎಸ್.ಯಡಿಯೂರಪ್ಪ ನವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮತ್ತೊಮ್ಮೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಅಗಾ ವರ್ತೂರು ಪ್ರಕಾಶ್ ನೀರಾವರಿ ನಿಗಮದ ಅಧ್ಯಕ್ಷರಾಗಿದ್ದು ಪೈಪ್‌ಗಳ ಕಾಮಗಾರಿ ಮಾಡಿಸಿದ್ದರು. ನಂತರದಲ್ಲಿ ಅರಣ್ಯ ಇಲಾಖೆ ಮತ್ತು ಪರಿಸರ ಇಲಾಖೆಯು ಕೇಂದ್ರದಲ್ಲಿ ಅಕ್ಷೇಪಣೆ ಸಲ್ಲಿಸುವ ಮೂಲಕ ತಾಂತ್ರಿಕ ಲೋಪದಿಂದಾಗಿ ಕೆಲ ಕಾಲ ಕಾಂಗಾರಿಗಳು ಸ್ಥಗಿತೊಂಡಿತ್ತು, ಅಧಿಕಾರ ಇಲ್ಲದ ಸಂದರ್ಭದಲ್ಲೂ ಯರ್‌ಗೋಳ್ ಯೋಜನೆಯನ್ನು ಮುಂದುವರೆಸಲು ಅಧಿಕಾರಗಳ ಮೇಲೆ ಹಾಗೂ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದರು. ಅದನ್ನು ಪೂರ್ಣಗೊಳಿಸಲು ಮತ್ತೆ ಕೆ. ಶ್ರೀನಿವಾಸಗೌಡರು ಶಾಸಕರಾದ ಅವಧಿಯಲ್ಲಿಯೇ ಎಂದ ಅವರು ಡ್ಯಾಮ್ ನಿರ್ಮಾಣದ ರೂವರಿಗಳಾಗಿದ್ದವರನ್ನು ಕೈ ಬಿಟ್ಟು ಉದ್ಘಾಟನೆಗೆ ಮುಂದಾಗಿರುವುದು ಖಂಡನೀಯ ಎಂದರು,
ಲೋಕೋಪಯೋಗಿ ಇಲಾಖೆಯ ಜೆ.ಇ. ಪಾಪೇಗೌಡರು ಬಂಗಾರಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಾಲೂರಿನ ಮಾರ್ಕೆಂಡಯ್ಯ ಕೆರೆಯ ಡ್ಯಾಮ್ ಕೋಡಿ ಹರಿದಾಗ ಯರ್‌ಗೋಳ್ ಮೂಲಕ ನೀರು ವ್ಯರ್ಥವಾಗಿ ತಮಿಳುನಾಡಿ ಹರಿದು ಹೋಗುತ್ತಿರುವುದನ್ನು ಕಂಡು ಈ ಭಾಗದಲ್ಲಿ ಡ್ಯಾಮ್ ನಿರ್ಮಿಸಿದಲ್ಲಿ ಕೋಲಾರದ ಜನತೆಗೆ ಕುಡಿಯುವ ನೀರು ಪೊರೈಸ ಬಹುದೆಂದು ತಮ್ಮ ಆತ್ಮಿಯರಾದ ಗುತ್ತಿಗೆದಾರ ರವಿ ಮತ್ತು ನಗರಸಭಾ ಸದಸ್ಯರಾಗಿದ್ದ ದಿವಂಗತ ತ್ಯಾಗರಾಜ್ ಅವರನ್ನು ಸ್ಥಳ ವೀಕ್ಷಣೆಗೆ ಕರೆದು ಕೊಂಡು ಹೋಗಿದ್ದರು. ನಂತರದಲ್ಲಿ ಮಾದ್ಯಮದವರಿಗೆ ಈ ಕುರಿತು ಮಾಹಿತಿ ನೀಡಿ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಶಾಸಕರ ಹಾಗೂ ಸರ್ಕಾರದ ಗಮನ ಸೆಳೆದರು ಎಂದರು.
ಶಾಸಕರಾಗಿದ್ದ ಕೆ.ಶ್ರೀನಿವಾಸಗೌಡರು ಸ್ಥಳ ಪರಿಶೀಲನೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ಮೊಲಕ ಸಮೀಕ್ಷೆ ನಡೆಸಿ ನೀಲಿ ನಕ್ಷೆಯನ್ನು ತಯಾರಿಸಿ ಅಗಿನ ಮುಖ್ಯ ಮಂತ್ರಿ ಧರ್ಮಸಿಂಗ್ ಮೇಲೆ ಒತ್ತಡ ಹೇರಿ ಕ್ರಿಯಾ ಯೋಜನೆ ರೂಪಿಸಿ ಅನುದಾನವನ್ನು ಬಿಡುಗಡೆ ಮಾಡಿಸಿದರು. ನಂತರದಲ್ಲಿ ಅಧಿಕಾರ ಹೋದ ಮೇಲೆಯೂ ಸಹ ಈ ಯೋಜನೆಯ ಬೆನ್ನು ಹತ್ತಿದ್ದರು. ತಾಂತ್ರಿಕ ದೋಷಗಳಿಂದ ಹಲವು ವರ್ಷಗಳು ಕಾಮಗಾರಿ ಸ್ಥಗಿತಗೊಂಡು ಅದನ್ನು ಸರಿಪಡೆಸಲು ಕೇಂದ್ರದಲ್ಲಿ ಜನಪ್ರತಿಧಿಗಳ ಮೂಲಕ ಇಲಾಖೆಯ ಮೇಲೆ ಒತ್ತಡ ಹೇರಿ ಅನುಮತಿ ದೊರೆಯುವಂತೆ ಮಾಡುವಲ್ಲಿ ಯಶಸ್ವಿಯಾದರು ಎಂದು ವಿವರಿಸಿದರು.
ನಂತರದಲ್ಲಿ ರಾಜ್ಯದಲ್ಲಿ ಮಾಜಿ ಸಭಾಪತಿ ರಮೇಶ್ ಕುಮಾರ್ ಸೇರಿದಂತೆ ಇತರೆ ಜನಪ್ರತಿನಿಧಿಗಳನ್ನು ಸಂಘಟಿಸಿ ಕೊಂಡು ಯೋಜನೆಯನ್ನು ಮುಂದುವರೆಯುವಂತೆ ಮಾಡಿದಾಗ ಮಾಲೂರು ಮತ್ತು ಬಂಗಾರಪೇಟೆಯನ್ನು ಕುಡಿಯುವ ನೀರು ಪೂರೈಸಲು ಸೇರ್ಪಡೆ ಮಾಡಲಾಯಿತು. ಇದರ ಜೂತೆಗೆ ೪೫ ಗ್ರಾಮಗಳಿಗೆ ಕುಡಿಯುವ ನೀರು ನೀಡಲು ಸಮ್ಮತಿಸಲಾಯಿತು ಎಂದರು.
ಪ್ರಶ್ನೆಯೊಂದಕ್ಕೆ ಇದಕ್ಕೂ ಮುನ್ನ ಸಚಿವರಾಗಿದ್ದ ಮಾಲೂರಿನ ಕೃಷ್ಣಯ್ಯ ಶೆಟ್ಟಿ ತಮ್ಮ ಕ್ಷೇತ್ರದ ಹಲವು ಗ್ರಾಮಗಳಿಗೆ ಮಾರ್ಕೆಂಡಯ್ಯ ಕೋಡಿಯಿಂದ ನೀರಿನ ಸಂರ್ಪಕವನ್ನು ಕಲ್ಪಿಸಿ ಕೊಂಡಾಗ ಇನ್ನು ಯರ್‌ಗೋಳ್‌ಗೆ ನೀರು ಹರಿಯುವ ಬಗ್ಗೆ ಅನುಮಾನಗಳು ವ್ಯಕ್ತವಾಗಿ ಹಲವು ತಿಂಗಳ ಕಾಲ ಚರ್ಚೆಗಳಾಗಿತ್ತು ಎಂದು ನೆನಪಿಸಿ ಕೊಂಡರು.
ಡ್ಯಾಮ್ ನಿರ್ಮಾಣದಲ್ಲಿ ಅಂದಾಜು ವೆಚ್ಚಗಳನ್ನು ಟೆಂಡರ್‌ದಾರರು ಪರಿಷ್ಕರಿಸಿದರು, ಹೆಚ್ಚಿನ ಕಾಲವಕಾಶವನ್ನು ಪಡೆದರು. ಈ ಯೋಜನೆಯೂ ಪೂರ್ಣಗೊಂಡು ಹಲವು ತಿಂಗಳು ಕಳೆದರೂ ಚುನಾವಣೆಯ ಹಿನ್ನಲೆಯಲ್ಲಿ ಉದ್ಘಾಟನೆ ವಿಳಂಬವಾಗಿತ್ತು. ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಕೋಲಾರದಿಂದ ಸ್ವರ್ಧಿಸಲು ಕೆ.ಶ್ರೀನಿವಾಸಗೌಡು ತಮ್ಮ ಸ್ಥಾನವನ್ನು ಬಿಟ್ಟು ಕೊಟ್ಟು ಕಾಂಗ್ರೇಸ್ ಪಕ್ಷವನ್ನು ಸೇರ್ಪಡೆಯಾದರು. ರಾಜಕಾರಣದಲ್ಲಿ ಪಕ್ಷಗಳ ಬದಲಾವಣೆ ಮಾಡುವುದು ಸಾಮಾನ್ಯ ವಿಷಯವಾದರೂ ಕ್ಷೇತ್ರದ ಅಭಿವೃದ್ದಿಗಾಗಿ ಶಾಸಕ ಕೆ. ಶ್ರೀನಿವಾಸಗೌಡರು ಕಾಲಕ್ಕೆ ತಕ್ಕಂತೆ ಬದಲಾಗುವುದು ಅನಿವಾರ್ಯವಾಗಿತ್ತು ಎಂದರು.
ಕೆ.ಶ್ರೀನಿವಾಸಗೌಡರ ಪ್ರಮಾಣಿಕತೆ, ನಿಷ್ಟೆ ಮಾದರಿಯಾಗಿದೆ. ಆಡಳಿತದಲ್ಲಿ ಯಾವೂದೇ ಭ್ರಷ್ಟಚಾರಗಳಿಗೆ ಅವಕಾಶ ಇಲ್ಲದಂತೆ ೪ ಭಾರಿ ಶುದ್ದವಾದ ಆಡಳಿತವನ್ನು ನೀಡಿದ್ದಾರೆ. ಇಪ್ಕೋ ವಿಮಾ ಕಂಪನಿಯ ಅಧ್ಯಕ್ಷರಾಗಿ ದೀರ್ಘಕಾಲ ಆಡಳಿತ ನಡೆಸಿರುವ ದಾಖಲೆಯ ಸಂಗತಿಯಾಗಿದೆ. ಇಂಥವರನ್ನು ಗುರುತಿಸಿ ಸನ್ಮನಿಸಿ ಗೌರವಿಸಿದಲ್ಲಿ ಇಂದಿನ ರಾಜಕಾರಣದ ಯುವ ಪೀಳಿಗೆ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ. ಶ್ರೀನಿವಾಸ ಗೌಡರ ಬೆಂಬಲಿಗರಾದ ಸಹಕಾರಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಮೂರಂಡಹಳ್ಳಿ ಗೋಪಾಲ್, ಊರಿಗಿಲಿ ರುದ್ರಸ್ವಾಮಿ, ನಿರ್ದೇಶಕ ಅಣ್ಣೇಹಳ್ಳಿ ನಾಗರಾಜ್, ಬೆಗ್ಲಿ ಸೂಸೈಟಿ ಅಧ್ಯಕ್ಷ ಚೋಳಘಟ್ಟ ಸೀನಪ್ಪ , ನಗರಸಭೆ ಮಾಜಿ ಸದಸ್ಯ ಟಮಕ ವೆಂಕಟೇಶ್‌ಪತಿ, ಮುಖಂಡರಾದ ಆಟೋನಾರಾಯಣಸ್ವಾಮಿ, ಕಾರಂಜಿಕಟ್ಟೆ ರಾಮಣ್ಣ ಉಪಸ್ಥಿತರಿದ್ದರು.